ಕಲಬುರಗಿ| ವಸತಿ ಶಾಲೆಯಲ್ಲಿ 84 ಅತಿಥಿ ಶಿಕ್ಷಕರ ಹುದ್ದೆಗಳಿಗೆ ಅರ್ಜಿ ಆಹ್ವಾನ

Date:

Share post:

ಕಲಬುರಗಿ: ಕಲಬುರಗಿ ಜಿಲ್ಲೆಯಲ್ಲಿ ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದ ವತಿಯಿಂದ ನಡೆಯುತ್ತಿರುವ ಕ್ರೈಸ್ ಮಾದರಿ ವಸತಿ ಶಾಲೆಗಳಲ್ಲಿ 2025-26ನೇ ಸಾಲಿಗೆ ಬೋಧಿಸಲು ಖಾಲಿಯಿರುವ ವಿಷಯವಾರು (ಕನ್ನಡ ಶಿಕ್ಷಕ-12, ಆಂಗ್ಲ ಭಾಷಾ ಶಿಕ್ಷಕ-31, ಗಣಿತ ಶಿಕ್ಷಕ-19, ವಿಜ್ಞಾನ ಶಿಕ್ಷಕ-17, ಸಮಾಜ ವಿಜ್ಞಾನ-02, ದೈಹಿಕ ಶಿಕ್ಷಕರು-02 ಹಾಗೂ ಕಂಪ್ಯೂಟರ್ ಶಿಕ್ಷಕ-01 ಹುದ್ದೆ ಸೇರಿದಂತೆ ಒಟ್ಟು 84) ಅತಿಥಿ ಶಿಕ್ಷಕರನ್ನು ಹುದ್ದೆಗಳನ್ನು ತಾತ್ಕಾಲಿಕವಾಗಿ ನೇಮಿಕ ಮಾಡಿಕೊಳ್ಳಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ ಎಂದು ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದ ವಸತಿ ಶಿಕ್ಷಣ ಕಲಬುರಗಿ ವಿಭಾಗದ ಜಿಲ್ಲಾ ಸಮನ್ವಯ ಅಧಿಕಾರಿಗಳು ಹಾಗೂ ಕಲಬುರಗಿ ಸಮಾಜ ಕಲ್ಯಾಣ ಇಲಾಖೆಯ ಅಪರ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವಸತಿ ಶಾಲೆಗಳ ವಿವರ ಇಂತಿದೆ: ಮೊರಾರ್ಜಿ ದೇಸಾಯಿ ವಸತಿ ಶಾಲೆ: ವಾಡಿ, ಚಿತ್ತಾಪುರ ಟೌನ್, ಮಳಖೇಡ, ಜೇವರ್ಗಿ ಟೌನ್, ಅರ್ಜುಣಗಿ, ಕೊಗನೂರು, ತಡಕಲ್, ಗುಂಡಗುರ್ತಿ, ನಿಡಗುಂದಾ, ಹೆಬ್ಬಾಳ, ರೇವಗ್ಗಿ, ಕಲಮುಡ ಗ್ರಾಮ, ಕರಜಗಿ, ನೆಲೋಗಿ, ಚಿತ್ತಾಪುರ ಟೌನ್, ಬೆಳಮಗಿ, ಅಡಕಿ, ಸಾವಳೇಶ್ವರ. ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆ: ವಾಡಿ, ಕೊಡ್ಲಾ, ಚೌಡಾಪುರ, ಕೊಡ್ಲಿ, ನರಿಬೋಳ, ಐನಾಪುರ. ಡಾ.ಬಿ.ಆರ್. ಅಂಬೇಡ್ಕರ ವಸತಿ ಶಾಲೆ: ವಾಡಿ, ಕುಂಚಾವರಂ, ಕಸಬಾ ಹೋಬಳಿ, ಅರಳಗುಂಡಗಿ ಹಾಗೂ ಬಿಳವಾರ (ಇಜೇರಿ). ಶ್ರೀಮತಿ ಇಂದಿರಾ ಗಾಂಧಿ ವಸತಿ ಶಾಲೆ: ಮಹಾಗಾಂವ, ವಾಡಿ, ನಾಲವಾರ, ಮುಧೋಳ, ಖಜೂರಿ, ಕೋಳಕೂರ, ಯಡ್ರಾಮಿ ಹಾಗೂ ಎಸ್.ಸಿ/.ಎಸ್.ಟಿ. ಜಗತ್ ಶಾಲೆ ಕಲಬುರಗಿ.

