ಕಲಬುರಗಿ| ಅರಿವಿನ ದೀಪ ಹಚ್ಚಿದ ಬುದ್ಧ, ಬಸವ, ಅಂಬೇಡ್ಕರ್: ಸತ್ಯಂಪೇಟೆ

Date:

Share post:

ಕಲಬುರಗಿ: ಬುದ್ಧ, ಬಸವ, ಅಂಬೇಡ್ಕರ್ ಈ ಮೂವರು ಭಿನ್ನ ಕಾಲಘಟ್ಟದಲ್ಲಿ, ಸಾಮಾಜಿಕ, ಆರ್ಥಿಕ, ಸಾಂಸ್ಕೃತಿಕ ಪರಿಸರದಲ್ಲಿ ಬಂದವರಾದರೂ, ಈ ಮೂವರನ್ನು ಸಮಾನತೆಯ ಸೂತ್ರದಲ್ಲಿ ಹಿಡಿದಿರಿಸಬಹುದಾಗಿದೆ ಎಂದು ಲೇಖಕ ಡಾ. ಶಿವರಂಜನ ಸತ್ಯಂಪೇಟೆ ಅಭಿಪ್ರಾಯಪಟ್ಟರು.

ನಗರದ ಸರ್ಕಾರಿ ಮಹಿಳಾ ಪ್ರಥಮ‌ ದರ್ಜೆ ಕಾಲೇಜಿನ ವಿಜ್ಞಾನ ಕಟ್ಟಡ ಸಭಾಂಗಣದಲ್ಲಿ ಬುಧವಾರ ಆಯೋಜಿಸಿದ್ದ ಬುದ್ಧ, ಬಸವ, ಅಂಬೇಡ್ಕರ್ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಬುದ್ಧ, ಬಸವ, ಅಂಬೇಡ್ಕರ್ ಮೂವರು ರಾಜಕುಮಾರ, ಮಂತ್ರಗಳೇ ಆಗಿದ್ದರು. ಆದರೂ ಈ ಮೂರು ಜನ ತಮ್ಮ ಪದವಿಗಳನ್ನು ತ್ಯಜಿಸಿ ದುಃಖಿತರ ಪರವಾಗಿ ನಿಂತು ಅಹರ್ನಿಷಿ ದುಡಿದರು ತಿಳಿಸಿದರು.

ಬುದ್ಧ, ಬಸವ, ಅಂಬೇಡ್ಕರ್ ಅವರ ಸಾಮಾಜಿಕ ಚಳವಳಿಗಳು ಮೂಲದಲ್ಲಿ ತುಳಿತಕ್ಕೆ ಒಳಗಾದ ಜನರಿಗಾಗಿ ಎಂಬುದನ್ನು ನಾವ್ಯಾರೂ ಮರೆಯಬಾರದು ಎಂದು ಕಿವಿಮಾತು ಹೇಳಿದರು.

ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಪ್ರಗತಿಪರ ಚಿಂತಕ ಸುರೇಶ ಬಡಿಗೇರ ಮಾತನಾಡಿ, ಸಂವಿಧಾನ ಶಿಲ್ಪಿ ಡಾ.‌ ಬಿ.ಆರ್. ಅಂಬೇಡ್ಕರ್ ಅವರನ್ನು ಜಾತಿಯ ಕಾರಣದಿಂದ ಒಪ್ಪಿಕೊಳ್ಳದಿದ್ದರೆ ನಮ್ಮಷ್ಟು ಮುರ್ಖರೆ ಯಾರೂ ಅಲ್ಲ! ಎಂದು ಹೇಳಿದರು.

ಆರ್.ಬಿ.ಐ. ಸ್ಥಾಪನೆಗೆ ಸಲಹೆ ನೀಡಿದ್ದ ಅಂಬೇಡ್ಕರ್ ರು, ನಿಜವಾದ ಸ್ತ್ತೀ ವಿಮೋಚಕರಾಗಿದ್ದರು, ರಾಷ್ಟ್ರಪ್ರೇಮಿ, ಸ್ವಾತಂತ್ರ್ಯ ಹೋರಾಟಗಾರರಾಗಿದ್ದರು ಎಂದು ತಿಳಿಸಿದರು.

