ಕಲಬುರಗಿ| ಕಿಣ್ಣಿಸುಲ್ತಾನ ಗ್ರಾಪಂ ಉಪಾಧ್ಯಕ್ಷರಾಗಿ ಮಥುರಾಬಾಯಿ ಅವಿರೋಧ ಆಯ್ಕೆ

Date:

Share post:

ಕಲಬುರಗಿ: ಆಳಂದ ತಾಲೂಕಿನ ಕಿಣ್ಣಿಸುಲ್ತಾನ ಗ್ರಾಮ ಪಂಚಾಯತಿ ಉಪಾಧ್ಯಕ್ಷ ಎಸ್ಸಿ ಮೀಸಲು ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಕಿಣ್ಣಿಸುಲ್ತಾನ ತಾಂಡಾದ ಬಿಜೆಪಿ ಬೆಂಬಲಿತ ಸದಸ್ಯೆ ಮಥುರಾಬಾಯಿ ಸುಭಾಷ ಚವ್ಹಾಣ ಅವರು ಶುಕ್ರವಾರ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

 

ತಹಸೀಲ್ದಾರ ಅಣ್ಣಾರಾವ್ ಪಾಟೀಲ ಅವರು ಚುನಾವಣೆ ಪ್ರಕ್ರಿಯೆ ನಡೆಸಿಕೊಟ್ಟರು. ಉಪಾಧ್ಯಕ್ಷ ಸ್ಥಾನಕ್ಕೆ ಸದಸ್ಯೆ ಮಥುರಾಬಾಯಿ ಚವ್ಹಾಣ ಅವರ ಹೊರತುಪಡಿಸಿ ಯಾರೊಬ್ಬರ ನಾಮಪತ್ರ ಸಲ್ಲಿಕೆ ಮಾಡಿರುವುದರಿಂದ ಮಥುರಾಬಾಯಿ ಅವರನ್ನು ಅವಿರೋಧವನ್ನಾಗಿ ಚುನಾವಣಾಧಿಕಾರಿಗಳು ಘೋಷಿಸಿದರು. ಪಿಡಿಒ ರಮೇಶ ಪ್ಯಾಟಿ, ಗ್ರಾಮ ಆಡಳಿತಾಧಿಕಾರಿ ದತ್ತಾ ರಾಠೋಡ, ಕಂದಾಯ ನಿರೀಕ್ಷಿಕ ಅಲ್ಲಾವೋದ್ದೀನ ಶೇಖ ಚುನಾವಣೆ ಪ್ರಕ್ರಿಯೆಗೆ ಸಹಕರಿಸಿದರು.

ಬಳಿಕ ನೂತನ ಉಪಾಧ್ಯಕ್ಷರಿಗೆ ಗ್ರಾಪಂ ಅಧ್ಯಕ್ಷ ಮಹಿಬೂಬ ಭಾಷಾ ಶೇಖ ಅವರು ಸನ್ಮಾನಿಸಿ ಅಭಿವೃದ್ಧಿಗೆ ಸರ್ವರ ಸಹಕಾರ ಅಗತ್ಯವಾಗಿದೆ. ಎಲ್ಲರೂ ಕೂಡಿ ಉಳಿದಷ್ಟು ಅವಧಿಯಲ್ಲಿ ಕಾಮಗಾರಿ ಕೈಗೊಂಡು ಜನರಿಗೆ ಅನುಕೂಲ ಮಾಡಿಕೊಡೋಣಾ ಎಂದು ಹೇಳಿದರು.

