ಬಾಗಲಕೋಟೆ: ಬೈಕ್ ಗೆ ಲಾರಿಯೊಂದು ಢಿಕ್ಕಿ ಹೊಡೆದ ಪರಿಣಾಮ ಮೂವರು ಬಾಲಕರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಬಾಗಲಕೋಟೆ ನಗರದ ಹೊರವಲಯದ ಸೀಮೀಕೇರಿ ಸಮೀಪ ನಡೆದಿದೆ.
ಮರನಾಳ ಗ್ರಾಮದ ನಿವಾಸಿ ಸಿದ್ದು (16), ಸಂತೋಷ (16) ಮತ್ತು ಕಾಮಣ್ಣ (16) ಎಂಬಾತರೆ ಮೃತರೆಂದು ಗುರುತಿಸಲಾಗಿದೆ.
ಬಾಲಕರು ಸಂಚರಿಸುತ್ತಿದ್ದ ಬೈಕಿಗೆ ರಭಸದಿಂದ ಬಂದ ಲಾರಿ ಢಿಕ್ಕಿ ಹೊಡೆದು ಅಪಘಾತ ಸಂಭವಿಸಿದೆ ಎಂದು ತಿಳಿದುಬಂದಿದೆ.
ಘಟನಾ ಸ್ಥಳಕ್ಕೆ ಕಲಾದಗಿ ಠಾಣಾ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತದೇಹಗಳನ್ನು ಸಮೀಪದ ಆಸ್ಪತ್ರೆಗೆ ಸಾಗಿಸಲಾಗಿದೆ ಎಂದು ತಿಳಿದುಬಂದಿದೆ.