ಕಲಬುರಗಿ| ಪಾಕಿಸ್ತಾನ ವಿರುದ್ಧದ ಪಂದ್ಯ ಬಹಿಷ್ಕರಿಸಿ; ಅಮಿತ್ ಶಾ ಪುತ್ರನ ವಿರುದ್ಧ ಮಾತಾಡಿದ್ರೆ ತಪ್ಪಾ?: ಡಾ. ಅಜಯ್ ಸಿಂಗ್ 

Date:

Share post:

ಕಲಬುರಗಿ: ಏಷ್ಯಾಕಪ್ ಕ್ರಿಕೆಟ್ ಟೂರ್ನಿಯಲ್ಲಿ ಭಾರತ ವಿರುದ್ಧ ನಡೆಯುತ್ತಿರುವ ಪಾಕಿಸ್ತಾನದ ಪಂದ್ಯ ಯಾರ ಪ್ರಯೋಜನಕ್ಕಾಗಿ ಆಡಿಸಲಾಗುತ್ತಿದೆ?; ಭಾರತೀಯರೆಲ್ಲರೂ ಈ ಪಂದ್ಯವನ್ನು ಬಹಿಷ್ಕಾರ ಹಾಕಬೇಕಾಗಿದೆ ಎಂದು ಕೆಕೆಆರ್ ಡಿಬಿ ಅಧ್ಯಕ್ಷ, ಶಾಸಕ ಡಾ.ಅಜಯ್ ಸಿಂಗ್ ಹೇಳಿದ್ದಾರೆ.

ನಗರದಲ್ಲಿ ಮಾತನಾಡಿದ ಅವರು, ಪಾಕಿಸ್ತಾನ ವಿರುದ್ಧ ಆಪರೇಷನ್ ಸಿಂಧೂರ ಮಾಡಿ 6 ತಿಂಗಳಾಗಿಲ್ಲ, ಈಗ ಭಾರತ ಮತ್ತು ಪಾಕಿಸ್ತಾನ ಮಾಡುತ್ತಿದ್ದಾರೆ. ಯಾರ ಪ್ರಯೋಜನಕ್ಕಾಗಿ ಇವರು ಇದೆಲ್ಲ ಮಾಡ್ತಿದ್ದಾರೆ?. ಇದನ್ನ ಮಾಡಿದರೆ ಬಿಸಿಸಿಐಗೆ 2 ಸಾವಿರ ಅಥವಾ 3 ಸಾವಿರ ಕೋಟಿ ಆದಾಯ ಬರಬಹುದು. ಕೇಂದ್ರ ಸಚಿವ ಅಮಿತ್ ಶಾ ಮಗ ಜಯ್ ಶಾ ವಿರುದ್ಧ ಮಾತಾಡಿದರೆ ಕೆಟ್ಟದ್ದಾ? ಇಂದು ಪ್ರಶ್ನಿಸಿದರು.

ಈಗಾಲೇ ಪಾಕಿಸ್ತಾನ ವಿರುದ್ಧದ ಪಂದ್ಯಕ್ಕೆ ಮೃತ ಯೋಧ ಶುಭಂ ದ್ವಿವೇದಿ ಅವರ ಪತ್ನಿ ಕೂಡ ವಿರೋಧಿಸಿದ್ದಾರೆ. ಘಟನೆಯಾಗಿ ಒಂದು ವರ್ಷವೇ ಆಗಿಲ್ಲ. ಎಷ್ಟೋ ಜನರು ಪ್ರಾಣ ಕೊಟ್ಟಿದ್ದಾರೆ, ಅವರ ಪ್ರಾಣಕ್ಕೆ ಬೆಲೆನೇ ಇಲ್ವಾ? ಪಹಲ್ಗಾಮ್ ಘಟನೆ ದೇಶದಲ್ಲಿ ಇನ್ನೂ ಜೀವಂತವಾಗಿದೆ. ಭಾರತೀಯರೆಲ್ಲರೂ ಬಹಿಷ್ಕಾರ ಹಾಕಬೇಕು ಎಂದರು.

