ಕಲಬುರಗಿ| ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಡಿಸಿ ಕಚೇರಿ ಎದುರು ಪ್ರತಿಭಟನೆ

Date:

Share post:

ಕಲಬುರಗಿ: ಭಾರತ ಮುಕ್ತಿ ಮೋರ್ಚಾ ಮತ್ತು ಯುನಿಟಿ ಆಫ್ ಮೂಲನಿವಾಸಿ ಬಹುಜನ ಸಂಘಟನೆ ಹಾಗೂ ಸ್ಲಂ ಜನರ ಸಂಘಟನೆಯ ನೂರಾರು ಕಾರ್ಯಕರ್ತರು ಸರ್ದಾರ ವಲ್ಲಾಭಾಯಿ ಪಟೇಲ್ ವೃತ್ತದಿಂದ ಪ್ರತಿಭಟನೆ ಮಾಡುತ್ತಾ ಜಿಲ್ಲಾಧಿಕಾರಿಗಳ ಕಚೇರಿವರೆಗೆ ಆಗಮಿಸಿ ನ್ಯಾ.ಬಿ.ಆರ್. ಗವಾಯಿ ಮೇಲೆ ಶೂ ಎಸೆದ ರಾಕೇಶ ಕಿಶೋರ ವಿರುದ್ದ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಹಾಗೂ ಸಮಾಜದ ವಿವಿಧ ಬೇಡಿಕೆಗಳನ್ನು ಈಡೇರಿಸಬೇಕೆಂದು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.

ಸುಪ್ರೀಂ ಕೋರ್ಟನ ಮುಖ್ಯ ನ್ಯಾಯಾಧೀಶ ಬಿ.ಆರ್ ಗವಾಯಿಯವರ ಮೇಲೆ ಶೂ ಎಸೆಯಲು ಪ್ರಯತ್ನಿಸಿದ ರಾಕೇಶ ಕೀಶೋರರವರ ಮೇಲೆ ಗುಂಡಾ ಕಾಯ್ದೆ ಪ್ರಕರಣ ದಾಖಲಿಸಿ ಗಡಿ ಪಾರು ಮಾಡಿ ಸೂಕ್ತ ಕ್ರಮ ಜರುಗಿಸಬೇಕು, ತಾಲೂಕ ಚಿಂಚೋಳಿ ಮತ್ತು ಕಾಳಗಿ ತಾಲೂಕಿನಲ್ಲಿ ಕೇಂದ್ರ ಸ್ಥಾನದಲ್ಲಿರದ ತಾಲೂಕ ಪಂಚಾಯತ ಕಾರ್ಯನಿರ್ವಾಹಕ ಅಧಿಕಾರಿಗಳು. ಪಂಚಾಯತ್ ರಾಜ್ ಸಾಹಯಕ ಅಭಿಯಂತರರು ಚಿಂಚೋಳಿ ಸಾಹಯಕ ನಿರ್ದೇಶಕರು ತೋಟಗಾರಿಕೆ ಇಲಾಖೆ ಕೆಈಬಿ ಸಾಹಯಕ ಅಭಿಯಂತರರು ಇವರಿಗೆ ಸೂಕ್ತ ಮಾರ್ಗದರ್ಶನ ನೀಡಿ ಸಾರ್ವಜನಿಕರಿಗೆ ತೊಂದರೆಯಾಗದಂತೆ ಮತ್ತು ಇಲಾಖೆಗಳ ಬಗ್ಗೆ ಜನರಿಗೆ ಮಾಹಿತಿ ನೀಡುವಂತೆ ಸೂಚಿಸಬೇಕು, ತಾಲೂಕ ಚಿಂಚೋಳಿ ಮತ್ತು ಕಾಳಗಿ ತಾಲೂಕಿನಲ್ಲಿ ಬಿ.ಸಿ.ಎಮ್ ವಸತಿ ನಿಲಯಗಳಿಗೆ ಮತ್ತು ಸಮಾಜ ಕಲ್ಯಾಣ ವಸತಿ ನಿಲಯಗಳಿಗೆ ಮತ್ತು ಮೈನಾರಿಟಿ ವಸತಿ ನಿಲಯಗಳಿಗೆ ಆಹಾರ ಧಾನ್ಯ ಸರಬರಾಜು ಮಾಡುವ ಗುತ್ತಿಗೆದಾರರು ಪ್ರತಿಯೊಂದು ವಸತಿ ನಿಲಯಗಳಿಗೆ ಆಹಾರ ಧಾನ್ಯ ಸರಬರಾಜು ಮಾಡದೇ ವಸತಿ ನಿಲಯಗಳ ಮೆಲ್ವಿಚಾರಕರಿಗೆ ಹಣ ನೀಡಿ ವಿದ್ಯಾರ್ಥಿಗಳ ಹೊಟ್ಟೆ ಮೇಲೆ ಹೊಡೆಯುತ್ತಿರುವ ಗುತ್ತಿಗೆದಾರರ ಪರವಾನಿಗೆ ಕಪ್ಪು ಪಟ್ಟಿಗೆ ಸೇರಿಸಿ ಸೂಕ್ತ ಕ್ರಮ ಜರುಗಿಸಬೇಕು, ರಾಜಪುರ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಬರುವ ಸಾಲೊಳ್ಳಿ ಗ್ರಾಮದ ಮೈಬು ಸುಬಾನಿ ದರ್ಗಾದಿಂದ ಬಿಲಾಲ್ ಮಸೀದಿವರೆಗೆ ಸಿಸಿ ರಸ್ತೆ ನಿರ್ಮಿಸಿಕೊಡಬೇಕು ಎಂದು ಆಗ್ರಹಿಸಿದ್ದರು.

