ಕಲಬುರಗಿ: ಕಲಬುರಗಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಜಿಲ್ಲಾ ಆಯುಷ್ ಇಲಾಖೆ ವತಿಯಿಂದ 11ನೇ ಅಂತರಾಷ್ಟ್ರೀಯ ಯೋಗ ದಿನಾಚರಣೆಯ ಅಂಗವಾಗಿ ಪೂರ್ವಭಾವಿ ಕಾರ್ಯಕ್ರಮವಾದ “ಹರಿತ ಯೋಗ” ಕಾರ್ಯಕ್ರಮವನ್ನು ಕಲಬುರಗಿ ಜಿಲ್ಲಾ ಆಯುಷ್ ಅಧಿಕಾರಿ ಡಾ.ಕೆ.ಬಿ.ಬಬಲಾದಿ ಇವರ ನೇತೃತ್ವದಲ್ಲಿ ಕಲಬುರಗಿಯ ಆಳಂದ ರಸ್ತೆಯ ವಿವೇಕಾನಂದ ಸಾರ್ವಜನಿಕ ಉದ್ಯಾನವನದಲ್ಲಿ ಹಮ್ಮಿಕೊಳ್ಳಲಾಯಿತು.
ಮೊದಲಿಗೆ ಕಲಬುರಗಿ ಎನ್.ಸಿ.ಸಿ. ಹಾಗೂ ಸ್ಕೌಟ್ಸ್ ಆಂಡ್ ಗೈಡ್ಸ್ ಹಾಗೂ ಆಯುಶ್ ಇಲಾಖೆ ವತಿಯಿಂದ ಸ್ವಚ್ಚತೆ ಕಾರ್ಯಕ್ರಮ, ಈ ಉದ್ಯಾನವನದಲ್ಲಿ ಸಸಿ ನೆಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು. ಈ ಹರಿತ ಯೋಗ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಜಿಲ್ಲಾ ಆಯುμï ಅಧಿಕಾರಿ ಡಾ.ಕೆ.ಬಿ.ಬಬಲಾದಿ ಯೋಗದ ಮಹತ್ವದ ಕುರಿತು ಉಪನ್ಯಾಸ ನೀಡಿದರು. ಯೋಗ ತರಬೇತುದಾರರಾದ ಸುದೀಪ್ ಮತ್ತು ಶಶಿಕಲಾ ಅವರು ಎಲ್ಲಾ ನಾಗರಿಕರು, ಎನ್.ಸಿ.ಸಿ., ಸ್ಕೌಟ್ಸ್ ಆಂಡ್ ಗೈಡ್ಸ್ ಹಾಗೂ ಎಲ್ಲಾ ವಿದ್ಯಾರ್ಥಿಗಳಿಗೆ ಯೋಗಾಸಾನ ಮಾಡಿಸಿದರು.
ಕಾರ್ಯಕ್ರಮದಲ್ಲಿ ಚಿತ್ತಾಪೂರ ಸರ್ಕಾರಿ ಆಯುರ್ವೇದ ಆಸ್ಪತ್ರೆ ವೈದ್ಯಾಧಿಕಾರಿ ಡಾ.ಮಹಾದೇವಿ ಮತ್ತು ಕಮಲಾಪೂರ ಸರ್ಕಾರಿ ಆಯುರ್ವೇದ ಆಸ್ಪತ್ರೆ ವೈದ್ಯಾಧಿಕಾರಿ ಡಾ.ಮುಕುಂದ್ ಕುಲಕರ್ಣಿ ಅವರು ಮಾತನಾಡಿದರು.
ಎನ್.ಸಿ.ಸಿ. ಬಟಾಲಿಯನ್ ಅಧಿಕಾರಿಗಳು, ಎನ್.ಸಿ.ಸಿ. ವಿದ್ಯಾರ್ಥಿಗಳು, ಸ್ಕೌಟ್ಸ್ & ಗೈಡ್ಸ್ ಅಧಿಕಾರಿ ರವಿ ಬರಾಡ್, ವಿದ್ಯಾರ್ಥಿಗಳು ಮತ್ತು ಅರಣ್ಯ ಇಲಾಖೆಯ ಸಿಬ್ಬಂದಿಗಳು, ಆಯುμï ಇಲಾಖೆಯ ಸಿಬ್ಬಂದಿಗಳಾದ ಅರುಣ, ಸೀಮಾ ಹಾಗೂ ಇನ್ನಿತರ ಎಲ್ಲಾ ಸಿಬ್ಬಂದಿಗಳು, ಸಂತೋಷ, ಮಲ್ಲಿನಾಥ ದಂಗಾಪೂರೆ ಓಂಕಾರ, ಮಿಲೇನಿಯಮ್ ಕಾಲೇಜಿನ ಪ್ರಾಂಶುಪಾಲ ಬಸವರಾಜ, ವಿದ್ಯಾರ್ಥಿಗಳು, ನಾಗರಿಕರು ಹಾಗೂ ಹಿರಿಯ ನಾಗರಿಕರು ಸೇರಿದಂತೆ 120 ಕ್ಕೂ ಹೆಚ್ಚು ಜನ ಕಾರ್ಯಕ್ರಮದಲ್ಲಿ ಉತ್ಸಾಹದಿಂದ ಪಾಲ್ಗೊಂಡು ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.
ವೈದ್ಯಾಧಿಕಾರಿ ಡಾ. ಮುಕುಂದ ಕಾರ್ಯಕ್ರಮ ನಿರೂಪಿಸಿದರು. ಜಿಲ್ಲಾ ಆಯುಷ್ ಕಚೇರಿಯ ಸೂಪರಿಂಟೆಂಡೆಂಟ್‍ರಾದ ಬಸವರಾಜ ವಂದಿಸಿದರು.