ಕಲಬುರಗಿ: ನಗರದಲ್ಲಿ ಹಜರತ್ ಖ್ವಾಜಾ ಬಂದನವಾಝ್ ರಹ್ಮತುಲ್ಲಾಹಿ ಅಲೈಹಿ ಅವರ 621ನೇ ಉರುಸ್ ಸಂದರ್ಭದಲ್ಲಿ ಸಜ್ಜಾದಾ ನಶಿನ್ ಜನಾಬ್ ಹಾಫಿಜ್ ಸೈಯದ್ ಮೊಹಮ್ಮದ್ ಅಲಿ ಅಲ್ ಹುಸೇನಿ ಅವರ ನೇತ್ರತ್ವದಲ್ಲಿ ಮೌಲಾನಾ ಅಬ್ದುಲ್ ರಶೀದ್ ಸಾಹೇಬ್ ವಿಶೇಷ ದುವಾ ಮಾಡಿದರು.
ವಿಶೇಷ ನಮಾಜಿನ ನಂತರ, ಮೆಹ್ಫಿಲ್-ಎ-ಸಮಾ (ಆಧ್ಯಾತ್ಮಿಕ ಸಂಗೀತ ಸಮಾರಂಭ) ಆಯೋಜಿಸಲಾಗಿತ್ತು. ಇದರಲ್ಲಿ ದೇಶದ ವಿವಿಧ ಭಾಗಗಳಿಂದ ಬಂದ ಕವಾಲ್ದಾರರು ತಮ್ಮ ಧಾರ್ಮಿಕ ಕಲಾಮ್‌ಗಳನ್ನು ಹಾಡಿದರು.
ಸಮಾರಂಭದ ನಂತರ, “ಸಮ್ಮರ್ ಹೌಸ್” ನಲ್ಲಿ ಜನಾಬ್ ಹಾಫಿಜ್ ಸೈಯದ್ ಮೊಹಮ್ಮದ್ ಅಲಿ ಅಲ್ ಹುಸೇನಿ ಪವಿತ್ರ ಸಂಡಲ್ ಮುಬಾರಕ್ ಅನ್ನು ತಮ್ಮ ತಲೆಯ ಮೇಲೆ ಇಟ್ಟುಕೊಂಡು ಜುಲೂಸ್‌ಗೆ ಚಾಲನೆ ನೀಡಿದರು. ಈ ಸಂಡಲ್ ಜುಲೂಸ್ ಮೆಹಬೂಬ್ ಗುಲ್ಷನ್‌ನಿಂದ ಜಗತ್ ಸರ್ಕಲ್ ಮಾರ್ಗವಾಗಿ ಸೂಪರ್ ಮಾರ್ಕೆಟ್ ಕಡೆಗೆ ಸಾಗಿತು.
ಬಂದನವಾಝ್ ಕುಟುಂಬದ ಸದಸ್ಯರೊಂದಿಗೆ, ಸಜ್ಜಾದಾಗಾನ್, ಮಶಾಯಿಖ್, ಗೌರವಾನ್ವಿತ ಉಲಮಾಗಳು (ಉಲಮಾ-ಎ-ಕರಮ್) ಮತ್ತು ಸಾವಿರಾರು ಭಕ್ತರು ಈ ಪವಿತ್ರ ಸಂದರ್ಭದಲ್ಲಿ ಭಕ್ತಿ ಭಾವದಿಂದ ಭಾಗವಹಿಸಿದರು.