ಕಲಬುರಗಿ: ರೋಗಿಗಳ ಆರೋಗ್ಯ ಪಾಲನೆಯಲ್ಲಿವೈದ್ಯರಷ್ಟೇ ನರ್ಸಗಳ ಪಾತ್ರವು ಪ್ರಮುಖವಾಗಿದೆ ಎಂದು ಹೈದರಾಬಾದ್ ಕರ್ನಾಟಕ ಶಿಕ್ಷಣ ಸಂಸ್ಥೆಯ ಅಧ್ಯಕ್ಷರು ಹಾಗೂ ವಿಧಾನ ಪರಿಷತ್ ಸದಸ್ಯರಾದ ಶಶೀಲ್ ಜಿ ನಮೋಶಿ ಹೇಳಿದರು.
ಅವರು ಸಂಸ್ಥೆಯ ಬಸವೇಶ್ವರ ಬೋಧನಾ ಹಾಗೂ ಸಾರ್ವಜನಿಕ ಆಸ್ಪತ್ರೆಯ ನರ್ಸಿಂಗ್ ಸಿಬ್ಬಂದಿ ಹಾಗೂ ಶುಚಿತ್ವ ಕಾರ್ಮೀಕರ ಹಮ್ಮಿಕೊಂಡಿದ್ದ ನಮೋಶಿಯವರ ಜನ್ಮ ದಿನಾಚರಣೆ ಶುಭಾಶಯ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು.
ನರ್ಸಿಂಗ್ ಸಿಬ್ಬಂದಿ ಆಸ್ಪತ್ರೆಯಲ್ಲಿ ದಾಖಲಾಗಿರುವ ರೋಗಿಗಳನ್ನು ದೇವರಂತೆ ಕಾಣಬೇಕು, ವ್ಯವಧಾನದಿಂದ ಕಾರ್ಯ ಮಾಡಬೇಕು, ನಮ್ಮ ಬಸವೇಶ್ವರ ಆಸ್ಪತ್ರೆಯ ನರ್ಸಿಂಗ್ ಸಿಬ್ಬಂದಿ ಅತ್ಯುತ್ತಮವಾಗಿ ಕಾರ್ಯ ನಿರ್ವಹಿಸುತ್ತಿರುವದು ನನಗೆ ಸಂತಸ ತಂದಿದೆ ಎಂದು ಹೇಳಿದರು.
ಶುಚಿತ್ವ ಕಾರ್ಮಿಕರು ಆಸ್ಪತ್ರೆಯ ಜೀವಾಳವಾಗಿದ್ದು, ಒಂದು ಆಸ್ಪತ್ರೆಯ ಕಾರ್ಯ ಯಶಸ್ವಿಯಾಗಬೇಕಾದರೆ ಶುಚಿತ್ವ ಕಾರ್ಮೀಕರು ಸರಿಯಾಗಿ ಕಾರ್ಯ ನಿರ್ವಹಿಸಬೇಕೆಂದು ಹೇಳಿದರು.
ಈಗ ಬಸವೇಶ್ವರ ಆಸ್ಪತ್ರೆಯ ವೈದ್ಯರು, ನರ್ಸಿಂಗ್ ಸಿಬ್ಬಂದಿ ಹಾಗೂ ಶುಚಿತ್ವ ಕಾರ್ಮೀಕರ ಒಳ್ಳೆಯ ಕಾರ್ಯದಿಂದಲೆ ಅನೇಕ ರೋಗಿಗಳು ಇಲ್ಲಿ ದಾಖಲಾಗುತ್ತಿರುವದಕ್ಕೆ ಸಾಕ್ಷಿ ಎಂದು ಹೇಳಿದರು. ನಂತರ ಆಸ್ಪತ್ರೆಯ ನರ್ಸಿಂಗ್ ಸಿಬ್ಬಂದಿ ಹಾಗೂ ಶುಚಿತ್ವ ಕಾರ್ಮೀಕರ ಸನ್ಮಾನ ಸ್ವೀಕರಿಸಿದರು.
ಈ ಸಂದರ್ಭದಲ್ಲಿ ಮಹಾದೇವಪ್ಪ ರಾಂಪೂರೆ ವೈದ್ಯಕೀಯ ಮಹಾವಿದ್ಯಾ ಡೀನ್ ಡಾ.ಶರಣಗೌಡ ಪಾಟೀಲ್ ವೈಸ್ ಡೀನ್ ಡಾ.ವಿಜಯಕುಮಾರ್ ಕಪ್ಪಿಕೇರಿ, ವೈದ್ಯಕೀಯ ಅಧೀಕ್ಷಕರಾದ ಡಾ.ಮಲ್ಲಿಕಾರ್ಜುನ ತೇಗನೂರ, ಆಡಳಿತಾಧಿಕಾರಿ ಡಾ.ಎಂ.ಆರ್ ಪೂಜಾರಿ, ಡಾ.ಗುರುಲಿಂಗಪ್ಪ ಪಾಟೀಲ್, ವಿಶೇಷಾಧಿಕಾರಿ ಡಾ.ಪರಮೇಶ ಬಿರಾದಾರ, ಮಾಧ್ಯಮ ಸಂಯೋಜಕ ಐ ಕೆ ಪಾಟೀಲ್ ಹಾಗೂ ಸಿಬ್ಬಂದಿ ಹಾಜರಿದ್ದರು.