“ಕನ್ನಡ ಶಿಕ್ಷಕರು, ಆಂಗ್ಲ ಭಾಷಾ ಶಿಕ್ಷಕರು, ಹಿಂದಿ ಭಾಷಾ ಶಿಕ್ಷಕರು, ಸಮಾಜ-ವಿಜ್ಞಾನ ಶಿಕ್ಷಕರ” ಹುದ್ದೆಗಳಿಗೆ ಅಭ್ಯರ್ಥಿಗಳು ಬಿ.ಎ, ಬಿ.ಎಡ್., “ಗಣಿತ ಶಿಕ್ಷಕರು ಮತ್ತು ವಿಜ್ಞಾನ ಶಿಕ್ಷಕರು” ಹುದ್ದೆಗೆ ಬಿ.ಎಸ್ಸಿ, ಬಿ.ಎಡ್ ವಿದ್ಯಾರ್ಹತೆ ಹೊಂದಿರಬೇಕು. ಕಡ್ಡಾಯವಾಗಿ ಟಿ.ಇ.ಟಿ ಪರೀಕ್ಷೆ ಉತ್ತೀರ್ಣರಾಗಿರಬೇಕು. ದೈಹಿಕ ಶಿಕ್ಷಕರು”-ದೈಹಿಕ ಶಿಕ್ಷಕರಿಗೆ ಯಾವುದಾದರೂ ವಿಷಯದಲ್ಲಿ ಪದವಿ ಮತ್ತು ಬಿ.ಪಿ.ಎಡ್. ಉತ್ತೀರ್ಣರಾಗಿರಬೇಕು ಹಾಗೂ ಸೇವಾನುಭವ ಹೊಂದಿರಬೇಕು. ಕಂಪ್ಯೂಟರ ಶಿಕ್ಷಕರ ಹುದ್ದೆಗೆ ಕಂಪ್ಯೂಟರ್ ಶಿಕ್ಷಕರಿಗೆ ಬಿಸಿಎ/ಬಿಎಸ್ಸಿ ಇನ್ ಕಂಪ್ಯೂಟರ್ ಸೈನ್ಸ ಅಥವಾ ಬಿಇ ಪದವಿಯಲ್ಲಿ ಗಣಕ ವಿಜ್ಞಾನ/ ಮಾಹಿತಿ ವಿಜ್ಞಾನ ವಿಷಯವನ್ನು ಐಚ್ಛಿಕ ವಿಷಯವನ್ನಾಗಿ ವ್ಯಾಸಂಗ ಮಾಡಿರಬೇಕು ಹಾಗೂ ಕನಿಷ್ಠ ಸೇವಾನುಭವ ಹೊಂದಿರಬೇಕು. ಕಡ್ಡಾಯವಾಗಿ ಆಂಗ್ಲ-ಮಾದ್ಯಮದಲ್ಲಿ ಪದವಿ/ಬಿ.ಎಡ್ ಮಾಡಿರುವ ಬಗ್ಗೆ ದಾಖಲೆಗಳು ಸಲ್ಲಿಸಬೇಕು ಹಾಗೂ ಆಂಗ್ಲ ಮಾಧ್ಯಮದಲ್ಲಿ ಭೋದಿಸುವ ಸಾಮಥ್ರ್ಯ ಹೊಂದಿರಬೇಕು.

ಅತಿಥಿ-ಶಿಕ್ಷಕರ ಹುದ್ದೆಗೆ 16,650 ರೂ. ಗೌರವಧನ ನೀಡಲಾಗುತ್ತದೆ. ಅತಿಥಿ-ಶಿಕ್ಷಕರ ನೇಮಕಾತಿಯ ಅವಧಿಯು, ಖಾಯಂ ಶಿಕ್ಷಕರು ಶಾಲೆಯಲ್ಲಿ ಕರ್ತವ್ಯಕ್ಕೆ ವರದಿ ಮಾಡಿಕೊಳ್ಳುವವರೆಗೆ ಮಾತ್ರ ಇರುತ್ತದೆ. ಆಯಾ ಶಾಲಾ ಹಂತದಲ್ಲಿ ಅತಿಥಿ-ಶಿಕ್ಷಕರನ್ನು ಆಯ್ಕೆ ಮಾಡಲಾಗುತ್ತದೆ.

