ಕಲಬುರಗಿ| ದಂತ ವೈದ್ಯಕೀಯ ಕ್ಷೇತ್ರವು ಸ್ಪರ್ಧಾತ್ಮಕ ಕ್ಷೇತ್ರವಾಗಿ ಬೆಳೆದಿದೆ: ಡಾ. ಶಿವಶರಣ ಕೆ.

Date:

Share post:

ಕಲಬುರಗಿ: ಇತ್ತಿಚಿನ ದಿನಗಳಲ್ಲಿ ದಂತವೈದ್ಯಶಾಸ್ತ್ರವು ಹೆಚ್ಚು ಸ್ಪರ್ಧಾತ್ಮಕ ಕ್ಷೇತ್ರವಾಗಿ ಬೆಳೆಯುತ್ತಿದೆ, ಹಾಗಾಗಿ ದಂತವೈದ್ಯರ ಬೇಡಿಕೆಯು ಹೆಚ್ಚಾಗಿದೆ ಎಂದು ಡೆಂಟಲ್ ಕೌನ್ಸಿಲ್ ಆಫ್ ಇಂಡಿಯಾದ ಸದಸ್ಯರಾದ ಡಾ. ಶಿವಶರಣ ಕೆ. ಅವರು ಹೇಳಿದರು.

ಅವರು ಹೈದರಾಬಾದ್ ಕರ್ನಾಟಕ ಶಿಕ್ಷಣ ಸಂಸ್ಥೆಯ ಮಹಾದೇವಪ್ಪ ರಾಂಪೂರೆ ವೈದ್ಯಕೀಯ ಮಹಾವಿದ್ಯಾಲಯದ ಸ್ಯಾಕ್ ಸಭಾಂಗಣದಲ್ಲಿ ನಡೆದ ಕರ್ನಾಟಕ ರಾಜ್ಯ ಡೆಂಟಲ್ ಕೌನ್ಸಿಲ್, ರಾಜೀವ್ ಗಾಂಧಿ ಯುನಿವರ್ಸಿಟಿ ಆಫ್ ಹೆಲ್ತ್ ಸೈನ್ಸ್ ಬೆಂಗಳೂರು ಹಾಗೂ ಹೈದರಾಬಾದ್ ಕರ್ನಾಟಕ ಶಿಕ್ಷಣ ಸಂಸ್ಥೆಯ ಎಸ್ ನಿಜಲಿಂಗಪ್ಪ ದಂತ ವೈದ್ಯಕೀಯ ಮಹಾವಿದ್ಯಾಲಯದ ಅಡಿಯಲ್ಲಿ ಬಿಯಾಂಡ್ ದ ಸಿಲೇಬಸ್ ರಾಜ್ಯ ಮಟ್ಟದ ಸೆನ್ಸಟೈಜೆಶನ್ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಅವರು ಮಾತನಾಡುತ್ತಿದ್ದರು.

ಹೊಸ ಹೊಸ ಆಕರ್ಷಕ ಬದಲಿ ದಂತಗಳ ಮಾದರಿಗಳು ಬರುತ್ತಿದ್ದು, ದಂತರೋಗಿಗಳು ಇತ್ತಿಚಿನ ದಿನಗಳಲ್ಲಿ ಚೌಕಾಸಿ ಮುಖಾಂತರ ದಂತಗಳನ್ನು ಆಯ್ಕೆ ಮಾಡಿಕೊಳ್ಳುತ್ತಿರುವದರಿಂದ ದಂತ ಸೇವೆಗಳ ಮೇಲಿನ ವೆಚ್ಚಗಳು ಪ್ರಪಂಚದಾದ್ಯಂತ ಗಣನಿಯವಾಗಿ ಹೆಚ್ಚಿವೆ ಎಂದು ಹೇಳಿದರು.

