ಕಲಬುರಗಿ| 371 (ಜೆ) ಲೋಪದೋಷ ಸರಿಪಡಿಸುವಂತೆ ಸರ್ಕಾರದ ಕಾರ್ಯದರ್ಶಿಗೆ ಎಂಎಲ್ಸಿ ಶಶೀಲ್ ನಮೋಶಿ ಪತ್ರ

Date:

Share post:

ಕಲಬುರಗಿ: ಸಂವಿಧಾನದ ಅನುಚ್ಛೇದ 371 (ಜೆ) ಅಡಿಯಲ್ಲಿ ರಚಿಸಲಾದ ಕಾನೂನು ಅನುಷ್ಠಾನದಲ್ಲಿ ಆಗುತ್ತಿರುವ ಲೋಪದೋಷಗಳನ್ನು ಸರಿಪಡಿಸಿ, ಅದರಡಿಯಲ್ಲಿ ಖಾಲಿಯಿರುವ ಹುದ್ದೆಗಳನ್ನು ಕಾಲ ಮಿತಿಯಳಗೆ ಭರ್ತಿ ಮಾಡುವುದು, ಕಾನೂನಿನಲ್ಲಿ ಇರುವ ತಪ್ಪುಗಳನ್ನು ಪರಿಷ್ಕರಿಸಿ ತಿದ್ದುಪಡಿ ಮಾಡುವ ಕುರಿತು ವಿಧಾನ ಪರಿಷತ್ ಸದಸ್ಯರಾದ ಶಶೀಲ್ ಜಿ ನಮೋಶಿ ಅವರು ರಾಜ್ಯ ಸರ್ಕಾರದ ಕಾರ್ಯದರ್ಶಿಗಳು ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ ಇವರಿಗೆ ಪತ್ರ ಬರೆದು ಆಗ್ರಹಿಸಿದ್ದಾರೆ.

ಅವರು ಕಾರ್ಯದರ್ಶಿಗಳಿಗೆ ಬರೆದ ಪತ್ರದಲ್ಲಿ ಭಾರತ ಸರಕಾರವು ಸಂವಿಧಾನದ ಅನುಚ್ಛೇಧ 371(ಜೆ) ಅಡಿಯಲ್ಲಿ ಕಲ್ಯಾಣ ಕರ್ನಾಟಕ ಪ್ರದೇಶವನ್ನು ಸೇರಿಸಿ ವಿಶೇಷ ಸೌಲಭ್ಯವನ್ನು ನೀಡಿದೆ. ಇದರಡಿಯಲ್ಲಿ ಕರ್ನಾಟಕ ಸರಕಾರವು ನವೆಂಬರ್ 6, 2013ರಂದು ಕಾನೂನುಗಳನ್ನು ರಚಿಸಿ ಶಿಕ್ಷಣ, ಉದ್ಯೋಗದಲ್ಲಿ ಮೀಸಲಾತಿ ಮತ್ತು ಅಭಿವೃದ್ಧಿ ಮಂಡಳಿ ರಚಿಸಲು ಅವಕಾಶ ನೀಡಿತು. ಈ ಭಾಗದ ಜನತೆ, ಯುವಕರು, ವಿದ್ಯಾರ್ಥಿಗಳಲ್ಲಿ 371ಜೆ ಅನುಷ್ಠಾನದ ಬಗ್ಗೆ ಗೊಂದಲ, ಆತಂಕ ಹಾಗೂ ಅನುಮಾನ ಮೂಡುವಂತೆ ಮಾಡಲಾಗಿದೆ. ಹಲವು ನೇಮಕಾತಿಗಳಲ್ಲಿ ಮೀಸಲಾತಿ ನಿಯಮಗಳನ್ನು ಉದ್ದೇಶಪೂರ್ವಕವಾಗಿ ಉಲ್ಲಂಘಿಸಿಲಾಗಿದೆ ಎಂದು ದೂರಿದ್ದಾರೆ.