ಐನಾಪುರ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಸಾರ್ವಜನಿಕ ಗ್ರಂಥಾಲಯವು ಈಗಿರುವ ಪೆÇೀಸ್ಟ್ ಕಚೇರಿಯಿಂದ ಪಂಚಾಯತ್ ಮಹಡಿಯ ಮೇಲೆ ಸ್ಥಳಾಂತರ ಮಾಡಬೇಕು, ಕೊಡ್ಲಿ ಗ್ರಾಮ ಪಂಚಾಯತ್ ವ್ಯಾಪ್ತಿ ಯಲ್ಲಿ ಬರುವ ಸುಂಠಾಣ್ ಗ್ರಾಮದಲ್ಲಿ ಸಾರ್ವಜನಿಕ ಮಹಿಳಾ ಶೌಚಾಲಯ ನಿರ್ಮಿಸಿ ಕೂಡಬೇಕು, ಕೊಡ್ಲಿ ಗ್ರಾಮ ಪಂಚಾಯತ್ ವ್ಯಾಪ್ತಿ ಯಲ್ಲಿ ಬರುವ ಸುಂಠಾಣ್ ಗ್ರಾಮದಲ್ಲಿ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾದ ಜನಜೀವನ ಕಳಪೆ ಕಾಮಗಾರಿಯಿಂದ ಮನೆ ಮನೆಗೆ ನೀರು ಬರದೆ ಜನರು ತೊಂದರಪಡುತ್ತಿದ್ದು ಕೂಡಲೆ ತನಿಖೆ ಕ್ರಮ ಕೈಗೊಳ್ಳಬೇಕು, ಚಂದನಕೇರಾ ಗ್ರಾಮ ಪಂಚಾಯಿತಿಯ ಚಂದನಕೇರಾ ಗ್ರಾಮದ 2 ನೇ ವಾರ್ಡ್ ನಲ್ಲಿ ಕುಡಿಯುವ ನೀರಿನ ಸಮಸ್ಯೆ ಬಗ್ಗಿಹರಿಸಬೇಕು, ಚಿಂಚೋಳಿ ತಾಲೂಕಿನ ಬಸಂತಪೂರ ಗ್ರಾಮ ಪಂಚಾಯಿತಿ ನಿಡಗುಂದಾ ಗ್ರಾಮ ಪಂಚಾಯಿತಿ ಗಡಿಕೇಶ್ವಾರ ಗ್ರಾಮ ಪಂಚಾಯಿತಿ ವೆಂಕಟಪೂರ ಗ್ರಾಮ ಪಂಚಾಯಿತಿ ಮತ್ತು ಸಿರೊಳ್ಳಿ ಗ್ರಾಮ ಪಂಚಾಯಿತಿ ಗಳಲ್ಲಿ 2022-2023 ರಿಂದ 2024-2025 ರಿ ವರೆಗೆ 15 ನೇ ಹಣಕಾಸು ಮತ್ತು ಅಂಗವಿಕಲರ ಅನುದಾನದಲ್ಲಾದ ಅವ್ಯವಹಾರದ ಬಗ್ಗೆ ತನಿಖೆ ಮಾಡಿ ಅಧಿಕಾರಿಗಳ ಮೇಲೆ ಸೂಕ್ತ ಕ್ರಮ ಜರುಗಿಸಬೇಕು ಎಂದು ಮನವಿಯಲ್ಲಿ ತಿಳಿಸಿದ್ದಾರೆ.