ಆಸ್ಪತ್ರೆ ಅಂತ ನಾವು ಸರಳವಾಗಿ ಹೇಳುತ್ತೇವೆ ಆದರೆ ಆ ಶಬ್ಧಕ್ಕೆ ಪರಿಪೂರ್ಣ ವ್ಯಾಖ್ಯಾನವಿಲ್ಲ, ಆದರೆ ಆರೈಕೆಯನ್ನು ಅನಾರೋಗ್ಯ ಪೀಡಿತ ಮತ್ತು ಗಾಯಗೊಂಡ ರೋಗಿಗಳನ್ನು ಒಳರೋಗಿಗಳಾಗಿ ಪರಿಗಣಿಸುವ ಸಂಸ್ಥೆ ಎಂದು ವರ್ಗೀಕರಿಸಿವ ಸಂಸ್ಥೆಯಾಗಿದೆ ಎಂದರು.

WHO ಆಸ್ಪತ್ರೆಯ ಬಗ್ಗೆ ಈ ರೀತಿ ವ್ಯಾಖ್ಯಾನ ಮಾಡುತ್ತದೆ, ಆಸ್ಪತ್ರೆಯು ಸಾಮಾಜಿಕ ಮತ್ತು ವೈದ್ಯಕೀಯ ಸಂಸ್ಥೆಯ ಅವಿಭಾಜ್ಯ ಅಂಗವಾಗಿದೆ, ಇದರ ಕಾರ್ಯಗಳು ಜನಸಂಖ್ಯೆಗೆ ಚಿಕಿತ್ಸಕ ಮತ್ತು ತಡೆಗಟ್ಟುವಿಕೆ ಎರಡರಲ್ಲೂ ಸಂಪೂರ್ಣ ಆರೋಗ್ಯ ಆರೈಕೆಯನ್ನು ಒದಗಿಸುವುದು,

ಆರೋಗ್ಯ ಕಾರ್ಯಕರ್ತರು/ಕಾರ್ಯಕರ್ತರ ತರಬೇತಿ ಮತ್ತು ಜೈವಿಕ-ಸಾಮಾಜಿಕ ಸಂಶೋಧನೆಯನ್ನು ನಡೆಸುವುದು ಸಂಸ್ಥೆ ಎಂದು ಹೇಳುತ್ತದೆ ಎಂದು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಸಂಸ್ಥೆಯ ಅಧ್ಯಕ್ಷರು ಹಾಗೂ ವಿಧಾನ ಪರಿಷತ್ ಸದಸ್ಯರಾದ ಶಶೀಲ್ ಜಿ ನಮೋಶಿ ಮಾತನಾಡಿ, ದಂತವೈದ್ಯಶಾಸ್ತ್ರದಲ್ಲಿ ದಂತ ವೈದ್ಯರ ಸಂವಹನವು ರೋಗಿಯ ಆರೈಕೆ ನಿರ್ವಹಣೆಯಲ್ಲಿ ಮಹತ್ವದ ಪಾತ್ರವನ್ನು ವಹಿಸುತ್ತದೆ;

ರೋಗಿಗಳೊಂದಿಗೆ ವಿಶ್ವಾಸ ಮತ್ತು ಬಾಂಧವ್ಯವನ್ನು ನಿರ್ಮಿಸುತ್ತದೆ ಎಂದರು.

