ಕಲಬುರಗಿ| ರಾಜು ತಾಳಿಕೋಟಿ ಜವಾರಿ ಮಾತಿನ ಸರದಾರ: ಸುಜಾತಾ ಜಂಗಮಶೆಟ್ಟಿ

Date:

ಕಲಬುರಗಿ: ಉತ್ತರ ಕರ್ನಾಟಕ ಕಂಪನಿ ನಾಟಕಗಳ ಮೂಲಕ ಮನೆ ಮಾತಾಗಿದ್ದ ರಾಜು ತಾಳಿಕೋಟಿ (ಮೂಲ ಹೆಸರು: ರಾಜೇಸಾಬ ಮುಕ್ತುಮಸಾಬ್ ತಾಳಿಕೋಟಿ) ಅವರು ನಮ್ಮ ಉತ್ತರ ಕರ್ನಾಟಕದ ಜವಾರಿ ಮಾತಿನ ಸರದಾರರಾಗಿದ್ದರು ಎಂದು ಕಲಬುರಗಿ ರಂಗಾಯಣ ನಿರ್ದೇಶಕರಾದ ಸುಜಾತಾ ಜಂಗಮ ಶೆಟ್ಟಿ ಅವರು ರಾಜು ತಾಳಿಕೋಟಿ ಸ್ಮರಿಸಿಕೊಂಡರು.

ಸೋಮವಾರ ಹೃದಯಘಾತದಿಂದ ನಿಧನರಾದ ವೃತ್ತಿ ರಂಗಭೂಮಿ, ಸಿನಿಮಾ ಮತ್ತು ಟಿವಿ ಲೋಕದ ಖ್ಯಾತ ಕಲಾವಿದ ರಾಜು ತಾಳಿಕೋಟಿ ಅವರಿಗೆ ಕಲಬುರಗಿ ರಂಗಾಯಣದಲ್ಲಿ ಹಮ್ಮಿಕೊಳ್ಳಲಾಗಿದ್ದ ರಂಗ ನಮನದಲ್ಲಿ ಮಾತನಾಡಿದ ಅವರು ನಾವೆಲ್ಲ ಒಟ್ಟೊಟ್ಟಿಗೆ ಬೇರೆ ಬೇರೆ ರಂಗಾಯಣಗಳಿಗೆ ಕಳೆದ ವರ್ಷ ಸರ್ಕಾರದಿಂದ ನಿರ್ದೇಶಕರುಗಳಾಗಿ ಆಯ್ಕೆಯಾಗಿದ್ದನ್ನು ಸ್ಮರಿಸಿಕೊಂಡು ಅವರ ಅಗಲಿಕೆ ಕನ್ನಡ ವೃತ್ತಿ ರಂಗಭೂಮಿಗೆ ತುಂಬಲಾರದ ನಷ್ಟ ಎಂದು ಹೇಳಿದರು.

ಧಾರವಾಡ ರಂಗಾಯಣದ ನಿರ್ದೇಶಕರನ್ನಾಗಿ ಸರ್ಕಾರಅವರನ್ನು ಆಯ್ಕೆ ಮಾಡಿದಾಗ ಬಹುತೇಕರು ಅಸಹನೆ ವ್ಯಕ್ತಪಡಿಸಿದ್ದರು, ಇದೆಲ್ಲವನ್ನೂ ಮೀರಿ ಅವರು ಎಲ್ಲವನ್ನು ನಗುತ್ತಲೇ ಸ್ವೀಕರಿಸಿ ಧಾರವಾಡ ರಂಗಾಯಣದ ಬಗ್ಗೆ ಹಲವು ಕನಸುಗಳನ್ನು ಹಂಚಿಕೊಂಡಿದ್ದರು. ಮೊದಲ ಭೇಟಿಗೆ ಸಾಕಷ್ಟು ಪರಿಚಯದವರಂತೆ ಮಾತಾಡಿಸಿದ ನೆನಪು ಇನ್ನೂ ಮಾಸಿಲ್ಲ ಎಂದರು.

