ಕಲಬುರಗಿ: 2025ರ ದೀಪಾವಳಿ ಹಬ್ಬದ ಸಂದರ್ಭದಲ್ಲಿ ಪ್ರಯಾಣಿಕರ ಹೆಚ್ಚುವರಿ ದಟ್ಟಣೆಯನ್ನು ನಿವಾರಿಸಲು ರೈಲ್ವೆ ಇಲಾಖೆಯು ಎಸ್.ಎಮ್.ವಿ.ಟಿ. (SMVT) ಬೆಂಗಳೂರು ಮತ್ತು ಬೀದರ್ ನಡುವೆ ವಿಶೇಷ ರೈಲು 18 ಟ್ರಿಪ್‍ಗಳಲ್ಲಿ ಸಂಚರಿಸಲಿದೆ. ಈ ರೈಲು ಸೋಲಾಪುರ ವಿಭಾಗದ ಮೂರು ರೈಲ್ವೆ ನಿಲ್ದಾಣಗಳಾದ ಕಲಬುರಗಿ, ಶಹಾಬಾದ್ ಮತ್ತು ವಾಡಿ ನಿಲ್ದಾಣಗಳಲ್ಲಿ ನಿಲ್ಲಲಿದೆ ಎಂದು ಕೇಂದ್ರ ರೈಲ್ವೆಯ ಸೋಲಾಪುರ ವಿಭಾಗದ ಸಾರ್ವಜನಿಕ ಸಂಪರ್ಕ ಇಲಾಖೆಯ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಎಸ್.ಎಮ್.ವಿ.ಟಿ. (SMVT) ಬೆಂಗಳೂರು-ಬೀದರ್ ವಿಶೇಷ ರೈಲು (ರೈಲು ಸಂಖ್ಯೆ 06539) ಈಗ ಪ್ರತಿ ಶುಕ್ರವಾರ ಮತ್ತು ಭಾನುವಾರದಂದು 2025ರ ಅಕ್ಟೋಬರ್ 31 ರವರೆಗೆ 9 ಟ್ರಿಪ್‍ಗಳಲ್ಲಿ ಸಂಚರಿಸಲಿದೆ. ಈ ಹಿಂದೆ ಈ ರೈಲು ಸೆಪ್ಟೆಂಬರ್ 28 ರವರೆಗೆ ಸಂಚರಿಸಲಿದೆ ಎಂದು ತಿಳಿಸಲಾಗಿತ್ತು.
ಅದೇ ರೀತಿ ಬೀದರ್- ಎಸ್.ಎಮ್.ವಿ.ಟಿ. (SMVT) ಬೆಂಗಳೂರು (ರೈಲು ಸಂಖ್ಯೆ 06540) ವಿಶೇಷ ರೈಲು ಈಗ ಪ್ರತಿ ಶನಿವಾರ ಮತ್ತು ಸೋಮವಾರದಂದು 2025ರ ನವೆಂಬರ್ 1 ರವರೆಗೆ (9 ಟ್ರಿಪ್‍ಗಳಲ್ಲಿ) ಸಂಚರಿಸಲಿದೆ. ಈ ಹಿಂದೆ ಈ ರೈಲು ಸೆಪ್ಟೆಂಬರ್ 29 ರವರೆಗೆ ಸಂಚರಿಸಲಿದೆ ಎಂದು ತಿಳಿಸಲಾಗಿತ್ತು.
ವಿಶೇಷ ರೈಲಿಗೆ ಟಿಕೇಟ್ ಕಾಯ್ದಿರಿಸುವಿಕೆಗಳು ಹಾಗೂ ಮತ್ತಿತರ ಹೆಚ್ಚಿನ ಮಾಹಿತಿಗಾಗಿ www.irctc.co.in ವೆಬ್‍ಸೈಟ್‍ನ್ನು, ಯು.ಟಿ.ಎಸ್. (UTS) ಅಪ್ಲಿಕೇಶನ್ ಮೂಲಕ, ಈ ವಿಶೇಷ ರೈಲುಗಳ ನಿಲುಗಡೆಗಳಲ್ಲಿ ವಿವರವಾದ ಸಮಯಕ್ಕಾಗಿ, ಮತ್ತಿತರ ಹೆಚ್ಚಿನ ಮಾಹಿತಿಗಾಗಿ www.enquiry.indianrail.gov.in ವೆಬ್‍ಟೈಟ್‍ಗೆ ಭೇಟಿ ನೀಡಲು ಅಥವಾ ಎನ್.ಟಿ.ಎಸ್.ಇ. (ಓಖಿಇS) ಅಪ್ಲಿಕೇಶನ್ ಡೌನ್‍ಲೋಡ್ ಮಾಡಿ ಪಡೆಯಬಹುದಾಗಿದೆ.