ಈ ಸಂದರ್ಭಧಲ್ಲಿ ಗ್ರಾಪಂ ಮಾಜಿ ಅಧ್ಯಕ್ಷೆ ನಾಗಮ್ಮ ಮೂಲಗೆ, ಸದಸ್ಯ ಕೃಷ್ಣಾ ಕಾಂಬಳೆ, ಸುರೇಶ ಕದರಗೆ, ಕುಪ್ಪಣ್ಣಾ ವಡಗಾಂವ, ಶಾಂತು ಶಹಾಪೂರೆ, ಶಿವರಾಯ ಪೂಜಾರಿ, ಲಲಿತಾ ಮೋದೆ, ಆಶಾ ಧೂಳೆ, ಶಿವುಪುತ್ರ ಪೂಜಾರಿ, ಶರಣು ಕುಂಬಾರ ಸೇರಿದಂತೆ ಗ್ರಾಮದ ಮುಖಂಡ ಪಂಡಿತರಾವ್ ಪಾಟೀಲ, ರಾಜು ಪಾಟೀಲ, ಬಸವರಾಜ ಕೇರೂರ, ನಾಗೇಂದ್ರ ಚನ್ನಶಟ್ಟಿ, ಕಲ್ಯಾಣಿ ಶೃಂಗೇರಿ, ನಿತೀನ ಚವ್ಹಾಣ, ಗುತ್ತಿಗೆದಾರ ಮಹಾದೇವ ಲಕುಕಳ್ಳೆ ಅನೇಕರು ಉಪಸ್ಥಿತರಿದ್ದರು.

Share post:

spot_imgspot_img

Popular

More like this
Related

ಕಲಬುರಗಿ| ಜನಜಾಗೃತಿಯಿಂದ ಸಾಂಕ್ರಾಮಿಕ ರೋಗಗಳ ನಿರ್ಮೂಲನೆ ಸಾಧ್ಯ: ಡಾ.ಶರಬಸಪ್ಪ ಕ್ಯಾತನಾಳ

ಕಲಬುರಗಿ: ಸೊಳ್ಳೆಗಳಿಂದ ಹರಡುವಂತಹ ರೋಗಗಳಾದ ಡೆಂಗ್ಯೂ, ಚಿಕೂನ ಗುನ್ಯಾ, ಆನೆಕಾಲು ರೋಗ,...

ಕಲಬುರಗಿ| ಪರಿಸರ ಸ್ನೇಹಿ ಮಣ್ಣಿನ ಗಣಪ ಪ್ರತಿಷ್ಠಾಪಿಸಿ: ಜಿಲ್ಲಾಧಿಕಾರಿ ಬಿ.ಫೌಜಿಯಾ

ಕಲಬುರಗಿ: ಸೂಫಿ-ಸಂತರ ನಾಡು ಕಲಬುರಗಿ ಶಾಂತಿ-ಸೌಹಾರ್ದತೆಗೆ ಹೆಸರುವಾಸಿಯಾಗಿದ್ದು, ಗಣೇಶ ಚತುರ್ಥಿ ಮತ್ತು...

ಕಲಬುರಗಿ| ಅತೀವೃಷ್ಟಿ ಪೀಡಿತ ಪ್ರದೇಶ ಘೋಷಿಸುವಂತೆ ಮಲ್ಲಿನಾಥ ನಾಗನಹಳ್ಳಿ ಆಗ್ರಹ

ಕಲಬುರಗಿ: ಕೋಟನೂರ್, ನಾಗನಹಳ್ಳಿ, ಉದನೂರು, ನಂದಿಕೂರ್, ಸೀತನೂರ್ ಹಾಗೂ ಕಲಬುರ್ಗಿ ದಕ್ಷಿಣ...

ಕಲಬುರಗಿ| ಮಳೆಯಿಂದ ಬೆಳೆ ನಷ್ಟ, ಬಾವಿಯಲ್ಲೇ ನೇಣು ಬಿಗಿದುಕೊಂಡು ರೈತ ಆತ್ಮಹತ್ಯೆ

ಕಲಬುರಗಿ: ಜಿಲ್ಲೆಯಲ್ಲಿ ಸಾಲಬಾಧೆ ತಾಳಲಾರದೆ ರೈತ ನೇಣಿಗೆ ಶರಣಾಗಿರುವ ಘಟನೆ ನಡೆದಿದೆ....