ಅರ್ಹ ಅಭ್ಯರ್ಥಿಗಳು ನಿಗದಿತ ಅರ್ಜಿ ನಮೂನೆಯನ್ನು ಸಂಬಂಧಪಟ್ಟ ವಸತಿ ಶಾಲೆಗಳಿಂದ ಪಡೆದು ಭರ್ತಿಮಾಡಿ ಅವಶ್ಯಕ ದಾಖಲೆಗಳೊಂದಿಗೆ ಸಂಬಂಧಿಸಿದ ವಸತಿ ಶಾಲೆಗಳಲ್ಲಿ 2025ರ ಜೂನ್ 13 ರೊಳಗಾಗಿ ಅರ್ಜಿ ಸಲ್ಲಿಸಬೇಕು. ಹೆಚ್ಚಿನ ಮಾಹಿತಿಗಾಗಿ ಸಂಬಂಧಪಟ್ಟ ವಸತಿ ಶಾಲೆಯನ್ನು ಹಾಗೂ ಜಿಲ್ಲಾ ಸಮನ್ವಯ ಅಧಿಕಾರಿ ಈರಣ್ಣ ಅರಕೇರಾ ಇವರ ಮೊಬೈಲ್ ಸಂಖ್ಯೆ 9731888783 ಗೆ ಸಂಪರ್ಕಿಸಲು ಕೋರಲಾಗಿದೆ.

Share post:

spot_imgspot_img

Popular

More like this
Related

ಕಲಬುರಗಿ: ಮಿಣಜಗಿಯಲ್ಲಿ ಹೊಸ ಕಟ್ಟಡಗಳ ಲೋಕಾರ್ಪಣೆ

ಕಲಬುರಗಿ ತಾಲೂಕಿನ ಮಿಣಜಗಿ ಗ್ರಾಮದಲ್ಲಿ 2023–24ನೇ ಸಾಲಿನ ವಿವಿಧ ಅಭಿವೃದ್ಧಿ ಯೋಜನೆಗಳ...

ಕಲಬುರಗಿ| ಫೆ.12 ರಿಂದ ಡಿ.ಇ.ಸಿ. ಸಾಮೂಹಿಕ ಗುಳಿಗೆ ನುಂಗಿಸುವ ಕಾರ್ಯಕ್ರಮ: ಡಿ.ಸಿ. ಬಿ.ಫೌಜಿಯಾ ತರನ್ನುಮ್ ಸೂಚನೆ

ಕಲಬುರಗಿ: ಆನೆಕಾಲು ರೋಗ ಬಾರದಂತೆ ತಡೆಗಟ್ಟುವ ನಿಟ್ಟಿನಲ್ಲಿ ಇದೇ ಫೆಬ್ರವರಿ 12...

ಕಲಬುರಗಿ| ಚಾಂದ ಬೀಬೀ ಕಾಲೇಜಿನಲ್ಲಿ ಗಣರಾಜ್ಯೋತ್ಸವ ದಿನಾಚರಣೆ

ಕಲಬುರಗಿ: ಚಾಂದ ಬೀ ಬೀ ಮಹಿಳಾ ಶಿಕ್ಷಣ ಮಹಾವಿದ್ಯಾಲಯದಲ್ಲಿ 77ನೆಯ ಗಣರಾಜ್ಯೋತ್ಸವ...

ಕಲಬುರಗಿ| ಹಾಸ್ಟೆಲ್ ಸಿಬ್ಬಂದಿಗಳಿಗೆ ಐದು ತಿಂಗಳಿಂದ ಸಿಗದ ವೇತನ; ಪ್ರತಿಭಟನೆ

ಕಲಬುರಗಿ: ಜಿಲ್ಲೆಯ ಸಮಾಜ ಕಲ್ಯಾಣ ಇಲಾಖೆಯ ವಸತಿ ನಿಲಯಗಳಲ್ಲಿ ಕಳೆದ 16-20...