ಕಲಬುರಗಿ| ಬೆಂಬಲ ಬೆಲೆ ಯೋಜನೆಯಡಿ ಉದ್ದಿನ ಕಾಳು ಖರೀದಿಗೆ ನಿರ್ಧಾರ: ಡಿ.ಸಿ ಮಾಹಿತಿ

Date:

Share post:

ಕಲಬುರಗಿ: ಕೇಂದ್ರ ಸರ್ಕಾರದ ಬೆಂಬಲ ಬೆಲೆ ಯೋಜನೆಯಡಿ 2026-27ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ಬೆಳೆಯಲಾದ ಎಫ್.ಎ.ಕ್ಯೂ. ಗುಣಮಟ್ದ‌ದ ಉದ್ದಿನ ಕಾಳು ಖರೀದಿಗೆ ಜಿಲ್ಲಾಧಿಕಾರಿ ಇಕ್ರಮ್ ಶರೀಫ್ ನೇತೃತ್ವದ ಜಿಲ್ಲಾ‌ ಟಾಸ್ಕ್ ಪೋರ್ಸ್ ಸಮಿತಿ ನಿರ್ಧರಿಸಿದೆ.

ರಾಜ್ಯ ಸರ್ಕಾರದ ದಿ.18-11-2026ರ ಆದೇಶದಂತೆ ಉದ್ದಿನ ಕಾಳು ಪ್ರತಿ ಕ್ವಿಂಟಾಲ್‍ಗೆ 8,200 ರೂ. ಗಳಂತೆ ಪ್ರತಿ ಎಕರೆಗೆ 4 ಕ್ವಿಂಟಾಲ್ ನಂತೆ ಹಾಗೂ ಫ್ರೂಟ್ಸ್ ತಂತ್ರಾಂಶದಲ್ಲಿ ಲಭ್ಯವಾಗುವ ರೈತರು ಉದ್ದಿನ ಕಾಳು ಬೆಳೆದ ಜಮೀನಿನ ವಿಸ್ತೀರ್ಣಕ್ಕನುಗುಣವಾದ ಪ್ರಮಾಣದಲ್ಲಿ ಖರೀದಿಸಲಾಗುತ್ತದೆ ಎಂದು ಡಿ.ಸಿ. ಇಕ್ರಮ್ ಶರೀಫ್ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಉದ್ದಿನ ಕಾಳು ಮಾರಾಟಕ್ಕೆ ರೈತರು 2027ರ ಪೆಬ್ರವರಿ 6ರ ವರೆಗೆ ನೋಂದಣಿ ಮಾಡಿಕೊಂಡು ಫೆಬ್ರವರಿ 16ರ ವರೆಗೆ ಮಾರಾಟ ಮಾಡಬಹುದಾಗಿದೆ. ನೋಂದಣಿ ಕಾರ್ಯದ ಜೊತೆಗೆ ಖರೀದಿ ಪ್ರಕ್ರಿಯೆಯು ನಡೆಯಲಿದ್ದು, ರೈತರಿಂದ ಖರೀದಿಸಿದ ಉತ್ಪನ್ನದ ಮೌಲ್ಯವನ್ನು ಡಿ.ಬಿ.ಟಿ. ಪೋರ್ಟಲ್ ಮೂಲಕ ಪಾವತಿಸಲಾಗುತ್ತದೆ. ಇನ್ನು ಪ್ರತಿಯೊಂದು ಖರೀದಿ ಕೇಂದ್ರಗಳಲ್ಲಿ ಪಿ.ಓ.ಎಸ್. ಯಂತ್ರಗಳ ಮೂಲಕ ರೈತರ ನೊಂದಣಿ ಹಾಗೂ ಖರೀದಿ ಪ್ರಕ್ರಿಯೆಯಲ್ಲಿ ಯು.ಐ.ಡಿ.ಎ.ಐ. ಆಧಾರಿತ ಬಯೋಮೇಟ್ರಿಕ್ / ಮುಖ ಚಹರೆ ಪಡೆಯುವುದು ಕಡ್ಡಾಯವಾಗಿರುತ್ತದೆ.

ಜಿಲ್ಲೆಯಲ್ಲಿ ಉದ್ದಿನ ಕಾಳು ಖರೀದಿಸಲು ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾ ಮಂಡಳ ನಿಯಮಿತ ಸಂಸ್ಥೆಯನ್ನು ಖರೀದಿ ಸಂಸ್ಥೆಯನ್ನಾಗಿ ನೇಮಿಸಲಾಗಿದ್ದು, ಜಿಲ್ಲೆಯಲ್ಲಿ 32 ಪ್ರಾಥಮಿಕ ಕೃಷಿ ಪತ್ತಿನ ಸಹಕಾರ‌ ಸಂಘಗಳು ಮತ್ತು ಎಪ್.ಪಿ.ಓ.ಗಳನ್ನು ಖರೀದಿ ಕೇಂದ್ರಗಳಾಗಿ ಗುರುತಿಸಿದೆ.

ಜಿಲ್ಲೆಯ ರೈತ ಭಾಂದವರು ಸಮೀಪದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳಿಗೆ ಹಾಗೂ ಎಫ್.ಪಿ.ಓ.ಗಳಿಗೆ ಭೇಟಿ ನೀಡಿ ಮುಂಗಾರು ಹಂಗಾಮಿನಲ್ಲಿ ಬೆಳೆದ ಎಫ್.ಎ.ಕ್ಯೂ ಗುಣಮಟ್ಟದ ಉದ್ದಿನ ಕಾಳು ನಿಗದಿತ ಅವಧಿಯಲ್ಲಿ ಮಾರಾಟಕ್ಕೆ ನೋಂದಾಯಿಸಿಕೊಂಡು ಮಾರಾಟ ಮಾಡಿ ಬೆಂಬಲ ಬೆಲೆ ಯೋಜನೆಯ ಸದುಪಯೋಗ ಪಡೆದುಕೊಳ್ಳಬೇಕೆಂದು ಮನವಿ ಮಾಡಲಾಗಿದೆ.