ಅಧ್ಯಕ್ಷತೆ ವಹಿಸಿದ್ಧ ಕಾಲೇಜಿನ ಪ್ರಾಚಾರ್ಯ ಪ್ರೊ. ಪ್ರಕಾಶ ಮೋರ್ಗೆ ಮಾತನಾಡಿ, ಮಹಾತ್ಮರ ಕೊಡುಗೆಗಳನ್ನು ಸ್ಮರಿಸಿಕೊಂಡು ಸ್ಮರಿಸಿದರು.

ಸಂವಿಧಾನ ಎಲ್ಲ ಜಾತಿ, ಧರ್ಮಕ್ಕೆ ಅನ್ವಯ ಎಂದು ಹೇಳಿದರು.

ಬುದ್ಧ, ಬಸವ, ಅಂಬೇಡ್ಕರ್ ವೇದಿಕೆ ಸಂಚಾಲಕಿ ಡಾ.‌ ಪದ್ಮಾವತಿ ಧನ್ನಿ ವೇದಿಕೆಯಲ್ಲಿ ಇದ್ದರು. ಡಾ. ವಿಜಯಕುಮಾರ ಹೆಬ್ಬಾಳಕರ ನಿರೂಪಿಸಿದರು. ಪ್ರೊ.‌ ಅರವಿಂದ ದ್ಯಾಮಾ ಸ್ವಾಗತಿಸಿದರು.‌

ಡಾ. ಪದ್ಮಣ್ಣ ರಾಸಣಗಿ, ಪ್ರೊ.‌ ದಯಾಸಾಗರ, ಪ್ರೊ.‌ ಸಂತೋಷ, ಡಾ. ರೂಪಾಲಿ ಮತ್ತಿತರರು ಇದ್ದರು.

Share post:

spot_imgspot_img

Popular

More like this
Related

ಕಲಬುರಗಿ ಸೆಂಟ್ರಲ್ ಜೈಲಿನಿಂದ ಮೂವರು ಕೈದಿಗಳ ಪರಾರಿ; ತೀವ್ರ ಶೋಧ ಆರಂಭ

ಕಲಬುರಗಿ: ನಗರದ ಜೇವರ್ಗಿ ರಸ್ತೆಯಲ್ಲಿರುವ ಸೆಂಟ್ರಲ್ ಜೈಲಿನಿಂದ ಕೊಲೆ ಪ್ರಕರಣಗಳಲ್ಲಿ ಶಿಕ್ಷೆ...

ಕಲಬುರಗಿ| ಎಸ್ಐಆರ್: ಶೇ.100ರಷ್ಟು ಗಣತಿ ನಮೂನೆ ವಿತರಣೆ ಮಾಡಿ: ವಿ.ಅನ್ಬುಕುಮಾರ್

ಕಲಬುರಗಿ: ವಿಶೇಷ ಸಮಗ್ರ ಮತದಾರರ ಪಟ್ಟಿ ಪರಿಷ್ಕರಣೆಯಲ್ಲಿ ಬಿ.ಎಲ್.ಓ.ಗಳು ತಮ್ಮ ಬಳಿ...

ಕಲಬುರಗಿಗೆ ನಿರಂತರ ನೀರು ಪೂರೈಕೆ ಯೋಜನೆಯ ಕಾಮಗಾರಿ ಮುಗಿಸಿ: ಸಚಿವ ಯತೀಂದ್ರ ಸಿದ್ಧರಾಮಯ್ಯ ವಾರ್ನಿಂಗ್

ಕಲಬುರಗಿ: ಕಲಬುರಗಿ ಮಹಾನಗರಕ್ಕೆ ನಿರಂತರ ಕುಡಿಯುವ ನೀರು ಪೂರೈಕೆ 24x7 ಯೋಜನೆಯ...

Kalaburagi| ಊಟ ಸೇವನೆಯಿಂದ ಮಕ್ಕಳ ಅಸ್ವಸ್ಥ ಪ್ರಕರಣ: ಶಾಲೆಯ ಪ್ರಭಾರಿ ಪ್ರಾಂಶುಪಾಲ, ವಾರ್ಡನ್ ಅಮಾನತ್ತು

ಕಲಬುರಗಿ: ಜಿಲ್ಲೆಯ ಚಿತ್ತಾಪುರ ತಾಲೂಕಿನ ದಂಡೋತಿ ಗ್ರಾಮದ ಮೊರಾರ್ಜಿ ದೇಸಾಯಿ ಅಲ್ಪಸಂಖ್ಯಾತರ...