ಇದರಲ್ಲಿ ಆಗಿರುವ ನ್ಯಾಯವನ್ನು ಸರಿಪಡಿಸುವ ಯಾವುದೇ ಪ್ರಯತ್ನ ಸರಕಾರದಿಂದ ಆಗದೇ ಇರುವದು ಅತ್ಯಂತ ನೋವಿನ ವಿಷಯ ಎಂದು ಬೇಸರ ವ್ಯಕ್ತಪಡಿಸಿದರು.

1. 371ಜೆ ಅಡಿಯಲ್ಲಿ ರಚಿಸಲಾದ ಕಾನೂನುಗಳಲ್ಲಿ ಲೋಪ ದೋಷಗಳಿದ್ದು, ಅವುಗಳನ್ನು ಚರ್ಚಿಸಿ ಪರಿಷ್ಕರಿಸಲು ಉನ್ನತ ಅಧಿಕಾರಿಗಳು ಹಾಗೂ ಇಬ್ಬರು ನುರಿತ ಹೋರಾಟಗಾರರನ್ನೊಳಗೊಂಡ ಸಮಿತಿಯನ್ನು ರಚಿಸುವದು.

2. 371ಜೆ ಅಡಿಯಲ್ಲಿ ಖಾಲಿ ಇರುವ ಹುದ್ದೆಗಳನ್ನು ಎಲ್ಲಾ ಇಲಾಖೆಗಳು, ವಿಶ್ವವಿದ್ಯಾಲಯಗಳು, ನಿಗಮಗಳು, ಮಂಡಳಿಗಳು, ಕೈಗಾರಿಕೆಗಳು ಇತ್ಯಾದಿ ಕಾಲಮಿತಿಯೊಳಗೆ ಭರ್ತಿ ಮಾಡಲು ಸೂಕ್ತ ನಿರ್ದೇಶನ ನೀಡುವದು. ವಿಶೇಷವಾಗಿ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಇಲಾಖೆಯಲ್ಲಿ ಖಾಲಿ ಇರುವ ಶಿಕ್ಷಕರ ಹುದ್ದೆಗಳನ್ನು ತುರ್ತಾಗಿ ವಿಶೇಷ ನೇಮಕಾತಿಯ ಮೂಲಕ ಭರ್ತಿ ಮಾಡಲು ಸೂಕ್ತ ನಿರ್ದೇಶನ ನೀಡುವದು.

3. ಕಲ್ಯಾಣ ಕರ್ನಾಟಕ ಪ್ರದೇಶದ ಸ್ಥಳೀಯ ವೃಂದದ ನೌಕರರಿಗೆ ರಾಜ್ಯದ ಯಾವುದೇ ಪ್ರದೇಶದಲ್ಲಿ ಸೇವೆ ಸಲ್ಲಿಸಲು ಅವಕಾಶ ನೀಡುವದು. (ಕಡ್ಡಾಯ ವರ್ಗಾವಣೆ ತಡೆಯುವದು)

