ಕಲಬುರಗಿ| ಮಾನಸಿಕ ಅರೋಗ್ಯದ ಬಗ್ಗೆ ಜನರಲ್ಲಿ ಅರಿವು ಬಹಳ ಮುಖ್ಯ: ಶ್ರೀನಿವಾಸ ನವಲೆ

Date:

Share post:

ಕಲಬುರಗಿ: ನಗರದ ಜಿಮ್ಸ್‌ನ 5ನೇ ಮಹಡಿಯಲ್ಲಿರುವ ಜಿಮ್ಸ್ ಕಮ್ಯುನಿಟಿ ಮೆಡಿಸಿನ್ ಹಾಲ್ ನಲ್ಲಿ ಬುಧವಾರ ವಿಶ್ವ ಆತ್ಮಹತ್ಯೆ ತಡೆಗಟ್ಟುವ ದಿನದ ಅರಿವು ತರಬೇತಿ ಕಾರ್ಯಕ್ರಮನ್ನು ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಶ್ರೀನಿವಾಸ ನವಲೆ ಅವರು ಸಸಿಗೆ ನೀರೇರೆಯುವ ಮೂಲಕ ಉದ್ಘಾಟಿಸಿದರು.

ಬಳಿಕ ಮಾತನಾಡಿದ ಅವರು, ಸಾರ್ವಜನಿಕರಲ್ಲಿ ಮಾನಸಿಕ ಖಾಯಿಲೆಯ ಬಗ್ಗೆ ಅರಿವು ಜನರಲ್ಲಿ ಅರಿವು ಇರದೇ ಇರುವುದು ಸಹಜವಾಗಿದೆ. ಮಾಸಿಕ ಕಾಯಿಲೆ ಚಿಕಿತ್ಸೆಯಿಂದ ಹೊರಬರಬೇಕಾಗಿದೆ. ಜನರ ತಲೆಯಿಂದ ತಪ್ಪು ನಂಬಿಕೆ ಅಥವಾ ಮೂಢ ನಂಬಿಕೆ. ಹಾಗೆ  ಚಿಕಿತ್ಸೆ ಕುರಿತು ತಪ್ಪು ಕಲ್ಪನೆಗಳು ಹೋಗಲಾಡಿಸಬೇಕು ಅಂದಗಾ ಮಾತ್ರ  ಸಾಧ್ಯ  ಎಂದರು.

ವೇದಿಕೆ ಮೇಲೆ ಅತಿಥಿಗಳಾಗಿ ಜಿಮ್ಸ್ ಆಸ್ಪತ್ರೆ ಮನೋರೋಗ ವಿಭಾಗದ ಮುಖ್ಯಸ್ಥರು ಡಾ.ಪ್ರಭುಕಿರಣ ವಿ.ಗೋಗಿ ಮಾತನಾಡತ್ತ, ಇಂದಿನ ಜನರೇಶ್ ನಲ್ಲಿ ಹಿರಿಯ ವಯಸ್ಕರಲ್ಲಿ  ಮಕ್ಕಳಲ್ಲಿ ಮಾನಸಿಕ ಖಿನ್ನತೆಗಳಾಗುತ್ತಿರುವುದು ಅತಿ ಹೆಚ್ಚು ಕಂಡು ಬರುತ್ತಿವೆ. ಅದರಿಂದ 20% ಆತ್ಮಹತ್ಯೆ ಮಾಡಿಕೊಳ್ಳುತಿದ್ದಾರೆ. ಆದ ಕಾರಣ ಚಿಕಿತ್ಸೆಗೆ ಬಂದಂತಹ  ರೋಗಿಗಳಿಗೆ ಮಾನಸಿಕವಾಗಿ ಕಂಡು ಬರುವoತವರನ್ನು ಗುರುತಿಸಿ ಸಮಾಲೋಚನೆ ಮಾಡುವುದರ ಮೂಲಕ  ಆತ್ಮಸ್ಥೈರ್ಯ ತುಂಬಬೇಕು ಎಂಬುವುದರ ಬಗ್ಗೆ ತಿಳಿಸಿಕೊಟ್ಟರು.

 

 ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮ ಅಧಿಕಾರಿ ಡಾ.ವಿವೇಕಾನಂದ ರೆಡ್ಡಿ ಅವರು ವಹಿಸಿದ್ದರು.

 ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮದ ಮನೋವೈದ್ಯ ಡಾ. ಮಹಮ್ಮದ್ ಇರಫಾನ್ ‌ ಮಹಾಗಾವಿ ಉಪನ್ಯಾಸ ನೀಡುದರು. ಕಾರ್ಯಕ್ರಮದಲ್ಲಿ ಪ್ರಮುಖರಾದ  ಸೈಕಿಟ್ರಿಕ್ ಸೋಶಿಯಲ್ ವರ್ಕರ್ ನಾಗರಾಜ ಬಿರಾದಾರ. ಚೈಲ್ಡ್ ಹೆಲ್ತ್ ಆಪ್ತ ಸಮಾಲೋಚಕ ಮಂಜುನಾಥ ಕಂಬಾಳಿಮಠ ಇದ್ದರು.  ಮೊದಲಿಗೆ ಗಂಗೂಬಾಯಿ ಅವರು ಪ್ರಾರ್ಥನೆ ಗೀತೆ ಹಾಡಿದರು.  ಕ್ಲಿನಿಕಲ್ ಸೈಕಾಲಜಿಸ್ಟ್. ಸಂತೋಷಿ ಗೋಳೆ ಅವರು ಆತ್ಮಹತ್ಯೆ ಕುರಿತಾದ ನಿರೂಪಣೆಯನ್ನು ಬದಲಾಯಿಸಿ’ ಎಂಬುವುದು ವಿಶ್ವ ಆತ್ಮಹತ್ಯೆ ತಡೆಗಟ್ಟುವ ದಿನದ ಘೋಷಣೆಯಾಗಿದೆ. ಇದರ ಘೋಷಣೆಯನ್ನು ಸಮುದಾಯ ಅಧಿಕಾರಿಗಳಿಗೆ ಹಾಗೂ ಎಲ್ಲಾ ವಿಭಾಗದ ಆಪ್ತ ಸಮಾಲೋಚಕರಿಗೆ ಬೋಧಿಸಲಾಯಿತು. ಕಾರ್ಯಕ್ರಮದಲ್ಲಿ  ಅಲ್ಲಮ ಪ್ರಭು ನಿಂಬಾಳ, ಮಹಾತೇಶ್ ಪಾಟೀಲ್, ಅಮರೇಶ್ ನಂದೂರ್ ಕಾರ್ಯಕ್ರಮದ ಅಪ್ತ ಸಮಾಲೋಚಕರು, ಸಮುದಾಯದ ಆರೋಗ್ಯ ಅಧಿಕಾರಿಗಳು ಹಾಗೆ ಇತರರು ಹಾಜರಿದ್ದರು.

Share post:

spot_imgspot_img

Popular

More like this
Related

ಕಲಬುರಗಿ| ಶಿಕ್ಷಣದ ಜ್ಯೋತಿ ಹೊತ್ತಿಸಿದ ಮಹಾದೇವಪ್ಪ ರಾಂಪುರೆ: ಡಾ.ಮಹೇಶ ಗಂವ್ಹಾರ

ಕಲಬುರಗಿ: ಅಂದಿನ ಹೈದ್ರಾಬಾದ್ ಕರ್ನಾಟಕದಲ್ಲಿ ಶಿಕ್ಷಣದ ಜ್ಯೋತಿ ಹೊತ್ತಿಸಿದ ಪುಣ್ಯಾತ್ಮ ಮಹಾದೇವಪ್ಪ...

ಕಲಬುರಗಿ| ಸರಕಾರಿ ನೌಕರರ ಭವನಕ್ಕೆ ಜಿಲ್ಲಾಧಿಕಾರಿ ಭೇಟಿ, ಪರಿಶೀಲನೆ

ಕಲಬುರಗಿ: ನಗರದಲ್ಲಿರುವ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಭವನಕ್ಕೆ ಜಿಲ್ಲಾಧಿಕಾರಿ ಫೌಜಿಯಾ...

ಕಲಬುರಗಿ| ಜಿಲ್ಲಾಧಿಕಾರಿಗಳಿಂದ ಸಿಟಿ ರೌಂಡ್: ರಸ್ತೆ ದುರಸ್ತಿ,‌ ಗುಂಡಿ ಮುಚ್ಚುವ ಕಾರ್ಯ ಪರಿಶೀಲನೆ

ಕಲಬುರಗಿ: ಜಿಲ್ಲಾಧಿಕಾರಿ ಬಿ.ಫೌಜಿಯಾ ತರನ್ನುಮ್ ಮತ್ತು ಮಹಾನಗರ ಪಾಲಿಕೆ ಆಯುಕ್ತ ಅವಿನಾಶ...

ಕಲಬುರಗಿ| ಬಾಲ್ಯ ವಿವಾಹ, ಫೋಕ್ಸೋ ಪ್ರಕರಣಗಳ ಬಗ್ಗೆ ನಿಗಾವಹಿಸಿ: ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಬಿ.ಫೌಜಿಯಾ ಸೂಚನೆ

ಕಲಬುರಗಿ: ಬಾಲ್ಯವಿವಾಹ ಮತ್ತು ಫೋಕ್ಸೋ ಪ್ರಕರಣಗಳು ಕಂಡು ಬಂದಲ್ಲಿ ಸಂಬಂಧಿಸಿದ ಅಧಿಕಾರಿಗಳು...