ಕಲಬುರಗಿ| ಅಂಬಿಗರ ಚೌಡಯ್ಯ ಮೂರ್ತಿ ಭಗ್ನ ಮಾಡಿದ ಆರೋಪಿಗಳನ್ನು ಬಂಧಿಸಿ ಜೈಲಿಗಟ್ಟಿ: ಬಾಬುರಾವ್‌ ಚಿಂಚನಸೂರ ಒತ್ತಾಯ

Date:

Share post:

ಕಲಬುರಗಿ: ಚಿತ್ತಾಪುರ ಮತಕ್ಷೇತ್ರದ ಮುತ್ತಗಾ ಗ್ರಾಮದಲ್ಲಿ ನಿಜಶರಣ ಅಂಬಿಗರ ಚೌಡಯ್ಯ ನವರ ಮೂರ್ತಿ ಭಗ್ನಗೊಳಿಸಿ ಅವಮಾನಿಸಿದ ಕಿಡಿಗೇಡಿಗಳನ್ನು 24 ಗಂಟೆಗಳಲ್ಲಿ ಬಂಧಿಸಿ ಜೈಲಿಗಟ್ಟಬೇಕು ಎಂದು ಮಾಜಿ ಸಚಿವ, ಅಂಬಿಗರ ಚೌಡಯ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷ ಬಾಬುರಾವ್‌ ಚಿಂಚನಸೂರ ಒತ್ತಾಯಿಸಿದ್ದಾರೆ.

ಮುತ್ತಗಾ ಗ್ರಾಮಕ್ಕೆ ಭೇಟಿ ನೀಡಿ ಭಗ್ನಗೊಂಡ ಚೌಡಯ್ಯ ನವರ ಮೂರ್ತಿಯನ್ನು ಪರಿಶೀಲಿಸಿದ ನಂತರ ಮಾತನಾಡಿದ ಅವರು, ಅಂಬಿಗರ ಚೌಡಯ್ಯ ಮೂರ್ತಿಯ ಅವಮಾನ ಕೇವಲ ಮುತ್ತಗಾ ಗ್ರಾಮದವರಿಗೆ ನೋವು ತಂದಿಲ್ಲ, ಬದಲಾಗಿ ಇಡೀ ರಾಜ್ಯದ ಸಮಸ್ತ ಕೋಲಿ ಸಮಾಜದವರಿಗೆ ನೋವುಂಟು ಮಾಡಿದೆ ಹಾಗೂ ಕೊಡಲಿ ಪೆಟ್ಟು ಬಿದ್ದಂತಾಗಿದೆ ಎಂದು ಭಾವೋದ್ವೇಗದಿಂದ ಹೇಳಿದರು.

 

ಮೂರ್ತಿಯನ್ನು ಭಗ್ನಗೊಳಿಸಿದ ಕಿಡಿಗೇಡಿಗಳನ್ನು ತಕ್ಷಣ ಪತ್ತೆ ಹಚ್ಚಿ ಕಠಿಣ ಶಿಕ್ಷೆಗೆ ಗುರಿ ಪಡಿಸಬೇಕು ಎಂದು ನಾನು ಇಂದೇ ರಾಜ್ಯದ ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ ಹಾಗೂ ಗೃಹ ಮಂತ್ರಿಗಳಿಗೆ ಮಾತನಾಡುತ್ತೇನೆ ಎಂದು ಹೇಳಿದರು.

ಅಂಬಿಗರ ಚೌಡಯ್ಯನವರ ಹೊಸ ಮೂರ್ತಿ ಪ್ರತಿಷ್ಠಾಪನೆ ಮಾಡಿ ಅದಕ್ಕೆ ತಗಲುವ ಖರ್ಚನ್ನು ನನ್ನ ಧರ್ಮಪತ್ನಿ ಅಮರೇಶ್ವರಿ ಚಿಂಚನಸೂರ ಅವರು ಕೊಡಲು ಸಿದ್ಧರಿದ್ದಾರೆ‌. ಬರುವ ಜನವರಿ 21 ರಂದು ಅಂಬಿಗರ ಚೌಡಯ್ಯ ಜಯಂತಿ ಒಳಗಾಗಿ ಹೊಸ ಮೂರ್ತಿ ಮಾಡಿಸಿ ಜಯಂತಿ ದಿನದಂದು ಅನಾವರಣ ಮಾಡೋಣ ಎಂದು ಹೇಳಿದರು.