ಎಲ್ಲರೂ ಇಂದಲ್ಲ ನಾಳೆ ಹೋಗುತ್ತೇವೆ, ಆದರೆ ಹೋದವರು ಬಿಟ್ಟು ಹೋದ ಹೆಜ್ಜೆಗಳು ನೆನಪಿರುತ್ತವೆ. ಅವರೊಬ್ಬ ಉತ್ತರ ಕರ್ನಾಟಕದ ಜವಾರಿ ಮಾತಿನ ಸರದಾರ, ತಾಳಿಕೋಟಿಯವರು ಲಕ್ಷಾಂತರ ಅಭಿಮಾನಿಗಳನ್ನು ಹೊಂದಿದ್ದಾರೆ. ಕೇವಲ ನಾಲ್ಕನೆ ಕ್ಲಾಸ್ ಓದಿ, ಲಾರಿ ಚಾಲಕರಾಗಿ ಕೆಲಸ ಆರಂಭಿಸಿ ನಂತರ ರಂಗಭೂಮಿ ಕಡೆ ಬಂದವರು, ಕಲಿಯುಗದ ಕುಡುಕ ನಾಟಕದ ಮೂಲಕ ಪ್ರತಿ ಮನೆ-ಮನೆಯಲ್ಲಿ ಪ್ರಖ್ಯಾತಿ ಪಡೆದವರು. ಅವರ ಆತ್ಮಕ್ಕೆ ಶಾಂತಿ ಸಿಗಲೆಂದು ಪ್ರಾರ್ಥಿಸಿದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕಲಬುರಗಿ ಜಂಟಿ ನಿರ್ದೇಶಕ ಬಸವರಾಜ ಹೂಗಾರ ಮಾತನಾಡಿ, ಕೇವಲ ಒಂದು ತಿಂಗಳ ಹಿಂದೆ ಕಲಬುರಗಿ ರಂಗಾಯಣಕ್ಕೆ ಭೇಟಿ ನೀಡಿದ್ದರು, ಜೀವನ ತುಂಬಾ ಕ್ಷಣಿಕ, ಇಂದು ಯಾರೂ ಯಾವಾಗ ಹೋಗ್ತಾರೆ ಎನ್ನುವುದು ಗೊತ್ತಾಗುವುದಿಲ್ಲ ಎಂದು ಆಶ್ಚರ್ಯ ವ್ಯಕ್ತಪಡಿಸಿದರು.

ರಾಜು ತಾಳಿಕೋಟಿಯವರ ಸರಳ ಅಭಿನಯ ನೋಡುಗರನ್ನು ಮನಸೋರೆಗೊಳಿಸಿತ್ತು. ರಾಜು ಅವರು ಅಷ್ಟೊಂದು ಪ್ರತಿಭೆ ಇದ್ದರೂ ಕೂಡ ಹೊಟ್ಟೆಪಾಡಿಗಾಗಿ ಡಬಲ್ ಮೀನಿಂಗ್ ಪದಬಳಕೆ ಹೆಚ್ಚಿತ್ತು ಎನ್ನುವುದು ಅವರ ಮೇಲಿದ್ದ ಅಪವಾದ ಇದ್ದರು ಸಹ ಜನರಿಗೆ ಮನರಂಜನೆ ನೀಡುವುದು ಅವರ ಮುಖ್ಯ ಉದ್ದೇಶವಾಗಿತ್ತು, ಉತ್ತರ ಕರ್ನಾಟಕದಲ್ಲಿ ಪ್ರಸಿದ್ದಿಯಾಗಿದ್ದ ಅವರಿಗೆ ಸಿನಿಮಾ ಹಾಗೂ ಟಿವಿ ರಾಜ್ಯಕ್ಕೆ ಪರಿಚಯಿಸಿತ್ತು. ರಂಗಭೂಮಿಯನ್ನು ರಂಗಭೂಮಿಯನ್ನಾಗಿ ನೋಡುವ ಕಾಲ ಬಂದಾಗ ಕಲೆಗೆ ಬೆಲೆ. ಟಿವಿ-ಸಿನಿಮಾ ಗಳಲ್ಲಿ ಸಹಜ ನಟನೆಯನ್ನು ಪರಿಚಯಿಸಿದವರು. ಅವರ ಕಲಾರಾಧನೆ ನಮ್ಮೆಲ್ಲರಿಗೂ ಮಾರ್ಗದರ್ಶನ ಎಂದರು.

ಕಲಬುರಗಿ ರಂಗಾಯಣ ಮಾಜಿ ನಿರ್ದೇಶಕ ಪ್ರಭಾಕರ್ ಜೋಷಿ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಹಲವು ಸೃಜನಶೀಲ ವ್ಯಕ್ತಿಗಳ ಸಾವು ತುಂಬಾ ನೋವುಂಟು ಮಾಡಿದೆ, ಸೃಜನಶೀಲರ ಹೃದಯ ಬಹುಶಃ ತುಂಬಾ ಸೂಕ್ಷ್ಮವಾಗಿರಬೇಕು. ಬೇರೆ ಬೇರೆ ಸಂದರ್ಭಗಳಲ್ಲಿ ಅವರನ್ನು ನೆನಪಿಸಿಕೊಳ್ಳುವುದಷ್ಟೆ ಅವರಿಗೆ ನಾವು ಸಲ್ಲಿಸುವ ಗೌರವ. ಕಂಪನಿ ನಾಟಕದಿಂದ ಬಂದವರು ಧಾರವಾಡ ರಂಗಾಯಣಕ್ಕೆ ಸರ್ಕಾರ ನಿರ್ದೇಶಕರನ್ನಾಗಿ ನೇಮಿಸಿತ್ತು. ಇದೊಂದು ದೊಡ್ಡ ಸಾಧನೆ ಎಂದು ಹೇಳಿದರು.