ಈ ಸಂದರ್ಭದಲ್ಲಿ ಮಾರುತಿ ಗಂಜಗೇರಿ, ಅಲ್ಲಮಪ್ರಭು ನಿಂಬರ್ಗಾ, ಮೋಹನ್ ಐನಾಪುರ, ಗೋಪಾಲ ಗಾರಂಪಳ್ಳಿ, ಜೈಭೀಮ ಹೋಳಕರ್, ಸುಂಠಾಣ, ಹರೀಶ ದೇಗಲ್ಮಡಿ, ಮಲ್ಲಿಕಾರ್ಜುನ ಗಂವ್ಹಾರ, ಹರ್ಷವರ್ಧನ, ಅವಿರೋಧ ಚಂದನಕೇರಾ, ರೇಣುಕಾ, ಲಲಿತಾ, ಶೋಭಾ, ಗುಂಡಮ್ಮ, ರಾಧಿಕಾ, ಸರಸ್ವತಿ, ಜಗಮ್ಮ, ಪಾರ್ವತಿ, ಸೋಹೆಲ್ ಸೇರಿದಂತೆ ಇನ್ನಿತರರಿದ್ದರು.

Share post:

spot_imgspot_img

Popular

More like this
Related

ಕಲಬುರಗಿ| ಜಿಲ್ಲೆಯಾದ್ಯಂತ ಮತದಾರರ ವಿಶೇಷ ಮಿಂಚಿನ ನೋಂದಣಿ ಅಭಿಯಾನ: ಬಿ.ಫೌಜಿಯಾ ತರನ್ನುಮ್

ಕಲಬುರಗಿ: ಈಶಾನ್ಯ ಶಿಕ್ಷಕರ ಕ್ಷೇತ್ರದ ಮತದಾರರ ಪಟ್ಟಿ ಪರಿಷ್ಕರಣೆ ಕಾರ್ಯ ಈಗಾಗಲೇ...

ಕಲಬುರಗಿ| ಸಿಲಿಂಡರ್ ಸ್ಫೋಟ; ಅದೃಷ್ಟವಶಾತ್ ನಾಲ್ವರು ಪಾರು

ಕಲಬುರಗಿ: ಸಿಲಿಂಡರ್ ಸ್ಫೋಟಗೊಂಡ ಪರಿಣಾಮ ಮನೆಯಲ್ಲಿದ್ದ ಚಿನ್ನಾಭರಣ, ನಗದು ಹಣ ಸೇರಿದಂತೆ...

ಕಲಬುರಗಿ| ದಾರಿದ್ರ್ಯ ರಹಿತ ಸಮಾಜ ನಮ್ಮೆಲ್ಲರ ಕನಸು: ಡಾ.ಜ್ಯೋತಿ.ಕೆ.ಎಸ್

ಕಲಬುರಗಿ: ನಗರದ ಶ್ರೀಮತಿ ವೀರಮ್ಮ ಗಂಗಸಿರಿ ಮಹಿಳಾ ಮಹಾವಿದ್ಯಾಲಯದ ಅರ್ಥಶಾಸ್ತ್ರ ವಿಭಾಗದ...

ಕಲಬುರಗಿ| ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯ ಸುವರ್ಣ ಮಹೋತ್ಸವ

ಕಲಬುರಗಿ: ನೈಸರ್ಗಿಕ ಸಂಪತನ್ನು ಹಿತ-ಮಿತವಾಗಿ ಬಳಕೆ ಮಾಡದೆ ಮಾನವ ದುರಾಸೆಯಿಂದ ಅವ್ಯಾಹತವಾಗಿ...