32 ಖರೀದಿ ಕೇಂದ್ರಗಳು:

ಆಳಂದ ತಾಲೂಕಿನ ಸರಸಂಬಾ, ಹಿರೋಳ್ಳಿ, ನಿಂಬಾಳ, ನಿರಗುಡಿ, ಪಡಸಾವಳಗಿ, ರುದ್ರವಾಡಿ, ಸನಗುಂದಾ ಪ್ಯಾಕ್ಸ್ ಸಸಂಸ್ಥೆಗಳು, ಚಿಂಚೋಳಿ ತಾಲೂಕಿನ ಐನೊಳ್ಳಿ, ಚಿಮನಚೋಡ, ಹಸರಗುಂಡಗಿ, ಕೊಡ್ಲಿ, ರಟಕಲ್, ಸಾಲೇಬಿರನಹಳ್ಳಿ, ಚಂದನಕೇರ ಪ್ಯಾಕ್ಸ್ ಸಂಸ್ಥೆಗಳು, ಚಿತ್ತಾಪುರ ತಾಲೂಕಿನ ನಾಗಾವಿ ನಾಡು ಫಾರ್ಮರ್ಸ್ ಪ್ರೋ. ಕಂ. ಲೀ., ದಂಡೋತಿ, ಡೊಣಗಾಂವ, ಗುಂಡಗುರ್ತಿ, ಕೊಡದೂರ ಪ್ಯಾಕ್ಸ್ ಸಂಸ್ಥೆಗಳು, ಶಹಾಬಾದ ತಾಲೂಕಿನ ಹಲಕಟ್ಟಿ ಮತ್ತು ಮರತೂರ ಪ್ಯಾಕ್ಸ್ ಸಂಸ್ಥೆಗಳು ಖರೀದಿ ಕೇಂದ್ರಗಳಾಗಿವೆ.

ಅದೇ ರೀತಿ ಕಾಳಗಿ ತಾಲೂಕಿನ ತೆಂಗಳಿ ಮತ್ತು ಕಾಳಗಿ, ಸೇಡಂ ತಾಲೂಕಿನ ಅಡಕಿ, ಕೋಡ್ಲಾ, ಸಿಂದನಮಡು, ಕಲಬುರಗಿ ತಾಲೂಕಿನ ಅವರಾದ‌ ಬಿ., ಕಮಲಾಪೂರ ತಾಲೂಕಿನ ಜೀವಣಗಿ ಮತ್ತು ನಾಗೂರ ಪ್ಯಾಕ್ಸ್ ಸಂಸ್ಥೆಗಳು, ಅಫಜಲಪುರ ತಾಲೂಕಿನ ಗೊಬ್ಬೂರ, ಜೇವರ್ಗಿ ತಾಲೂಕಿನ ಗುಡೂರ ಹಾಗೂ ಯಡ್ರಾಮಿ ತಾಲೂಕಿನ ಸುಂಬಡ ಪ್ಯಾಕ್ಸ್ ಸಂಸ್ಥೆಗಳನ್ನು ಖರೀದಿ ಕೇಂದ್ರಗಳಾಗಿವೆ.

ಹೆಚ್ಚಿನ ಮಾಹಿತಿಗೆ ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾಮಂಡಳ ನಿಯಮಿತ ಸಂಸ್ಥೆ-9449864446 ಇವರನ್ನು ಸಂಪರ್ಕಿಸಲು ಕೋರಿದೆ.

Share post:

spot_imgspot_img

Popular

More like this
Related

ಕಲಬುರಗಿ| ರಕ್ತದಾನ ಉದಾತ್ತ ಸೇವೆ, ಇದಕ್ಕಿಂತ ದೊಡ್ಡ ದಾನವಿಲ್ಲ: ರಾಹುಲ್‌ ಸಂಕನೂರ್

ಕಲಬುರಗಿ: ಅಪಘಾತ, ಶಸ್ತ್ರಚಿಕಿತ್ಸೆ ಅಥವಾ ಗಂಭೀರ ಕಾಯಿಲೆಗಳಿಂದ ಬಳಲುತ್ತಿರುವವರಿಗೆ ರಕ್ತದ ಅವಶ್ಯಕತೆ...

ಕಲಬುರಗಿ| ಟಿಕೆಟ್ ಇಲ್ಲದೆ ಪ್ರಯಾಣಿಸಿದವರಿಂದ 10.14 ಲಕ್ಷ ರೂ. ದಂಡ ವಸೂಲಿ

ಕಲಬುರಗಿ: ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದ (ಕೆಕೆಆರ್‌ಟಿಸಿ) ತನಿಖಾ ತಂಡಗಳು...

ಕಲಬುರಗಿ|: ಜಿಲ್ಲೆಯ 1.69 ಲಕ್ಷ ರೈತರಿಗೆ 42.49 ಕೋಟಿ ಬರ ಪರಿಹಾರ ಹಣ ಬಿಡುಗಡೆ: ಇಕ್ರಮ್ ಶರೀಫ್ 

ಕಲಬುರಗಿ: ಪ್ರಸಕ್ತ 2026-27ನೇ ಸಾಲಿನ ಬರ ಪರಿಹಾರ (ಇನ್ಪುಟ್ ಸಬ್ಸಿಡಿ) ವಿತರಣೆಯ...