ಕಲಬುರಗಿ| ಸಂಗಮೇಶ್ವರ ಆಸ್ಪತ್ರೆಯಲ್ಲಿ ವಿಶ್ವ ಪ್ರೀಮೆಚುರಿಟಿ ದಿನಾಚರಣೆ

Date:

Share post:

ಕಲಬುರಗಿ: ಅವಧಿಪೂರ್ವ ಜನನ ಸಂಬಂಧಿತ ಸಾವುಗಳು, ಸವಾಲುಗಳು ಮತ್ತು ಅವುಗಳನ್ನು ತಡೆಗಟ್ಟಲು ಕೈಗೆಟುಕುವ ಮಾರ್ಗಗಳು ಸೇರಿದಂತೆ ಅವಧಿಪೂರ್ವ ಜನನಗಳ ಬಗ್ಗೆ ಜಾಗೃತಿ ಮೂಡಿಸಲು ಪ್ರತಿ ವರ್ಷ ನ.17 ರಂದು ವಿಶ್ವ ಅವಧಿಪೂರ್ವ ದಿನವನ್ನು ವಿಶ್ವದಾದ್ಯಂತ ಆಚರಿಸಲಾಗುತ್ತದೆ ಎಂದು ಖ್ಯಾತ ಮಕ್ಕಳ ತಜ್ಞ ಡಾ ಕಿರಣ್ ಹೊಸ ಗೌಡ ಹೇಳಿದರು.

ಅವರು ಹೈದರಾಬಾದ್ ಕರ್ನಾಟಕ ಶಿಕ್ಷಣ ಸಂಸ್ಥೆಯ ಸಂಗಮೇಶ್ವರ ಬೋಧನಾ ಹಾಗೂ ಸಾರ್ವಜನಿಕ ಆಸ್ಪತ್ರೆಯಲ್ಲಿ ನಡೆದ 2025 ನೇ ಸಾಲಿನ ಪ್ರೀಮಾಚುರಿಟಿ ದಿನಾಚರಣೆ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಮಾತನಾಡುತ್ತಿದ್ದರು.

ಈ ದಿನದಂದು, ವಿಶ್ವ ಆರೋಗ್ಯ ಸಂಸ್ಥೆ ,ಪ್ಯಾನ್ ಅಮೇರಿಕನ್ ಆರೋಗ್ಯ ಸಂಸ್ಥೆ , ವಿಶ್ವಸಂಸ್ಥೆಯ ಅಂತರರಾಷ್ಟ್ರೀಯ ಮಕ್ಕಳ ತುರ್ತು ನಿಧಿ ಮತ್ತು ಮಾರ್ಚ್ ಆಫ್ ಡೈಮ್ಸ್ ಸೇರಿದಂತೆ ವಿವಿಧ ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಸಂಸ್ಥೆಗಳು, ಆಸ್ಪತ್ರೆಗಳು, ಲಾಭರಹಿತ ಸಂಸ್ಥೆಗಳು ಮತ್ತು ಆರೋಗ್ಯ ವೃತ್ತಿಪರರು ಒಟ್ಟಾಗಿ ಚಟುವಟಿಕೆಗಳು ಮತ್ತು ವಿಶೇಷ ಕಾರ್ಯಕ್ರಮಗಳನ್ನು ನಡೆಸಿ ವಿಶ್ವಾದ್ಯಂತ ಅಕಾಲಿಕ ಜನನದ ತೊಂದರೆಗಳು ಮತ್ತು ಹೊರೆಗಳ ಬಗ್ಗೆ ಜಾಗೃತಿ ಮೂಡಿಸುತ್ತಾರೆ ಎಂದರು.

ನಂತರ ಆಸ್ಪತ್ರೆಯ ವೈದ್ಯಕೀಯ ಅಧಿಕ್ಷಕರಾದ ಡಾ ಮಹಾನಂದಾ ಮೇಳಕುಂದಿ ಮಾತನಾಡಿ, ಅವಧಿಪೂರ್ವ ಜನನವು ಹಲವಾರು ಕಾರಣಗಳಿಂದ ಸಂಭವಿಸಬಹುದು. ಹೆಚ್ಚಿನ ಅವಧಿಪೂರ್ವ ಜನನಗಳು ಸ್ವಾಭಾವಿಕವಾಗಿ ಸಂಭವಿಸುತ್ತವೆ. ಆದಾಗ್ಯೂ, ಕೆಲವು ಸೋಂಕುಗಳು ಅಥವಾ ಗರ್ಭಧಾರಣೆಯ ಇತರ ಸಮಸ್ಯೆಗಳಂತಹ ವೈದ್ಯಕೀಯ ಕಾರಣಗಳಿಂದ ಉಂಟಾಗುತ್ತವೆ, ಅದು ಹೆರಿಗೆಗೆ ಆರಂಭಿಕ ಪ್ರಚೋದನೆ ಅಥವಾ ಸಿಸೇರಿಯನ್ ಹೆರಿಗೆಗೆ ಕಾರಣವಾಗುತ್ತದೆ ಎಂದು ಹೇಳಿದರು.

