ಕಲಬುರಗಿ| ಜ್ಞಾನ ಜೀವನ ಪರ್ಯಂತ ಇರುವುದು: ಪಂಡಿತ್ ಬುದಿಸ್ವಾಮಿ

Date:

Share post:

ಕಲಬುರಗಿ : ನಮ್ಮ ಜೀವನ ಪಯರ್ಂತ ನಮ್ಮ ಜೊತೆ ಇರುವುದು ಜ್ಞಾನ, ಅಂತಹ ಜನವನ್ನು ನೀಡುತ್ತಿರುವ ಶರಣಬಸವ ವಿಶ್ವ ವಿದ್ಯಾಲಯ ಕಾರ್ಯ ಶ್ಲಾಘನಿಯ ಎಂದು ಹುಡಿಗೇರೆಯ ದೈವಾ ಸಂಸ್ಕøತಿ ಸಂಸ್ಥಾನದ ಸಂಸ್ಥಾಪಕ ಅಧ್ಯಕ್ಷರಾದ ಜ್ಯೋತಿಷ್ಯ ಜ್ಞಾನಿ ಪಂಡಿತ್ ಬುದಿಸ್ವಾಮಿ ಅಭಿಪ್ರಾಯಪಟ್ಟರು.

ನಗರದ ಶರಣಬಸವ ವಿಶ್ವವಿದ್ಯಾಲಯದ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ಅಧ್ಯಯನ ಹಾಗೂ ಸಂಶೋಧನ ವಿಭಾಗ ಅನುಭವ ಮಂಟಪದಲ್ಲಿ ನಡೆದ ವೇದ ವಿಜ್ಞಾನ ಮತ್ತು ಸಂಖ್ಯಾಶಾಸ್ತ್ರ ಮಹತ್ವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಎಲ್ಲ ವಿದ್ಯಾರ್ಥಿಗಳು ಜ್ಯೋತಿಷ್ಯ ಜ್ಞಾನವನ್ನು ಸರಿಯಾದ ರೀತಿಯಲ್ಲಿ ಕಲಿತು ಸಂಸ್ಥಾನದ ಹೆಸರು ಉತ್ತುಂಗಗೊಳಿಸಬೇಕು ಎಂದು ಹೇಳಿದರು.

ಖ್ಯಾತ ವೈದ್ಯರಾದ ಡಾ. ಉಮಾದೇಶಮುಖ ಮಾತನಾಡಿ ನಮ್ಮ ತಂದೆಯವರು ಮತ್ತು ನಮ್ಮ ಪೂರ್ವಜರು ಜ್ಯೋತಿಷ್ಯ ಜ್ಞಾನವನ್ನು ಹೊಂದಿದವರು. ಹೀಗಾಗಿ ಸಹಜವಾಗಿಯೇ ಜ್ಯೋತಿಷ್ಯ ಜ್ಞಾನದ ಹಸಿವು ನಮ್ಮಲ್ಲಿ ಬಂದಿದೆ ಎಂದರು.

ಸಮಾಜ ವಿಜ್ಞಾನ ನಿಕಾಯಕರಾದ ಟಿ.ವಿ. ಶಿವಾನಂದನ್ ಮಾತನಾಡಿ, ಜ್ಯೋತಿಷ್ಯ ಶಾಸ್ತ್ರದ ಕಲಿಕೆಯ ವಿಷಯ ಈ ಭಾಗದ ಯಾವ ವಿಶ್ವವಿದ್ಯಾಲಯದಲ್ಲಿಯೂ ಇಲ್ಲ . ಕೇವಲ ಶರಣಬಸವ ವಿಶ್ವವಿದ್ಯಾಲಯ ಮಾತ್ರ ಇದೆ ಎಂಬ ಹೆಮ್ಮೆ ಇದೆ. ಇಂದು ಕೇವಲ ಆರು ತಿಂಗಳ ಕೋರ್ಸ ಆರಂಭಿಸಿದ್ದೇವೆ. ಭವಿಷ್ಯತ್ತಿನಲ್ಲಿ ಸ್ನಾತಕೋತ್ತರ ಕಲಿಕೆ ಆರಂಭಿಸುವ ಯೋಜನೆ ಇದೆ ಎಂದರು.

