ಕಲಬುರಗಿ: ಜೇವರ್ಗಿ ಮತ್ತು ಯಡ್ರಾಮಿ ತಾಲ್ಲೂಕಿನಲ್ಲಿ ಬರುವ ಮಲ್ಲಾಬಾದ ಏತ ನೀರಾವರಿ ಶೀಘ್ರವಾಗಿ ಟೆಂಡರ್ ಕರೆದು ಕಾಮಗಾರಿಗೆ ಚಾಲನೆ ನೀಡುವುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಮೇ30ರಂದು ಬೆಂಗಳೂರಿನಲ್ಲಿರುವ ಶಾಸಕ ಡಾ.ಅಜಯ್ ಸಿಂಗ್ ಅವರ ನಿವಾಸ ಮುಂದೆ ಸುಮಾರು 50 ರೈತರೊಂದಿಗೆ ಮತ್ತು ಕನ್ನಡಪರ ಸಂಘಟನೆಗಳ ಬೆಂಬಲದೊoದಿಗೆ ಧರಣಿ ಸತ್ಯಾಗ್ರಹ ಹಮ್ಮಿಕೊಳ್ಳಲಾಗುವುದು ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಜಿಲ್ಲಾಧ್ಯಕ್ಷ ಮಹಾಂತಗೌಡ ನಂದಿಹಳ್ಳಿ ಹೇಳಿದ್ದಾರೆ.
ನಗರದ ಪತ್ರಿಕಾಭವದನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಮಲ್ಲಾಬಾದ ಏತ ನೀರಾವರಿ ಯೋಜನೆಯಡಿಯಲ್ಲಿ ಸುಮಾರು 58 ಹಳ್ಳಿಗಳು ಒಳಪಡಿದ್ದು ಮತ್ತು 33,860 ಹೆಕ್ಟರ್ ಪ್ರದೇಶ ನೀರಾವರಿ ಸೌಲಭ್ಯ ಹೊಂದುತ್ತದೆ. ಆಗಾಗಿ ಈ ಯೋಜನೆ ಜಾರಿಗೆಯಾಗಬೇಕೆಂದು ಸುಮಾರು 30 ವರ್ಷಗಳಿಂದ ಹೋರಾಟ ಮಾಡುತ್ತಲೇ ಬಂದರು ಶೇಕಡ 50% ರಷ್ಟು ಕಾಮಗಾರಿ ಮಾತ್ರ ಆಗಿರುತ್ತದೆ. ಇನ್ನೂ ಶೇಕಡ 50% ರಷ್ಟು ಕಾಮಗಾರಿಯು ಬಾಕಿ ಉಳಿದಿರುವ ಕಾರಣ ಈ ಕೂಡಲೇ ಮಲ್ಲಾಬಾದ ಏತ ನೀರಾವರಿ ಕಾಮಗಾರಿಯನ್ನು ಪೂರ್ಣಗೊಳಿಸಬೇಕು ಹಾಗೂ ಯಡ್ರಾಮಿ ತಾಲ್ಲೂಕಿನ ಬಿಳವಾರ ಗ್ರಾಮದಲ್ಲಿ ಸರಕಾರಿ ಆಸ್ಪತ್ರೆ ಮಂಜೂರು ಮಾಡಿ ಆ ಗ್ರಾಮವನ್ನು ಹೋಬಳಿಯಾಗಿ ಮಾರ್ಪಡಿಸಬೇಕೆಂಬ ಮೂರು ಬೇಡಿಕೆಗಳನ್ನು ಇಟ್ಟುಕೊಂಡು ಧರಣಿ ಸತ್ಯಾಗ್ರಹವನ್ನು ಹಮ್ಮಿಕೊಳ್ಳಲು ನಿರ್ಧರಿಸಲಾಗಿದೆ ಎಂದರು.
ಸುದ್ಧಿಗೋಷ್ಠಿಯಲ್ಲಿ ಈರಣ್ಣಗೌಡ ಪಾಟೀಲ್ ಗುಳ್ಯಾಳ್, ಸಂತೋಷ ರಾಠೋಡ್, ಕೇಶವ ಚವ್ವಾಣ್ ಸೇರಿದಂತೆ ಇತರರು ಇದ್ದರು.