ಇದೇ ಸಂದರ್ಭದಲ್ಲಿ ಮಕ್ಕಳ ವೈದ್ಯರಾದ ಡಾ.ಬಸವರಾಜ ಪಾಟೀಲ್, ಡಾ. ಐಶ್ವರ್ಯ ಮತ್ತು ಡಾ. ಶಿವಕುಮಾರ್ ಸಂಗೋಳಗಿ ಅವರು ಆಸ್ಪತ್ರೆಯ NICU ನಲ್ಲಿ ದಾಖಲಾಗಿರುವ 2 ಅಕಾಲಿಕ ಶಿಶುಗಳ ಪ್ರಕರಣಗಳನ್ನು ಪ್ರಸ್ತುತಪಡಿಸಿ ವಿದ್ಯಾರ್ಥಿಗಳು ಮತ್ತು ಪೋಷಕರಿಗೆ ವಿವಿಧ ತೊಡಕುಗಳು ಮತ್ತು ಅಕಾಲಿಕ ಶಿಶುಗಳನ್ನು ಹೇಗೆ ನಿರ್ವಹಿಸಬೇಕು ಎಂಬುದರ ಕುರಿತು ವಿವರಿಸಿದರು.

ಈ ಸಂದರ್ಭದಲ್ಲಿ ಆಸ್ಪತ್ರೆಯ ಆಹಾರ ತಜ್ಞೆ ಡಾ.ಪಾರ್ವತಿ ಭೀಮಳ್ಳಿ ಉಪಸ್ಥಿತರಿದ್ದರು.

Share post:

spot_imgspot_img

Popular

More like this
Related

ಕಲಬುರಗಿ: ಗ್ರಾಮೀಣ ಭಾಗದ ಕುಡಿಯುವ ನೀರಿನ ಸಮಸ್ಯೆ ನೀಗಲು ರೂ 208.67 ಕೋಟಿ. ಬಿಡುಗಡೆ- ಸಚಿವ ಪ್ರಿಯಾಂಕ್ ಖರ್ಗೆ 

ತುರ್ತು ಕಾಮಗಾರಿಗಳಿಗೆ ಪುನಃ 72 ಕೋಟಿ ರೂ.ಬಿಡುಗಡೆ: ಪ್ರಿಯಾಂಕ್ ಖರ್ಗೆ ಬೆಂಗಳೂರು: ರಾಜ್ಯದ...

ಕಲಬುರಗಿ: ಬಸವೇಶ್ವರ ಆಸ್ಪತ್ರೆಯಲ್ಲಿ ಉಚಿತ ಚರ್ಮ ಕ್ಯಾನ್ಸರ್ ಜಾಗೃತಿ ಶಿಬಿರ

ಕಲಬುರಗಿ: ಹೈದ್ರಾಬಾದ ಕರ್ನಾಟಕ ಶಿಕ್ಷಣ ಸಂಸ್ಥೆಯ ಬಸವೇಶ್ವರ ಬೋಧನಾ ಹಾಗೂ ಸಾರ್ವಜನಿಕ...

ಕಲಬುರಗಿ| ಖ್ವಾಜಾ ಬಂದಾ ನವಾಜ್ ದರ್ಗಾದ 622ನೇ ಅದ್ಧೂರಿ ಸಂದಲ್ ಮೆರವಣಿಗೆ

ಕಲಬುರಗಿ, ಮೇ 3: ನಗರದ ಐತಿಹಾಸಿಕ ಹಾಗೂ ಧಾರ್ಮಿಕ ಕೇಂದ್ರ ಹಾಗೂ...

ಕಲಬುರಗಿ ನೂತನ ಜಿಲ್ಲಾಧಿಕಾರಿಯಾಗಿ ಮುಹಮ್ಮದ್ ಇಕ್ರಾಮುಲ್ಲಾ ಶರೀಫ್ 

ಕಲಬುರಗಿ: ಕಲಬುರಗಿ ಜಿಲ್ಲೆಯ ನೂತನ ಜಿಲ್ಲಾಧಿಕಾರಿಯಾಗಿ 2016ನೆಯ ಬ್ಯಾಚಿನ ಐಎಎಸ್ ಅಧಿಕಾರಿ...