ಕಲಬುರಗಿ| ಶರಣಬಸವೇಶ್ವರ ಸಂಸ್ಥಾನದಲ್ಲಿ 9ನೇ ಪೀಠಾಧಿಪತಿ ಪೂಜ್ಯ ದೊಡ್ಡಪ್ಪ ಅಪ್ಪನವರ ಜನ್ಮದಿನದ ಮಹೋತ್ಸವ

Date:

Share post:

ಕಲಬುರಗಿ: ಶ್ರೀ ಶರಣಬಸವೇಶ್ವರ ಸಂಸ್ಥಾನದ 9ನೇ ಪೀಠಾಧಿಪತಿಗಳಾದ ಪೂಜ್ಯ ಡಾ. ದೊಡ್ಡಪ್ಪ ಅಪ್ಪನವರ ಜನ್ಮದಿನದ ಪ್ರಯುಕ್ತ ಶ್ರೀ ಶರಣಬಸವೇಶ್ವರರ ಕರ್ತೃ ಗದ್ದುಗೆ ಯಲ್ಲಿ ಲಕ್ಷ ಬಿಲ್ವ ಪುಷ್ಪಾರ್ಚನೆ, ಸಾಮೂಹಿಕ ಲಿಂಗಪೂಜೆ ಹಾಗೂ ಲಿಂಗದೀಕ್ಷೆ ಕಾರ್ಯಕ್ರಮಗಳನ್ನು ಭವ್ಯವಾಗಿ ಹಾಗೂ ಭಕ್ತಿಪೂರ್ಣವಾಗಿ ನೆರವೇರಿಸಲಾಯಿತು.

ಈ ದಿವ್ಯ ಕಾರ್ಯಕ್ರಮದ ಸಾನಿಧ್ಯವನ್ನು ಪಾಳಾದ ಗುರುಮೂರ್ತಿ ಶಿವಾಚಾರ್ಯರು ವಹಿಸಿಕೊಂಡು ಭಕ್ತರಿಗೆ ಆಶೀರ್ವಚನ ನೀಡಿದರು.

ಕಾರ್ಯಕ್ರಮದಲ್ಲಿ ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕರಾದ ಹಾಗೂ ವಿಧಾನ ಪರಿಷತ್ ಸದಸ್ಯರಾದ ತಿಪ್ಪಣ್ಣಪ್ಪ ಕಮಕ್ನೂರ್, ಕಾಂಗ್ರೆಸ್ ಮುಖಂಡ ನೀಲಕಂಠರು ಮೂಲೆಗೆ, ಚಲನಚಿತ್ರ ನಟ ಪ್ರಥಮ್, ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಬಸವರಾಜ ದೇಶಮುಖ, ಶರಣಬಸವ ವಿಶ್ವವಿದ್ಯಾಲಯದ ಉಪಕುಲಪತಿ ಡಾ. ಅನಿಲ್ ಕುಮಾರ್ ಬಿಡುವೆ, ಸಂಘದ ಆಡಳಿತಾಧಿಕಾರಿ ಅಲ್ಲಂಪ್ರಭು ದೇಶಮುಖ ಮಲ್ಲಿನಾಥ್ ನಾಗನಹಳ್ಳಿ, ವಿನೋದ್ ಪಾಟೀಲ್ ಸರಡಗಿ,ಶರಣ ಅಲ್ಲಮಪ್ರಭು ಪಾಟೀಲ್ ಸೇರಿದಂತೆ ಅನೇಕ ರಾಜಕೀಯ ಮುಖಂಡರು, ಲಿಂಗಾಯತ ವೇದಿಕೆ ಪದಾಧಿಕಾರಿಗಳು ಹಾಗೂ ಭಕ್ತಾದಿಗಳು ದೊಡ್ಡ ಸಂಖ್ಯೆಯಲ್ಲಿ ಹಾಜರಿದ್ದರು.

 