4. ರಾಜ್ಯದಲ್ಲಿ ಸರಕಾರಿ ವಿಶ್ವವಿದ್ಯಾಲಯಗಳು ತಮ್ಮ ವ್ಯಾಪ್ತಿಯಲ್ಲಿ ಪ್ರವೇಶ ನೀಡುವ ಎಂ.ಫಿಲ್/ಪಿ.ಎಚ್.ಡಿ ಕೋರ್ಸಗಳ ಪ್ರವೇಶ ಪ್ರಕ್ರಿಯೆಯ ಅಧಿಸೂಚನೆಯಲ್ಲಿ 371ಜೆ ಅಡಿಯಲ್ಲಿ ಮೀಸಲಾತಿ ನಿಗದಿಗೊಳಿಸದೇ ನಿರ್ಲಕ್ಷಿಸುತ್ತಿದ್ದು, ಎಲ್ಲಾ ವಿಶ್ವವಿದ್ಯಾಲಯಗಳಿಗೆ ಎಂ.ಫೀಲ್/ಪಿ.ಎಚ್.ಡಿ. ಕೋರ್ಸಗಳ ಪ್ರವೇಶ ಪ್ರಕ್ರಿಯೆಯ ಅಧಿಸೂಚನೆಯಲ್ಲಿ ಕಡ್ಡಾಯವಾಗಿ 371ಜೆ ಮೀಸಲಾತಿ ನಿಗದಿಗೊಳಿಸುವಂತೆ ನಿರ್ದೇಶನ ನೀಡುವದು ಹಾಗೂ ಅದನ್ನು ಖಾತರಿಗೊಳಿಸತಕ್ಕದ್ದು.

5. ಸರಕಾರದ ಸಚಿವಾಲಯದಲ್ಲಿ ಖಾಲಿ ಇರುವ 371ಜೆ ಮೀಸಲಾತಿಯ ಸ್ಥಳೀಯ ವೃಂದದ ಹುದ್ದೆಗಳನ್ನು ತಕ್ಷಣ ಭರ್ತಿ ಮಾಡಲು ಸೂಕ್ತ ನಿರ್ದೇಶನ ನೀಡುವದು.

6. ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ, ಬೆಂಗಳೂರು ಹಾಗೂ ಕರ್ನಾಟಕ ಹಾಲು ಒಕ್ಕೂಟ, ಬೆಂಗಳೂರು, ಸಹಕಾರ ಮಹಾಮಂಡಳಿ, ಬೆಂಗಳೂರು ಇಲ್ಲಿ 371ಜೆ ಮೀಸಲಾತಿಯಂತೆ ನೇಮಕಾತಿ ಮಾಡಿಕೊಳ್ಳಲು ವಿಶೇಷ ಅಧಿಸೂಚನೆ ಹೊರಡಿಸಲು ನಿರ್ದೇಶನ ನೀಡುವದು.

7. ಸಾಮಾಜಿಕ ಹಾಗೂ ಆರ್ಥಿಕ ಬದಲಾವಣೆಯ ಅಧ್ಯಯನ ಸಂಸ್ಥೆ (ಐಸೆಕ್, ಬೆಂಗಳೂರು) ಬೆಂಗಳೂರು ಇಲ್ಲಿ ಶಿಕ್ಷಣದಲ್ಲಿ ಪ್ರವೇಶ ಹಾಗೂ ನೇಮಕಾತಿಯಲ್ಲಿ 371ಜೆ ಅನ್ವಯ ಸೂಕ್ತ ಮೀಸಲಾತಿ ನೀಡುವಂತೆ ನಿರ್ದೇಶನ ನೀಡುವದು.

8. ನೇರ ನೇಮಕಾತಿ ಅಧಿಸೂಚನೆಗಳಿಗೆ ಕಡ್ಡಾಯವಾಗಿ ಮೆರಿಟ್ ಆಧಾರಿತವಾಗಿ ಆಯ್ಕೆ ಪಟ್ಟಿ ತಯಾರಿಸಲು ಸೂಕ್ತ ನಿಯಮಗಳನ್ನು ರಚಿಸುವದು.

9. ಕಲ್ಯಾಣ ಕರ್ನಾಟಕ ಪ್ರದೇಶದ ಸರಕಾರಿ ನೌಕರರಿಗೆ ಬಡ್ತಿಯಲ್ಲಿ ಅನ್ಯಾಯವಾಗುತ್ತಿದ್ದು, ಒಂದೇ ಜೇಷ್ಠತಾ ಪಟ್ಟಿ ತಯಾರಿಸಿ ಮೊದಲಿಗೆ ಸಾಮಾನ್ಯ ವೃಂದದ ನೌಕರರಿಗೆ ಜೇಷ್ಠತೆಯಲ್ಲಿ ಬಡ್ತಿ ನೀಡುವದು, ನಂತರ 371ಜೆ ಮೀಸಲಾತಿ ಅನ್ವಯ ಬಡ್ತಿ ನೀಡುವ ಕುರಿತು ಸೂಕ್ತ ನಿಯಮ ಜಾರಿಗೊಳಿಸುವದು.

