ಕಲಬುರಗಿ| ಝೀ ಟಿವಿ ಕನ್ನಡ ವಾಹಿನಿಯ ಸರಿಗಮಪ ವಿಜೇತೆ ಶಿವಾನಿ ಸ್ವಾಮಿಗೆ ಸತ್ಕಾರ

Date:

Share post:

ಕಲಬುರಗಿ : ಕಲ್ಯಾಣ ಕರ್ನಾಟಕ ಭಾಗದ ಸಂಗೀತ ಕ್ಷೇತ್ರದ ಪ್ರತಿಭೆ ಕು. ಶಿವಾನಿ ಸ್ವಾಮಿ ಅವರಿಗೆ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ನಗರದ ಕನ್ನಡ ಭವನದಲ್ಲಿನ ಕಲಾ ಸೌಧದಲ್ಲಿ ಸತ್ಕರಿಸಿ ಗೌರವಿಸಲಾಯಿತು.

ಇತ್ತೀಚೆಗೆ ಝೀ ಟಿವಿ ಕನ್ನಡ ವಾಹಿನಿಯಲ್ಲಿ ಸರಿಗಮಪ ಸಂಗೀತ ಸ್ಪರ್ಧೆಯಲ್ಲಿ ಅಚಿತಿಮ ಸುತ್ತಿನಲ್ಲಿನ ಪ್ರಥಮ ಸ್ಥಾನ ಪಡೆದುಕೊಂಡಿದ್ದಾರೆ.

ಸೋಮವಾರ ಕನ್ನಡ ಭವನದಂಗಳ:ಕ್ಕೆ ಆಗಮಿಸಿದ ಕು. ಶಿವಾನಿ ಸ್ವಾಮಿ ಹಾಗೂ ಪಾಲಕರನ್ನು ಆತ್ಮೀಯವಾಗಿ ಸ್ವಾಗತಿಸಿ ಅಭಿನಂದಿಸಲಾಯಿತು.

ಗೌರವ ಸಮ್ಮಾನ ಸ್ವೀಕರಿಸಿ ಮಾತನಾಡಿದ ಕು. ಶಿವಾನಿ ಸ್ವಾಮಿ, ಝೀ ಟಿವಿ ಸ್ಪರ್ಧೆಯಲ್ಲಿ ಭಾಗವಹಿಸುವುದೇ ತುಂಬಾ ಖುಷಿ ಅನಿಸುತ್ತಿತ್ತು. ಯಾವ ಘಳಿಗೆಯಲ್ಲಿ ಫಲಿತಾಂಶ ಏನಾಗುತ್ತಿತೆಂಬ ಕುತೂಹಲ ಕಾಡುತ್ತಿತ್ತು. ಕೊನೆಗೆ ಈ ಭಾಗದ ಶರಣರ, ಸಂತತರ ಆಶೀರ್ವಾದದಿಂದ ಗೆಲುವನ್ನು ಮುಡಿಗೇರಿಸಿಕೊಂಡು ಅಂಭ್ರಮಿಸಿದೆ. ಇದು ಕನ್ನಡಿಗರ ಗೆಲುವು ಎಂದು ಸಂತಸ ವ್ಯಕ್ತಪಡಿಸಿದರು.

ಜಿಲ್ಲಾ ಕಸಾಪ ಅಧ್ಯಕ್ಷ ವಿಜಯಕುಮಾರ ಪಾಟೀಲ ತೇಗಲತಿಪ್ಪಿ ಮಾತನಾಡಿ, ಕಲ್ಯಾಣ ಕರ್ನಾಟಕ ಭಾಗದಲ್ಲಿ ಪ್ರತಿಭೆಗಳಿಗೇನೂ ಕೊರತೆಯಿಲ್ಲ. ಆದರೆ ಅವಕಾಶ ಕೊರತೆ ಇದ್ದು, ಸೂಕ್ತ ವೇದಿಕೆ ಒದಗಿಸಿ ಪ್ರೋತ್ಸಾಹಿಸಬೇಕಾಗಿದೆ. ಸರಿಗಮಪ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆಯುವ ಮೂಲಕ ಈ ಭಾಗದ ಕೀರ್ತಿ ನಾಡಿನುದ್ದಗಲಕ್ಕೂ ಹೆಚ್ಚಿಸಿದ್ದಾರೆ. ಬರುವ ದಿನಗಳಲ್ಲಿ ರಾಷ್ಟç ಮಟ್ಟಕ್ಕೆ ಎತ್ತರಿಸಲು ಎಂದು ಶುಭ ಹಾರೈಸಿದರು.

ಸಂಗೀತ ಕಲಾವಿದರಾದ ಶಿವದಾಸ ಸ್ವಾಮಿ, ಕವಿತಾ ಸ್ವಾಮಿ, ಸಿದ್ಧಲಿಂಗ ಜಿ ಬಾಳಿ, ಸಾಹಿತ್ಯ ಪ್ರೇರಕರಾದ ಜಗದೀಶ ಮರಪಳ್ಳಿ, ಎಚ್.ಬಿ. ಪಾಟೀಲ, ಜಿಲ್ಲಾ ಕಸಾಪ ದ ಗೌರವ ಕಾರ್ಯದರ್ಶಿಗಳಾದ ಶಿವರಾಜ ಅಂಡಗಿ, ಧರ್ಮಣ್ಣ ಎಚ್. ಧನ್ನಿ, ಕೋಶಾಧ್ಯಕ್ಷ ಶರಣರಾಜ ಛಪ್ಪರಬಂದಿ, ಸರಕಾರಿ ನೌಕರರ ಸಂಘದ ರಾಜ್ಯ ಸಮಿತಿ ಸದಸ್ಯ ಧರ್ಮರಾಜ ಜವಳಿ ಮಾತನಾಡಿದರು.

