ಕಲಬುರಗಿ| ಪ್ರೊ.ಎ.ಎಚ್.ರಾಜಾಸಾಬ್ ಗೆ ಅಭಿನಂದನಾ ಸಮಾರಂಭ

Date:

Share post:

ಕಲಬುರಗಿ: ನಗರದ ಶ್ರೀ ವಿದ್ಯಾ ಪದವಿ ಪೂರ್ವ, ಪದವಿ ವಿಜ್ಞಾನ ಹಾಗೂ ವಾಣಿಜ್ಯ ಮಹಿಳಾ ಮಹಾವಿದ್ಯಾಲಯದಲ್ಲಿ ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿ ನೂತನ ಅಧ್ಯಕ್ಷರಾಗಿ ನೇಮಕಗೊಂಡ ಪ್ರೊ..ಎ.ಎಚ್.ರಾಜಾಸಾಬ್ ಅವರಿಗೆ ಅಭಿನಂದನಾ ಸಮಾರಂಭ ಜರುಗಿತು.

ಅಭಿನಂದನೆ ಸ್ವೀಕರಿಸಿ ಮಾತನಾಡಿದ ಪ್ರೊ. ಎ.ಹೆಚ್ ರಾಜಸಾಬ್ ಅವರು, ವಿಜ್ಞಾನದ ಪ್ರಗತಿಯ ರಾಷ್ಟ್ರದ ಪ್ರಗತಿ ಒಂದು ರಾಷ್ಟ್ರದ ಅಭಿವೃದ್ಧಿ ವಿಜ್ಞಾನ ಕ್ಷೇತ್ರವನ್ನು ಅವಲಂಬಿಸಿದೆ, ವಿಜ್ಞಾನದ ಪ್ರಗತಿಯ ರಾಷ್ಟ್ರದ ಪ್ರಗತಿ ಎಂದು ಹೇಳಿದರು.

ರಾಜ್ಯದಲ್ಲಿ ವಿಜ್ಞಾನವನ್ನು ಜನಪ್ರಿಯಗೊಳಿಸುವುದರ ಜೊತೆಗೆ ಜನಸಾಮಾನ್ಯರಲ್ಲಿ ವೈಜ್ಞಾನಿಕ ಮನೋಭಾವನೆ ಮೂಡಿಸುವುದು ಅತ್ಯಂತ ಮುಖ್ಯವಾಗಿದೆ. ಸಾಕಷ್ಟು ವಿಜ್ಞಾನ ಕ್ಷೇತ್ರದಲ್ಲಿ ಪ್ರಗತಿ ಸಾಧಿಸಿದರೂ ಸಹ ಅಲ್ಲಲ್ಲಿ ಮೌಢ್ಯ ಕಂದಾಚಾರ ಪ್ರಕರಣಗಳು ಇನ್ನು ಜೀವಂತವಾಗಿರುವುದು ದುರಾದೃಷ್ಟಕರ ಎಂದು ಅಭಿಪ್ರಾಯಪಟ್ಟರು.

ರಾಜ್ಯದ ಜನರಲ್ಲಿ ವಿಜ್ಞಾನವನ್ನು ಪ್ರಚಾರ ಮಾಡಿ ವೈಜ್ಞಾನಿಕ ಬೆಳವಣಿಗೆಗೆ ಉತ್ತೇಜನ ನೀಡುವುದು ತುಂಬಾ ಅಗತ್ಯವಿದೆ ಎಂದರು.

ಗಿರೀಶ್ ಕಡ್ಲೆವಾಡ ಮಾತನಾಡಿ, ಮಣ್ಣು ನೀರು ಗಾಳಿ ಕಲುಷಿತಕೊಂಡಿದೆ, ಪರಿಸರದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿದೆ ಎಲ್ಲರೂ ಸೇರಿ ಪರಿಸರ ಸಂರಕ್ಷಣೆಗೆ ಮುಂದಾಗಬೇಕು ಎಂದರು.