ವೈದಿಕ ವಿಭಾಗದ ಮುಖ್ಯಸ್ಥರಾದ ಡಾ. ಚಂಪಾರಾಣಿ ಮಾತನಾಡಿದರು. ಪ್ರೊ. ಸಿದ್ದಮ್ಮ ಕಾರ್ಯಕ್ರಮ ನಿರೂಪಿಸಿದರು. ಪತ್ರಿಕೋದ್ಯಮ ವಿಭಾಗದ ಚೇರಪರ್ಸನ ಡಾ. ಸುನಿತಾ ಬಿ. ಪಾಟೀಲ, ಪ್ರೊ. ಅಶ್ವಿನಿ ರೆಡ್ಡಿ, ಅನಿತಾ ಗೈದನಕರ್, ಡಾ. ಸವಿತಾ ಪಾಟೀಲ, ಮಹೇಶ ರಾವೂರ, ಡಾ. ನಾಗಬಸವಣ್ಣ ಗುರಾಗೋಳ ಇತರರು ಉಪಸ್ಥಿತಿರಿದ್ದರು.

Share post:

spot_imgspot_img

Popular

More like this
Related

ಕಲಬುರಗಿ| ಪರಿಸರ ಸ್ನೇಹಿ ಮಣ್ಣಿನ ಗಣಪ ಪ್ರತಿಷ್ಠಾಪಿಸಿ: ಜಿಲ್ಲಾಧಿಕಾರಿ ಬಿ.ಫೌಜಿಯಾ

ಕಲಬುರಗಿ: ಸೂಫಿ-ಸಂತರ ನಾಡು ಕಲಬುರಗಿ ಶಾಂತಿ-ಸೌಹಾರ್ದತೆಗೆ ಹೆಸರುವಾಸಿಯಾಗಿದ್ದು, ಗಣೇಶ ಚತುರ್ಥಿ ಮತ್ತು...

ಕಲಬುರಗಿ| ಅತೀವೃಷ್ಟಿ ಪೀಡಿತ ಪ್ರದೇಶ ಘೋಷಿಸುವಂತೆ ಮಲ್ಲಿನಾಥ ನಾಗನಹಳ್ಳಿ ಆಗ್ರಹ

ಕಲಬುರಗಿ: ಕೋಟನೂರ್, ನಾಗನಹಳ್ಳಿ, ಉದನೂರು, ನಂದಿಕೂರ್, ಸೀತನೂರ್ ಹಾಗೂ ಕಲಬುರ್ಗಿ ದಕ್ಷಿಣ...

ಕಲಬುರಗಿ| ಮಳೆಯಿಂದ ಬೆಳೆ ನಷ್ಟ, ಬಾವಿಯಲ್ಲೇ ನೇಣು ಬಿಗಿದುಕೊಂಡು ರೈತ ಆತ್ಮಹತ್ಯೆ

ಕಲಬುರಗಿ: ಜಿಲ್ಲೆಯಲ್ಲಿ ಸಾಲಬಾಧೆ ತಾಳಲಾರದೆ ರೈತ ನೇಣಿಗೆ ಶರಣಾಗಿರುವ ಘಟನೆ ನಡೆದಿದೆ....

ಕಲಬುರಗಿ| ಕಾಂಗ್ರೆಸ್ ಪಕ್ಷಕ್ಕೆ ಭರ್ಜರಿ ಜಯ; ಕೈ ತೆಕ್ಕೆಗೆ ಕಾಳಗಿ ಪಟ್ಟಣ ಪಂಚಾಯತ್ 

ಕಲಬುರಗಿ: ಕಾಳಗಿ ಪಟ್ಟಣ ಪಂಚಾಯತ್ ನ ಮೊದಲ ಸಾರ್ವತ್ರಿಕ ಚುನಾವಣೆಯಲ್ಲಿ 11...