ಈ ಸಂದರ್ಭದಲ್ಲಿ ಹೈದರಾಬಾದ್ ಕರ್ನಾಟಕ ಶಿಕ್ಷಣ ಸಂಸ್ಥೆಯ ಉಪಾಧ್ಯಕ್ಷರಾದ ರಾಜಾ ಭಿ.ಭೀಮಳ್ಳಿ ಕಾರ್ಯದರ್ಶಿಗಳಾದ ಉದಯ ಚಿಂಚೋಳಿ, ಜಂಟಿ ಕಾರ್ಯದರ್ಶಿಗಳಾದ ಡಾ. ಕೈಲಾಸ ಪಾಟೀಲ್, ಡೆಂಟಲ್ ಕಾಲೇಜು ಸಂಚಾಲಕರಾದ ಡಾ. ಅನಿಲಕುಮಾರ ಪಟ್ಟಣ, ಆಡಳಿತ ಮಂಡಳಿ ಸದಸ್ಯರಾದ ಡಾ.ಶರಣಬಸಪ್ಪ ಹರವಾಳ, ಡಾ. ಮಹಾದೇವಪ್ಪ ರಾಂಪೂರೆ, ಸಾಯಿನಾಥ ಪಾಟೀಲ್, ಡಾ.ಕಿರಣ್ ದೇಶಮುಖ್, ನಿಶಾಂತ್ ಎಲಿ, ಡಾ.ಗುರುಲಿಂಗಪ್ಪ ಪಾಟೀಲ್, ಕಾಲೇಜು ಪ್ರಾಚಾರ್ಯ ಡಾ.ಜಯಶ್ರೀ ಮುದ್ದಾ, ಉಪ ಪ್ರಾಚಾರ್ಯರಾದ ಡಾ.ವಿರೇಂದ್ರ ಪಾಟೀಲ್, ಡೆಂಟಲ್ ಕೌನ್ಸಿಲ್ ಆಫ್ ಇಂಡಿಯಾದ ಸದಸ್ಯರಾದ ಡಾ.ಶಿವಶರಣ, ಡಾ.ಪ್ರಶಾಂತ್, ಡಾ.ಜಕಾವುಲ್ ಖಾನ್, ಡಾ.ವಿನಮ ಹಿರೇಮಠ, ಡಾ.ಚಂದ್ರಕಾಂತ ಪಾಟೀಲ್ ಹಾಗೂ ಎಲ್ಲ ವಿಭಾಗದ ಮುಖ್ಯಸ್ಥರು ಉಪಸ್ಥಿತರಿದ್ದರು.

Share post:

spot_imgspot_img

Popular

More like this
Related

ಕಲಬುರಗಿ| ದಲಿತ ವಿದ್ಯಾರ್ಥಿನಿಯ ಆತ್ಮಹತ್ಯೆ ಪ್ರಕರಣ ಉನ್ನತಮಟ್ಟದ ತನಿಖೆಗೆ ಡಿ.ಜಿ ಸಾಗರ್ ಆಗ್ರಹ

ಕಲಬುರಗಿ: ಇಲ್ಲಿನ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದಲ್ಲಿ ಆತ್ಮಹತ್ಯೆ ಮಾಡಿಕೊಂಡಿರುವ ಎನ್ನಲಾಗಿರುವ ದಲಿತ...

ಕಲಬುರಗಿ| ಗ್ರಾಮ ಪಂಚಾಯತಿ ಅಧಿಕಾರಿ, ಸಿಬ್ಬಂದಿ ಕೌನ್ಸಿಲ್ ಪ್ರಕ್ರಿಯೆ ಪೂರ್ಣ: ಸಚಿವ ಪ್ರಿಯಾಂಕ್ ಖರ್ಗೆ

ಕಲಬುರಗಿ: 2024–25ನೇ ಸಾಲಿನ ಆಯವ್ಯಯ ಘೋಷಣೆಯಂತೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್‌...

ಕಲಬುರಗಿ| ಕಳ್ಳರಿಬ್ಬರ ಬಂಧನ; ಬೈಕ್, 16.50 ಲಕ್ಷ ಮೌಲ್ಯ ಸ್ವತ್ತು ಜಪ್ತಿ: ಪೊಲೀಸ್ ಕಮೀಷನರ್

ಕಲಬುರಗಿ: ಇಲ್ಲಿನ ಸಬ್ ಅರ್ಬನ್ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಮನೆ ಕೀಲಿ...

ಕಲಬುರಗಿ| ಹವಾಮಾನ ಆಧಾರಿತ ಬೆಳೆ ವಿಮೆ ಯೋಜನೆ: ರೈತರು ನೋಂದಣಿಗೆ ಆಗಸ್ಟ್ 11 ರಂದು ಕೊನೆಯ ದಿನ: ಜಿಲ್ಲಾಧಿಕಾರಿ

ಕಲಬುರಗಿ: ಪ್ರಸಕ್ತ 2025-26ನೇ ಸಾಲಿನ ಮುಂಗಾರು ಹಂಗಾಮಿಗಾಗಿ ಮರು ವಿನ್ಯಾಸಗೊಳಿಸಿದ ಹವಾಮಾನ...