ವೇದಿಕೆ ಮೇಲೆ ಡಾ. ನರೇಂದ್ರ ಬಡಶೇಶಿ, ಡಾ. ಕವಿರಾಜ್ ಪಾಟೀಲ್ ಇದ್ದರು. ಕಾರ್ಯಕ್ರಮದಲ್ಲಿ ಡಾ. ಪ್ರಭಾ ಎಸ್ಎನ್, ಡಾ.ಗತಪ್ನಡಗಿ, ಸಂಗಮೇಶ್ ಹಿರೇಮಠ್, ಡಾ.ಸರಸ್ವತಿ, ಡಾ. ಲತಾ ಕರೆಕಲ್, ಡಾ. ಜಗನ್ನಾಥ್ ಡೆಂಗಿ, ಅಸ್ರ ಯಾಸ್ಮಿನ್, ಮಹೇಶ್ ದೆವಣಿ ಸೇರಿದಂತೆ ಮುಂತಾದ ಪ್ರಮುಖರು ಭಾಗವಹಿಸಿದ್ದರು. ಡಾ. ರಾಜು ಮೋದಿ ಸ್ವಾಗತಿಸಿದರು. ಮಾಣಿಕರಾವ ಸಕ್ಪಲ್ ನಿರ್ವಹಿಸಿದರು.

Share post:

spot_imgspot_img

Popular

More like this
Related

ಕಲಬುರಗಿ| ಸಾರಾಯಿ ಕುಡಿಯಲು ಹಣ ಕೊಡದಿದ್ದಕ್ಕೆ ಪತ್ನಿ ಕೊಲೆ; ಪತಿಗೆ ಜೀವಾವಧಿ ಶಿಕ್ಷೆ, ₹50 ಸಾವಿರ ದಂಡ

ಕಲಬುರಗಿ: ಸಾರಾಯಿ ಕುಡಿಯಲು ಹಣ ಕೋಡದಿದ್ದಕ್ಕೆ ಪತ್ನಿಯ ಮೇಲೆ ಹಲ್ಲೆ ನಡೆಸಿ,...

ಕಲಬುರಗಿ| ಹಲಕಟ್ಟಾ ಶರೀಫ್‍ನಲ್ಲಿ ಉರುಸ್-2025 ಪ್ರಯುಕ್ತ ವಿಶೇಷ ರೈಲು ಸಂಚಾರ 

ಕಲಬುರಗಿ: ಹಲಕಟ್ಟಾ ಶರೀಫನಲ್ಲಿ (ಉರ್ಸ್-ಎ-ಶರೀಫ್) ಉರುಸ್ 2025ರ ಪ್ರಯುಕ್ತ ಕೆಳಕಂಡ ದಿನಾಂಕಗಳಂದು...

ಕಲಬುರಗಿ| ರೈತರ ಒಗ್ಗಟ್ಟಿನಿಂದ ಹಕ್ಕು ಮತ್ತು ನ್ಯಾಯಕ್ಕಾಗಿ ಹೋರಾಟ: ಭೀಮಾಶಂಕರ ಮಾಡಿಯಾಳ

ಕಲಬುರಗಿ: ರೈತರ ಹಿತಾಸಕ್ತಿಗಳನ್ನು ಕಾಪಾಡಲು ಒಗ್ಗಟ್ಟಿನ ಬಲವನ್ನು ತಂದುಕೊಳ್ಳುವುದು ಇಂದಿನ ಅಗತ್ಯವಾಗಿದೆ....

ಕಲಬುರಗಿ| ಜುಲೈ ಮಾಸಾಂತ್ಯಕ್ಕೆ ಜಿಲ್ಲಾ ಕಸಾಪದಿಂದ ಯುವ ಸಾಹಿತ್ಯ ಸಮ್ಮೇಳನ: ವಿಜಯಕುಮಾರ ಪಾಟೀಲ ತೇಗಲತಿಪ್ಪಿ

ಕಲಬುರಗಿ : ಯುವ ಬರಹಗಾರರಿಗೆ ಸ್ಫೂರ್ತಿ ನೀಡಿ, ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಜಿಲ್ಲಾ...