10. ಗುಲ್ಬರ್ಗಾ ವಿಶ್ವವಿದ್ಯಾಲಯದಲ್ಲಿ ಬೋಧಕ ಹಾಗೂ ಬೋಧಕೇತರ ಹುದ್ದೆಗಳು ಶೇ 90 ರಷ್ಟು ಖಾಲಿ ಇದ್ದು, ಇದರಿಂದ ವಿಶ್ವವಿದ್ಯಾಲಯದಲ್ಲಿ ಗುಣಮಟ್ಟದ ಶಿಕ್ಷಣ ಮರಿಚೀಕೆಯಾಗಿದೆ, ಸಂಶೋಧನೆ ಸಂಪೂರ್ಣ ಸ್ಥಗಿತಗೊಂಡಿದೆ, ಇದು ಕೇವಲ ಪ್ರಮಾಣ ಪತ್ರ ನೀಡುವ ಕೇಂದ್ರದಂತಾಗಿದೆ. ಇದನ್ನು ಗಂಭೀರವಾಗಿ ಪರಗಣಿಸಿ, ಖಾಲಿ ಹುದ್ದೆಗಳನ್ನು ಭರ್ತಿ ಮಾಡಲು ಸೂಕ್ತ ಕ್ರಮ ಜರುಗಿಸುವದು.

11. ಕೃಷಿ ವಿಶ್ವವಿದ್ಯಾಲಯ ರಾಯಚೂರು ಇಲ್ಲಿ ಖಾಲಿ ಇರುವ ಸಹಾಯಕ ಪ್ರಾಧ್ಯಾಪಕರ ಹುದ್ದೆಗಳನ್ನು ಭರ್ತಿ ಮಾಡಲು ಅಧಿಸೂಚನೆ ಹೊರಡಿಸಲಾಗಿದ್ದು, ಕಾರಣಾಂತರಗಳಿಂದ ನೇಮಕಾತಿ ಪ್ರಕ್ರಿಯೆ ಸ್ಥಗಿತಗೊಂಡಿದೆ, ಅದನ್ನು ಮುಂದುವರೆಸಿ ತಕ್ಷಣ ನೇಮಕಾತಿ ಪ್ರಕ್ರಿಯೆ ಪೂರ್ಣಗೊಳಿಸಲು ಸೂಕ್ತ ಕ್ರಮ ಜರುಗಿಸುವದು.

12. ಯರಮರಸ್ ಶಾಖೋತ್ಪನ್ನ ವಿದ್ಯುತ್ ಉತ್ಪಾದನಾ ಕೇಂದ್ರದ ನಿರ್ವಹಣೆಯನ್ನು 780 ಹುದ್ದೆಗಳ ಜೊತೆಗೆ ಹೊರಗುತ್ತಿಗೆ ನೀಡಿದ್ದು, ಹೊರಗುತ್ತಿಗೆ ಕರಾರಿನಲ್ಲಿ 371ಜೆ ನಿಯಮಗಳ ಉಲ್ಲಂಘನೆಯಾಗಿರುತ್ತದೆ, ಕಾರಣ, ಸದರಿ ಕರಾರನ್ನು ಮಾರ್ಪಾಡು ಮಾಡಿ 371ಜೆ ಮೀಸಲಾತಿಯಂತೆ ಮಾನವ ಸಂಪನ್ಮೂಲ ಒದಗಸಿಲು ಕ್ರಮವಹಿಸುವದು.