ಈ ಸಂದರ್ಭದಲ್ಲಿ ಭೀಮಣ್ಣ ಸಾಲಿ, ಮುತ್ತಗಾ ಕೋಲಿ ಸಮಾಜದ ಅಧ್ಯಕ್ಷ ಶಿವರಾಜ್‌ ನಾಟೀಕಾರ, ಬಸವರಾಜ ಜೀರಕಲ್‌, ವಿಜಯಕುಮಾರ್ ನಾಟೀಕಾರ, ಸುಧಾಕ‌ರ್ ರಾಮಗುಂಡ, ದೇವಣ್ಣ ಹಳ್ಳಿ, ರಾಹುಲ್ ಜೀರಕಲ್, ಮಲ್ಲೇಶಿ ಜೀರಕಲ್, ಗಜಣ್ಣ ಭಂಕೂರ, ಮಂಜು ವಾಲೀಕಾರ ಶಂಕರವಾಡಿ ಸೇರಿದಂತೆ ಇತರರು ಇದ್ದರು.

Share post:

spot_imgspot_img

Popular

More like this
Related

ಕಲಬುರಗಿ| ಕಾಳ‌ ಸಂತೆಯಲ್ಲಿ ಸಿಲಿಂಡರ್ ಮಾರಾಟವಾದರೆ ಡಿಸ್ಟ್ರಿಬೂಟರ್ ಮೇಲೆ ಕ್ರಮ: ಜಿಲ್ಲಾಧಿಕಾರಿ ಇಕ್ರಮ್‌ ಶರೀಫ್

ಕಲಬುರಗಿ: ಮದ್ಯ ಪ್ರಾಚ್ಯ ದೇಶದಲ್ಲಿನ‌ ಬಿಕ್ಕಟ್ಟಿನ ನಡುವೆ ಜಿಲ್ಲೆಯಲ್ಲಿ ಎಲ್ಲಿಯೆ ಕಾಳ...

ಕಲಬುರಗಿ| ಕೋಮು ದ್ವೇಷ ಭಾಷಣ ಆರೋಪ; ಬಿಜೆಪಿ ಮಾಜಿ ಶಾಸಕ ದತ್ತಾತ್ರೇಯ ಪಾಟೀಲ್ ವಿರುದ್ಧ ಎಫ್ಐಆರ್ ದಾಖಲು

ಕಲಬುರಗಿ: "ಕಲಬುರಗಿಯನ್ನು ಪಾಕಿಸ್ತಾನ ರೀತಿಯಲ್ಲಿ ಮಾಡಲು ಇಲ್ಲಿನ ನಾಯಕರು ಹಾಗೂ ಸರಕಾರ...

ಕಲಬುರಗಿ| ಭೀಕರ ಅಪಘಾತ: ಒಂದೇ ಕುಟುಂಬದ ಐವರು ದುರ್ಮರಣ 

ಕಲಬುರಗಿ: ಕ್ರೂಸರ್ ಹಾಗೂ ಲಾರಿ ನಡುವೆ ಭೀಕರ ಅಪಘಾತ ಸಂಭವಿಸಿ ಒಂದೇ...

ಕಲಬುರಗಿ| ಆಕಾಶವಾಣಿ  “ಹಲೋ ಪೊಲೀಸ್ ಕಮಿಷನರ್” ನೇರ ಫೋನ್ ಇನ್ ಕಾರ್ಯಕ್ರಮ

ಕಲಬುರಗಿ: ಆಕಾಶವಾಣಿ ಕಲಬುರಗಿ ಕೇಂದ್ರವು ಮೇ 22(ಶುಕ್ರವಾರ) ರ ಬೆಳಗ್ಗೆ 11...