ಕಲಬುರಗಿ: ನಗರದ ಕೆ. ಹೆಚ್. ಬಿ. ಗ್ರೀನ್ ಪಾರ್ಕ್ ಅಪಾರ್ಟ್ಮೆಂಟ್ ಕಾಲೋನಿಯಲ್ಲಿ ಬುದ್ಧ, ಬಸವ, ಅಂಬೇಡ್ಕರ್ ಹಾಗೂ ಬಾಬು ಜಗ ಜೀವನ್ ರಾಮ್ ಅವರ ಜಯಂತಿಯನ್ನು ಆಚರಿಸಲಾಯಿತು. ಈ ಸಂದರ್ಭದಲ್ಲಿ ರಕ್ತ ದಾನ ಮಾಡುವ ಮೂಲಕ ಸಮಾಜಕ್ಕೆ ಸಮಾನತೆಯ ಸಂದೇಶ ಸಾರಿದರು.
ಎಲ್ಲಾ ಜಾತಿ ಜನರ ರಕ್ತದ ಬಣ್ಣ ಕೆಂಪು ಹೀಗಿರುವಾಗ ನಮ್ಮಲ್ಲಿ ಭೇದ ಭಾವಗಳು ಏಕೆ? ಸಮಾಜದಲ್ಲಿ ಪ್ರತಿಯೊಬ್ಬ ವ್ಯಕ್ತಿಯು ಸಮಾನತೆ ಮತ್ತು ಸ್ವಾಭಿಮಾನದಿಂದ ಬದುಕುವoತಾಗಬೇಕು. ಶಿಕ್ಷಣದಿಂದ ಮಾತ್ರ ಸಮಾನತೆ ಸಾಧ್ಯ ಎಂದು ರಕ್ತದಾನ ಮಾಡುವ ಮೂಲಕ ಕಲ್ಯಾಣ ಕರ್ನಾಟಕ ಸರ್ಕಾರಿ ನೌಕರರ ಸಂಘದ ಜಿಲ್ಲಾ ಅಧ್ಯಕ್ಷರಾದ ಮಹೇಶಕುಮಾರ್ ಹೆಬ್ಬಾಳೆ ಅವರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.
ಕೆ. ಹೆಚ್. ಬಿ. ಗ್ರೀನ್ ಪಾರ್ಕ್ ಅಸೋಸಿಯೇಷನ್ ಅಧ್ಯಕ್ಷ ಸಂಜು ಶೆಟ್ಟಿ, ರಕ್ತ ದಾನಿಗಳಿಗೆ ಹಣ್ಣು ಹಂಪಲು ವಿತರಿಸಿ ಸಮಾಜಕ್ಕೆ ಸಹಕಾರಿಯಾಗುವಂತೆ ಕಾಲೋನಿಯ ಜನರಲ್ಲಿ ಮನವಿ ಮಾಡಿದರು.
ಈ ಸಂದರ್ಭದಲ್ಲಿ ಕಾಲೋನಿಯ ಮುಖಂಡರು, ಜಿಮ್ಸ್ ಆಸ್ಪತ್ರೆಯ ಸಿಬ್ಬಂದಿ ಹಾಜರಿದ್ದರು.