ಕಲಬುರಗಿ: ಇಲ್ಲಿನ ಶರಣಬಸವ ವಿಶ್ವವಿದ್ಯಾಲಯದ ಗೋದೂತಾಯಿ ಮಹಿಳಾ ಇಂಜಿನಿಯರಿಂಗ್ ಕಾಲೇಜಿನಲ್ಲಿ ಅಖಿಲ ಭಾರತೀಯ ರಾಷ್ಟ್ರೀಯ ಶೈಕ್ಷಿಕ್ ಮಹಾಸಂಘ (ABRSM) ವತಿಯಿಂದ ರಾಣಿ ಅಬ್ಬಕ್ಕ ದೇವಿರವರ 500ನೇ ಜನ್ಮ ಶತಾಬ್ದಿ, ಅಹಲ್ಯಾಬಾಯಿ ಹೋಳ್ಕರ್ ರವರ 300ನೇ ಜನ್ಮ ದಿನಾಚರಣೆ ಹಾಗೂ ಕಿತ್ತೂರ ರಾಣಿ ಚೆನ್ನಮ್ಮ ರವರ 200ನೇ ಜಯಂತೋತ್ಸವ ನಿಮಿತ್ತ ವಿಶೇಷ ಉಪನ್ಯಾಸ ಹಮ್ಮಿಕೊಳ್ಳಲಾಯಿತು.
ಎ ಬಿ ಆರ್ ಎಸ್ ಎಂ ನೊಂದಿಗೆ ಸಂಲಗ್ನತೆ ಹೊಂದಿರುವ ಕರ್ನಾಟಕ ರಾಜ್ಯ ಮಾಧ್ಯಮಿಕ ಶಿಕ್ಷಕ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿಗಳಾದ ಅನಿಲ್ ಕುಮಾರ್ ಬಿರಾದಾರ್ ತಮ್ಮ ಉಪನ್ಯಾಸದಲ್ಲಿ, ಈ ಮೂವರು ರಾಣಿಯರು ಅವರು ಮಾಡಿದ ಸಾಧನೆ ಅವರ ಹೋರಾಟಗಳು ಇಂದಿನ ಮಹಿಳೆಯರಿಗೆ ಪ್ರೇರಣದಾಯಿ ಯಾಗುತ್ತಾರೆ. ವಿದ್ಯಾರ್ಥಿನಿಯರು ಇಂತಹ ಮಹಾನ್ ವೀರರಾಣಿಯರನ್ನು ತಮ್ಮ ಜೀವನದ ಆದರ್ಶರನ್ನಾಗಿ ಇಟ್ಟುಕೊಂಡು ನಿಶ್ಚಿತ ಗುರಿಯೊಂದಿಗೆ ಸಾಧನೆ ಮಾಡಲು ಧೈರ್ಯದಿಂದ ಮುನ್ನುಗ್ಗಬೇಕು ಎಂದು ಪ್ರೆರೇಪಿಸಿದರು.
ರಾಣಿ ಅಹಲ್ಯಾಬಾಯಿ ಹೋಲ್ಕರ್ ರವರು ಕತ್ತಿ ಹಿಡಿದು ಕುದುರೆ ಏರಿ ದೇಶದ್ರೋಹಿಗಳಿಂದ ನಾಶ ಪಡಿಸಲ್ಪಟ್ಟ ಸುಮಾರು 3500 ದೇವಸ್ಥಾನಗಳನ್ನು ಜೀರ್ಣೋದ್ಧಾರ ಮಾಡಿ ರಾಷ್ಟ್ರ ಭಕ್ತಿಯನ್ನು ಮೆರೆದ ಧೀರ ಮಹಿಳೆ ಎಂದು ಕೊಂಡಾಡಿದರು. ಅವರು ಮಾಡುವ ದೇಶದ ಪ್ರಜೆಗಳ ಸುಖ ಶಾಂತಿಯನ್ನು ಸದಾ ಬಯಸುವ ಒಬ್ಬ ಧೀರ ಆಡಳಿತಗಾರರಾಗಿದ್ದರು ಅವರನ್ನು ‘ಮಾಳ್ವ ಕಿ ಮಾಯಿ ‘ ಎಂದೆ ಪ್ರಜೆಗಳ ಮನಸ್ಸಿನಲ್ಲಿ ಇಂದಿಗೂ ಉಳಿದುಕೊಂಡಿದ್ದಾರೆ ಎಂದರು.
500 ವರ್ಷಗಳ ಹಿಂದೆಯೇ ತುಳು ನಾಡಿನ ಕೆಚ್ಚೆದೆಯ ರಾಣಿ ಅಬ್ಬಕ್ಕದೇವಿ ಪೋರ್ಚುಗಿಸರಿಗೆ ಸಿಂಹ ಸಪ್ನಾವಾಗಿದ್ದ ರಾಣಿ ಅಬ್ಬಕ್ಕ ” ಅಭಯ ರಾಣಿ ” ಎಂದೇ ಹೆಸರುವಾಸಿಯಾಗಿದ್ದರು. ಅಲ್ಲದೆ, ಪ್ರಥಮ ಸ್ವಾತಂತ್ರ್ಯ ಸಂಗ್ರಮಕ್ಕೂ ಮುಂಚೆ ಬ್ರಿಟಿಷರ ವಿರುದ್ಧ ಸೆಟದು ನಿಂತು ಯುದ್ಧ ಮಾಡಿ ಗೆದ್ದ ಭಾರತದ ಮೊದಲ ವೀರವನಿತೆ ಕಿತ್ತೂರು ರಾಣಿ ಚನ್ನಮ್ಮ ರವರ ದೇಶಪ್ರೇಮವನ್ನು ಸ್ಮರಿಸಿಕೊಂಡರು.
ಈ ಸಂದರ್ಭದಲ್ಲಿ ಗೊದುತಾಯಿ ಇಂಜಿನಿಯರಿಂಗ್ ಕಾಲೇಜಿನ ಬೇಸಿಕ್ ಸೈನ್ಸ್ ವಿಭಾಗದ ಚೆರ್ ಪರ್ಸನ್ ಡಾ. ಜಯಸುಧಾ, ಗಣಿತ ವಿಭಾಗದ ಮುಖ್ಯಸ್ಥರು ಡಾ. ಸ್ವಾತಿ ಕಲಶೆಟ್ಟಿ ವೇದಿಯಲ್ಲಿದ್ದರು. ಕಾಲೇಜಿನ ಬೋಧಕ ಹಾಗೂ ಬೋಧಕೇತರ ಸಿಬ್ಬಂದಿ, ಹಾಗೂ ವಿದ್ಯಾರ್ಥಿನಿಯರು ಭಾಗವಹಿಸಿದ್ದರು.