ಮೈಸೂರು ರಂಗಾಯಣದ ನಿವೃತ್ತ ಹಿರಿಯ ಕಲಾವಿದ ಹುಲುಗಪ್ಪ ಕಟ್ಟಿಮನಿಯವರು ಮಾತನಾಡಿ, ತಾಳಿಕೋಟಿ ಬಿಚ್ಚುಮನಸ್ಸಿನ ಜವಾರಿ ಮನುಷ್ಯ, ನಮಗಿಂತ ಹೆಚ್ಚಾಗಿ ವಿಜಯಪುರದ ಜನರಿಗೆ ಅವರು ಡಾ ರಾಜಕುಮಾರ್ ಇದ್ದಂತೆ. ಬಡಜನರ ಕೂಲಿಕಾರ್ಮಿಕರ ಮನರಂಜನೆಯ ಹೀರೋ ಆಗಿ ಮೆರೆದವರು, ಇಂತಹವರಿಗೆ ಸಾವಿಲ್ಲ, ಜನಮಾನಸದಲ್ಲಿ ಉಳಿದವರಿಗೆ ಸಾವಿಲ್ಲ ಎಂದು ಹೇಳಿದರು.

ಯಾವುದೇ ಕಲೆಯ ಮೂಲಕ ಜನರನ್ನು ತಲುಪುವುದು ಕಲಾವಿದರ ಧರ್ಮ, ಉತ್ತರ ಕರ್ನಾಟಕದ ಕಂಪನಿ ನಾಟಕದ ದೃವತಾರೆ ರಾಜು ತಾಳಿಕೋಟೆ. ಅವರು ಮಾತಾಡಿದ್ರೆ ನಗು ಬರುತ್ತಿತ್ತು, ಒತ್ತಡ ರಹಿತ ಜೀವನದಲ್ಲಿ ಬದುಕಲು ಹೊರಟ ಮನುಷ್ಯನಿಗೆ ಹೃದಯ ಸ್ತಂಭನವಾಗಿರುವುದು ದುರಂತ ಎಂದರು.

ಕಾರ್ಯಕ್ರಮದ ಕೊನೆಯಲ್ಲಿ ಕಲಬುರಗಿ ರಂಗಾಯಣದ ಕಲಾವಿದರು ಅಗಲಿದ ರಂಗಭೂಮಿಯ ಚೇತನಕ್ಕೆ ರಂಗ ಗೀತಗಾಯನದ ಮೂಲಕ ರಂಗನಮನ ಸಲ್ಲಿಸಿದರು.

LEAVE A REPLY

Please enter your comment!
Please enter your name here

Share post:

spot_imgspot_img

Popular

More like this
Related

ಕಲಬುರಗಿ| ಜಿಲ್ಲೆಯಾದ್ಯಂತ ಮತದಾರರ ವಿಶೇಷ ಮಿಂಚಿನ ನೋಂದಣಿ ಅಭಿಯಾನ: ಬಿ.ಫೌಜಿಯಾ ತರನ್ನುಮ್

ಕಲಬುರಗಿ: ಈಶಾನ್ಯ ಶಿಕ್ಷಕರ ಕ್ಷೇತ್ರದ ಮತದಾರರ ಪಟ್ಟಿ ಪರಿಷ್ಕರಣೆ ಕಾರ್ಯ ಈಗಾಗಲೇ...

ಕಲಬುರಗಿ| ಸಿಲಿಂಡರ್ ಸ್ಫೋಟ; ಅದೃಷ್ಟವಶಾತ್ ನಾಲ್ವರು ಪಾರು

ಕಲಬುರಗಿ: ಸಿಲಿಂಡರ್ ಸ್ಫೋಟಗೊಂಡ ಪರಿಣಾಮ ಮನೆಯಲ್ಲಿದ್ದ ಚಿನ್ನಾಭರಣ, ನಗದು ಹಣ ಸೇರಿದಂತೆ...

ಕಲಬುರಗಿ| ದಾರಿದ್ರ್ಯ ರಹಿತ ಸಮಾಜ ನಮ್ಮೆಲ್ಲರ ಕನಸು: ಡಾ.ಜ್ಯೋತಿ.ಕೆ.ಎಸ್

ಕಲಬುರಗಿ: ನಗರದ ಶ್ರೀಮತಿ ವೀರಮ್ಮ ಗಂಗಸಿರಿ ಮಹಿಳಾ ಮಹಾವಿದ್ಯಾಲಯದ ಅರ್ಥಶಾಸ್ತ್ರ ವಿಭಾಗದ...

ಕಲಬುರಗಿ| ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯ ಸುವರ್ಣ ಮಹೋತ್ಸವ

ಕಲಬುರಗಿ: ನೈಸರ್ಗಿಕ ಸಂಪತನ್ನು ಹಿತ-ಮಿತವಾಗಿ ಬಳಕೆ ಮಾಡದೆ ಮಾನವ ದುರಾಸೆಯಿಂದ ಅವ್ಯಾಹತವಾಗಿ...