ಪ್ರಧಾನಿ ಮೋದಿ ಅವರು, ಒಂದೇ ಕಡೆ ನೀರು ಮತ್ತು ರಕ್ತ ಹರಿವುದಿಲ್ಲ ಎನ್ನುತ್ತಾರೆ, ಈಗ ಅದೇ ಪಾಕ್ ವಿರುದ್ಧ ಪಂದ್ಯವಾಡಿ ಯಾರಿಗೆ ಆದಾಯ ಕೊಡುತ್ತಿದ್ದಾರೆ. ಪಂದ್ಯ ನಡೆದರೆ ಅವರು ಮತ್ತಷ್ಟು ಭಯೋತ್ಪಾದನ ಪ್ರಚೋದನೆ ನೀಡುತ್ತಾರೆ, ಮತ್ತೆ ದಾಳಿ ನಡೆಸುತ್ತಾರೆ, ಒಂದು ವೇಳೆ ನಾವು ಬಹಿಷ್ಕಾರ ಹಾಕಿದರೆ ಪಾಕಿಸ್ತಾನಕ್ಕೆ ಸರಿಯಾಗಿ ತಿರುಗೇಟು ಕೊಟ್ಟಂತಾಗುತ್ತದೆ. ಎಲ್ಲ ರೀತಿಯಲ್ಲೂ ಪಾಕಿಸ್ತಾನಕ್ಕೆ ಬಹಿಷ್ಕಾರ ಹಾಕಿದಾಗ ಮಾತ್ರ ಅದಕ್ಕೆ ಬುದ್ಧಿ ಬರುತ್ತದೆ ಎಂದು ಕೇಂದ್ರ ಸರ್ಕಾರದ ವಿರುದ್ಧ ಅಜಯ್ ಸಿಂಗ್ ವಾಗ್ದಾಳಿ ನಡೆಸಿದ್ದಾರೆ.

Share post:

spot_imgspot_img

Popular

More like this
Related

ಕಲಬುರಗಿ| ವಿ.ಜಿ ವುಮನ್ಸ್ ಕಾಲೇಜಿನಲ್ಲಿ ವಿಶ್ವ ಮಾತೃ ಭಾಷೆ ದಿನಾಚರಣೆ ಆಚರಣೆ

ಕಲಬುರಗಿ: ಕಲಬುರಗಿ ನಗರದ ಪ್ರತಿಷ್ಠಿತ ಮಹಿಳಾ ಮಹಾವಿದ್ಯಾಲಯವಾದ ಶ್ರೀಮತಿ ವೀರಮ್ಮ ಗಂಗಸಿರಿ...

ಕಲಬುರಗಿ| ಎರಡು ದಿನಗಳ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ತೆರೆ

ಕಲಬುರಗಿ: ಸೋಮವಾರದಿಂದ ಪ್ರಾರಂಭವಾದ 22ನೆಯ ಕಲಬುರಗಿ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನವು...

ಕಲಬುರಗಿ ಜಿಲ್ಲೆಯನ್ನು ರಾಜ್ಯದ ಉಪರಾಜಧಾನಿಯನ್ನಾಗಿ ಘೋಷಿಸಿ: ಮುಡುಬಿ ಗುಂಡೇರಾವ

ಕಲಬುರಗಿ: ಕಲಬುರಗಿ ನಗರವನ್ನು ಕೇವಲ ಪ್ರಾದೇಶಿಕ ಕೇಂದ್ರವಾಗಿ ನೋಡದೆ, ಈ ಭಾಗದ...

ಕಲಬುರಗಿ| ಶಿಕ್ಷಣದ ಜ್ಯೋತಿ ಹೊತ್ತಿಸಿದ ಮಹಾದೇವಪ್ಪ ರಾಂಪುರೆ: ಡಾ.ಮಹೇಶ ಗಂವ್ಹಾರ

ಕಲಬುರಗಿ: ಅಂದಿನ ಹೈದ್ರಾಬಾದ್ ಕರ್ನಾಟಕದಲ್ಲಿ ಶಿಕ್ಷಣದ ಜ್ಯೋತಿ ಹೊತ್ತಿಸಿದ ಪುಣ್ಯಾತ್ಮ ಮಹಾದೇವಪ್ಪ...