ಕಲಬುರಗಿ: ಆಸ್ತಿ ವಿಚಾರಕ್ಕಾಗಿ ಸ್ವತಃ ಅಳಿಯಂದರೆ ಮಾರಕಾಸ್ತ್ರಗಳಿಂದ ತನ್ನ ಅತ್ತೆಯ ಕತ್ತನ್ನು (ಕುತ್ತಿಗೆ) ಕೊಯ್ದು ಕೊಲೆ ಮಾಡಿರುವ ಘಟನೆ ಅಫಜಲಪುರ ತಾಲ್ಲೂಕಿನ ಬಂದರವಾಡ್ ಗ್ರಾಮದಲ್ಲಿ ಸೋಮವಾರ ಬೆಳಗಿನ ಜಾವ ನಡೆದಿದೆ.
ಬಂದರವಾಡ್ ಗ್ರಾಮದ ನಿವಾಸಿ ಲಕ್ಕಮ್ಮ ತಂದೆ ಸೈಬಣ್ಣ ದೊಡ್ಡಮನಿ (40) ಎಂಬಾತರೆ ಕೊಲೆಯಾದ ದುರ್ದೈವಿ ಎಂದು ಪೊಲೀಸರು ತಿಳಿಸಿದ್ದಾರೆ.
ಮನೆ ಕಟ್ಟುವ ವಿಚಾರದಲ್ಲಿ ಈ ಹಿಂದೆ ಕುಟುಂಬದಲ್ಲೇ ಜಗಳವಾಗಿತ್ತು. ಅದೇ ಹಳೆಯ ವೈಶಮ್ಯದಿಂದಾಗಿ ಈಗ ಮಹಿಳೆಯ ಕೊಲೆಯಾಗಿದೆ ಎಂದು ತಿಳಿದುಬಂದಿದೆ.
ಸದ್ಯ ಕೊಲೆ ಆರೋಪಿಗಳಾದ ಸಂತೋಷ್(35) ಮಂಜುನಾಥ್(25) ಇತರರ ವಿರುದ್ಧ ಪ್ರಕರಣ ದಾಖಲಾಗಿದ್ದು, ಈ ಕುರಿತಾಗಿ ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಅಫಜಲಪುರ ವೃತ್ತ ನಿರೀಕ್ಷಕರು ಮಾಹಿತಿ ನೀಡಿದ್ದಾರೆ.
ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಡ್ಡೂರು ಶ್ರೀನಿವಾಸಲು ಸೇರಿದಂತೆ ಮತ್ತಿತರ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಈ ಕುರಿತು ಗಾಣಗಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.