 

ಕಲ್ಯಾಣ ಕರ್ನಾಟಕ ಪ್ರದೇಶದ ಜನತೆ 371ಜೆ ಅಡಿಯಲ್ಲಿ ಸಾಕಷ್ಟು ವಿಶ್ವಾಸಿ ಹೊಂದಿದ್ದು, ಅದನ್ನು ಕಾಲಮಿತಿಯೊಳಗೆ ಸಮರ್ಪಕವಾಗಿ ಅನುಷ್ಠಾನ ಮಾಡಿದಲ್ಲಿ ಈ ಪ್ರದೇಶವು ಅಭಿವೃದ್ಧಿ ಹೊಂದಿದ ಪ್ರದೇಶವಾಗುವದರಲ್ಲಿ ಯಾವುದೇ ಅನುಮಾನವಿಲ್ಲವೆಂದು ಭಾವಿಸಲಾಗಿದೆ. ಕಾರಣ ಈ ಮೇಲ್ಕಂಡ ವಿಷಯಗಳನ್ನು ಗಂಭೀರವಾಗಿ ಪರಿಗಣಿಸಿ ಸೂಕ್ತ ಕ್ರಮ ಜರುಗಿಸಬೇಕೆಂದು ಈ ಮೂಲಕ ಸಮಗ್ರವಾಗಿ ಪತ್ರ ಬರೆಯುವ ಮೂಲಕ ಆಗ್ರಹಿಸಿದ್ದಾರೆ.

Share post:

spot_imgspot_img

Popular

More like this
Related

ಕಲಬುರಗಿ| ಜಿಲ್ಲೆಯಾದ್ಯಂತ ಮತದಾರರ ವಿಶೇಷ ಮಿಂಚಿನ ನೋಂದಣಿ ಅಭಿಯಾನ: ಬಿ.ಫೌಜಿಯಾ ತರನ್ನುಮ್

ಕಲಬುರಗಿ: ಈಶಾನ್ಯ ಶಿಕ್ಷಕರ ಕ್ಷೇತ್ರದ ಮತದಾರರ ಪಟ್ಟಿ ಪರಿಷ್ಕರಣೆ ಕಾರ್ಯ ಈಗಾಗಲೇ...

ಕಲಬುರಗಿ| ಸಿಲಿಂಡರ್ ಸ್ಫೋಟ; ಅದೃಷ್ಟವಶಾತ್ ನಾಲ್ವರು ಪಾರು

ಕಲಬುರಗಿ: ಸಿಲಿಂಡರ್ ಸ್ಫೋಟಗೊಂಡ ಪರಿಣಾಮ ಮನೆಯಲ್ಲಿದ್ದ ಚಿನ್ನಾಭರಣ, ನಗದು ಹಣ ಸೇರಿದಂತೆ...

ಕಲಬುರಗಿ| ದಾರಿದ್ರ್ಯ ರಹಿತ ಸಮಾಜ ನಮ್ಮೆಲ್ಲರ ಕನಸು: ಡಾ.ಜ್ಯೋತಿ.ಕೆ.ಎಸ್

ಕಲಬುರಗಿ: ನಗರದ ಶ್ರೀಮತಿ ವೀರಮ್ಮ ಗಂಗಸಿರಿ ಮಹಿಳಾ ಮಹಾವಿದ್ಯಾಲಯದ ಅರ್ಥಶಾಸ್ತ್ರ ವಿಭಾಗದ...

ಕಲಬುರಗಿ| ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯ ಸುವರ್ಣ ಮಹೋತ್ಸವ

ಕಲಬುರಗಿ: ನೈಸರ್ಗಿಕ ಸಂಪತನ್ನು ಹಿತ-ಮಿತವಾಗಿ ಬಳಕೆ ಮಾಡದೆ ಮಾನವ ದುರಾಸೆಯಿಂದ ಅವ್ಯಾಹತವಾಗಿ...