ಪ್ರಮುಖರಾದ ರವೀಂದ್ರಕುಮಾರ ಭಂಟನಳ್ಳಿ, ಅಮೃತಪ್ಪ ಅಣೂರ ಕವಿ, ದಿನೇಶ ಮದಕರಿ, ರಾಜೇಂದ್ರ ಮಾಡಬೂಳ, ರವಿಕುಮಾರ ಶಹಾಪುರಕರ್, ಶಿವಲೀಲಾ ಕಲಗುರ್ಕಿ, ಜ್ಯೋತಿ ಕೋಟನೂರ, ಪ್ರಭವ ಪಟ್ಟಣಕರ್, ಡಾ. ಎಸ್ ಎಂ ನೀಲಾ, ಮಂಜುನಾಥ ಕಂಬಾಳಿಮಠ, ಮಲ್ಲಿನಾಥ ಸಂಗಶೆಟ್ಟಿ, ಸುನೀತಾ ದೊಡ್ಮನಿ, ಮಹೇಶ ಬಾಳಿ, ಶರಣಬಸಪ್ಪ ಕೋಬಾಳ, ರೇವಣಸಿದ್ದಪ್ಪ ಜೀವಣಗಿ, ಶಿವಶರಣ ಬಡದಾಳ, ಶರಣು ಹಾಗರಗುಂಡಗಿ, ಎಂ.ಎನ್. ಸುಗಂಧಿ, ಶಿವಾನಂದ ಸುರವಸೆ, ಸಂತೋಷ ಕುಡಳ್ಳಿ, ರೇವಯ್ಯಾ ಸ್ವಾಮಿ, ಅನೀಲಕುಮಾರ ಪಾಟೀಲ ತೇಗಲತಿಪ್ಪಿ, ಸೋಮಶೇಖರ ನಂದಿಧ್ವಜ, ಶ್ರೀಕಾಂತ ಪಾಟೀಲ, ಅನುಪಮಾ ಅಪಗುಂಡೆ, ಶ್ರೀದೇವಿ ಕೋರೆ ಸೇರಿದಂತೆ ಅನೇಕ ಗಣ್ಯರು ಭಾಗವಹಿಸಿದ್ದರು.

Share post:

spot_imgspot_img

Popular

More like this
Related

ಕಲಬುರಗಿ| ಜನಜಾಗೃತಿಯಿಂದ ಸಾಂಕ್ರಾಮಿಕ ರೋಗಗಳ ನಿರ್ಮೂಲನೆ ಸಾಧ್ಯ: ಡಾ.ಶರಬಸಪ್ಪ ಕ್ಯಾತನಾಳ

ಕಲಬುರಗಿ: ಸೊಳ್ಳೆಗಳಿಂದ ಹರಡುವಂತಹ ರೋಗಗಳಾದ ಡೆಂಗ್ಯೂ, ಚಿಕೂನ ಗುನ್ಯಾ, ಆನೆಕಾಲು ರೋಗ,...

ಕಲಬುರಗಿ| ಪರಿಸರ ಸ್ನೇಹಿ ಮಣ್ಣಿನ ಗಣಪ ಪ್ರತಿಷ್ಠಾಪಿಸಿ: ಜಿಲ್ಲಾಧಿಕಾರಿ ಬಿ.ಫೌಜಿಯಾ

ಕಲಬುರಗಿ: ಸೂಫಿ-ಸಂತರ ನಾಡು ಕಲಬುರಗಿ ಶಾಂತಿ-ಸೌಹಾರ್ದತೆಗೆ ಹೆಸರುವಾಸಿಯಾಗಿದ್ದು, ಗಣೇಶ ಚತುರ್ಥಿ ಮತ್ತು...

ಕಲಬುರಗಿ| ಅತೀವೃಷ್ಟಿ ಪೀಡಿತ ಪ್ರದೇಶ ಘೋಷಿಸುವಂತೆ ಮಲ್ಲಿನಾಥ ನಾಗನಹಳ್ಳಿ ಆಗ್ರಹ

ಕಲಬುರಗಿ: ಕೋಟನೂರ್, ನಾಗನಹಳ್ಳಿ, ಉದನೂರು, ನಂದಿಕೂರ್, ಸೀತನೂರ್ ಹಾಗೂ ಕಲಬುರ್ಗಿ ದಕ್ಷಿಣ...

ಕಲಬುರಗಿ| ಮಳೆಯಿಂದ ಬೆಳೆ ನಷ್ಟ, ಬಾವಿಯಲ್ಲೇ ನೇಣು ಬಿಗಿದುಕೊಂಡು ರೈತ ಆತ್ಮಹತ್ಯೆ

ಕಲಬುರಗಿ: ಜಿಲ್ಲೆಯಲ್ಲಿ ಸಾಲಬಾಧೆ ತಾಳಲಾರದೆ ರೈತ ನೇಣಿಗೆ ಶರಣಾಗಿರುವ ಘಟನೆ ನಡೆದಿದೆ....