ಇದೇ ಸಂದರ್ಭದಲ್ಲಿ ವೀರಶೈವ ಲಿಂಗಾಯತ ಮಹಾ ವೇದಿಕೆಯ ಪದಾಧಿಕಾರಿಗಳಾದ ಯುವ ಮುಖಂಡ ಶ್ರೀಧರ್ ಎಂ. ನಾಗನಹಳ್ಳಿ, ಜಿಲ್ಲಾಧ್ಯಕ್ಷ ದಯಾನಂದ ಪಾಟೀಲ್, ಉಪಾಧ್ಯಕ್ಷ ಕಲ್ಯಾಣರಾವ್ ಪಾಟೀಲ್ ಕಣ್ಣಿ, ಪ್ರಧಾನ ಕಾರ್ಯದರ್ಶಿ ಸುನೀಲ್ ಮಹಾಗವಂಕರ್, ಕಾರ್ಯದರ್ಶಿಗಳು ಮಹೇಶ್ ಚಂದ್ರ ಪಾಟೀಲ್ ಕಣ್ಣಿ, ಗುರುರಾಜ್ ಅಂಬಾಡಿ, ಸಹ ಕಾರ್ಯದರ್ಶಿಗಳು ನಿಖಿಲ್ ಬಿಲಗುಂದಿ, ಪರಮೇಶ್ವರ ಯಳಮೆಲಿ, ಕಿರಣ್ ಕಣ್ಣಿ, ಜಿಲ್ಲಾ ಸಂಚಾಲಕರಾದ ಗುರುರಾಜ್ ಸುಂಟಿನೂರ್, ಪ್ರಜ್ವಲ್ ಕೊರಳ್ಳಿ, ಅಜಯ್ ರೆಡ್ಡಿ, ಅವಿನಾಶ್ ಗೊಬ್ಬುರಕರ್, ಮಲ್ಲು ಕೊಂಡೆದ, ವಿಜಯ ಪುರಾಣಿಕಮಠ, ಅಣ್ಣಾ ರಾಯಹಿರೇಗೌಡ, ನಾಗಯ್ಯಮಾಲಾ ಗತ್ತಿ, ಆಕಾಶ್ ಕುಲಕರ್ಣಿ, ಸಚಿನ್, ಶ್ರೀಕಾಂತ್ ಬಿರಾದಾರ್, ನಾಗೇಶ್ ಹಾವನೂರ, ಅವಿನಾಶ್ ಅರಳಿ, ಮಹೇಶ್ ಬಾಳ್ಳಿ, ಆನಂದ್ ಕೇಶವ್, ಶ್ರೀಶೈಲ್ ಪಾಟೀಲ್, ವಿರೇಶ್ ಭೇರನ ಮತ್ತಿತರರು ಉಪಸ್ಥಿತರಿದ್ದರು

Share post:

spot_imgspot_img

Popular

More like this
Related

ಕಲಬುರಗಿ: ಈಜಲು ಹೋದ ಇಬ್ಬರು ಬಾಲಕರ ಸಾವು

ಕಲಬುರಗಿ: ಮಣ್ಣು ಗಣಿಗಾರಿಕೆ ಹೊಂಡದಲ್ಲಿ ಈಜಲು ತೆರಳಿದ್ದ ಇಬ್ಬರು ಬಾಲಕರು ಮುಳುಗಿ...

ಕಲಬುರಗಿ| ಈಶಾನ್ಯ ಶಿಕ್ಷಕರ ಕ್ಷೇತ್ರದ ಚುನಾವಣಾ ಶೇ.86.97 ರಷ್ಟು ದಾಖಲೆ ಮಟ್ಟದ ಮತದಾನ

ಕಲಬುರಗಿ: ಕರ್ನಾಟಕ ವಿಧಾನ ಪರಿಷತ್ ಈಶಾನ್ಯ ಶಿಕ್ಷಕರ ಕ್ಷೇತ್ರದ ಚುನಾವಣೆಯು ಶುಕ್ರವಾರ...

ಕಲಬುರಗಿ| ಈಶಾನ್ಯ ಶಿಕ್ಷಕರ ಮತಕ್ಷೇತ್ರ ಚುನಾವಣೆ: ಶಿಕ್ಷಕರಿಂದ ಭರ್ಜರಿ ಮತದಾನ

ಕಲಬುರಗಿ: ವಿಧಾನ ಪರಿಷತ್ ಪ್ರವೇಶಕ್ಕಾಗಿ ನಡೆಯುತ್ತಿರುವ ಈಶಾನ್ಯ ಶಿಕ್ಷಕರ ಮತಕ್ಷೇತ್ರದ ಚುನಾವಣೆಯಲ್ಲಿ...

ಕಲಬುರಗಿ| ಜಿಲ್ಲೆಯಾದ್ಯಂತ ಸಂಭ್ರಮದ ರಾಜ್ಯೋತ್ಸವ ಆಚರಣೆಗೆ ನಿರ್ಧಾರ: ಜಿಲ್ಲಾಧಿಕಾರಿ ಇಕ್ರಮ್ ಶರೀಫ್

ಕಲಬುರಗಿ: ಮುಂಬರುವ ನವೆಂಬರ್ 1 ರಂದು ಜಿಲ್ಲೆಯಾದ್ಯಂತ ಕರ್ನಾಟಕ ರಾಜ್ಯೋತ್ಸವವನ್ನು ಅತ್ಯಂತ...