ಕಲಬುರಗಿಗೆ ನಿಜಶರಣ ಅಂಬಿಗರ ಚೌಡಯ್ಯನವರ ಮೂರ್ತಿ ಆಗಮನ

Date:

Share post:

ಕಲಬುರಗಿ: ಕೋಲಿ ಸಮಾಜದ ದಶಕಗಳ ಕನಸಾಗಿದ್ದ ಹನ್ನೆರಡನೇ ಶತಮಾನದ ಮಹಾನ್ ಶರಣ, ನಿಜಶರಣ ಅಂಬಿಗರ ಚೌಡಯ್ಯನವರ ಮೂರ್ತಿಯನ್ನು ಬುಧವಾರ ನಗರದಲ್ಲಿ ಭವ್ಯವಾಗಿ ಬರಮಾಡಿಕೊಳ್ಳಲಾಯಿತು.

ಸರ್ಕಾರದ ಅನುಮೋದನೆಯೊಂದಿಗೆ, ಕಾನೂನುಬದ್ಧವಾಗಿ ನಗರದ ಹೃದಯಭಾಗದಲ್ಲಿರುವ ಪಬ್ಲಿಕ್ ಗಾರ್ಡನ್‌ನ ಅನ್ನಪೂರ್ಣ ವೃತ್ತದ ಸಮೀಪ ಮೂರ್ತಿ ಪ್ರತಿಷ್ಠಾಪನೆಗೆ ಉದ್ದೇಶಿಸಿರುವ ಸ್ಥಳದಲ್ಲಿ ಮೂರ್ತಿಗೆ ಪೂಜೆ ಸಲ್ಲಿಸಲಾಯಿತು.

 

ಈ ಸಂದರ್ಭದಲ್ಲಿ ಕಲಬುರಗಿ ದಕ್ಷಿಣ ಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ, ವಿಧಾನ ಪರಿಷತ್ ಸದಸ್ಯ ತಿಪ್ಪಣ್ಣಪ್ಪ ಕಮಕನೂರ ಸೇರಿದಂತೆ ಸ್ಥಳೀಯ ರಾಜಕೀಯ ಮುಖಂಡರು, ಸಮಾಜದ ಹೋರಾಟಗಾರರು, ಹಿರಿಯ ಗಣ್ಯರು ಹಾಗೂ ಯುವಕರು ಉಪಸ್ಥಿತರಿದ್ದು, ಮೂರ್ತಿಯನ್ನು ಗೌರವಪೂರ್ವಕವಾಗಿ ಬರಮಾಡಿಕೊಂಡರು.

 

ನಿಜಶರಣ ಅಂಬಿಗರ ಚೌಡಯ್ಯನವರ ಮೂರ್ತಿ ಪ್ರತಿಷ್ಠಾಪನೆಯು ಕೋಲಿ ಸಮಾಜದ ಬಹುದಿನಗಳ ಬೇಡಿಕೆ ಹಾಗೂ ದಶಕಗಳ ಕನಸು ನನಸಾಗುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆಯಾಗಿದೆ. ಅಂಬಿಗರ ಚೌಡಯ್ಯನವರ ವಚನಗಳು, ಸಮಾನತೆಯ ಸಂದೇಶ ಹಾಗೂ ತತ್ವಾದರ್ಶಗಳು ಮುಂದಿನ ಪೀಳಿಗೆಗೆ ಪ್ರೇರಣೆಯಾಗಲಿವೆ ಎಂದು ಸಮಾಜದ ಮುಖಂಡರು ಆಶಯ ವ್ಯಕ್ತಪಡಿಸಿದರು.

 

ಈ ಸಂದರ್ಭದಲ್ಲಿ ಅಂಬಿಗರ ಚೌಡಯ್ಯ ಜಯಂತೋತ್ಸವ ಸಮಿತಿಯ ಅಧ್ಯಕ್ಷ ಜೈಪ್ರಕಾಶ್ ಕಮಕನೂರ, ಡಾ. ಕಿರಣ ದೇಶಮುಖ, ಖಂಡೇರಾವ, ಪ್ರವೀಣ್ ಪಾಟೀಲ್ ಹರವಾಳ, ಶರಣು ಮೋದಿ, ಸಂತೋಷ್ ಪಾಟೀಲ್ ದನ್ನೂರ, ಮುಖಂಡರಾದ ಸಂತೋಷ್ ಬೆನ್ನೂರ, ಅವ್ವಣ ಮ್ಯಾಕೇರಿ, ಶರಣಪ್ಪ ತಳವಾರ, ಶಾಂತಪ್ಪ ಕೂಡಿ, ಶಿವಶರಣಪ್ಪ ಕೋಬಾಳ, ರಮೇಶ ನಾಟೀಕರ್, ಬಸವರಾಜ ಸಪನಗೋಳ, ಉಮೇಶ ತಳವಾರ, ನ್ಯಾಯವಾದಿ ರಮೇಶ ಕಮಕನೂರ, ಸಂದೇಶ್ ಕಮಕನೂರ, ಅರ್ಜುನ ಜಮಾದಾರ, ವಿಜಯಕುಮಾರ ಹದಗಲ್, ಶಿವಾನಂದ ಹೋನಗುಂಟಿ, ಆನಂದ ಕದರಗಿ, ಅನೀಲ, ಗುಂಡು ಐನಾಪೂರ, ದಿಗಂಬರ ನಾಡಗಿರಿ, ಸುಖದೇವ ಕೋಗನೂರ, ಗುರು ನೆಲೋಗಿ, ಪ್ರೇಮ ಕೋಳಿ, ಅಂಬರೀಷ ಸೋನ್ನ ಹಾಗೂ ಚಿದಾನಂದ ಹೋನಗುಂಟಿ, ವೇಂಕಟೇಶ ಮರತೂರ ಸೇರಿದಂತೆ ಸಮಾಜದ ಹಲವು ಮುಖಂಡರು ಉಪಸ್ಥಿತರಿದ್ದರು.

Share post:

spot_imgspot_img

Popular

More like this
Related

Kalaburagi: ಎಸ್‌ಎಫ್‌ಐನ 17ನೇ ರಾಜ್ಯ ಸಮ್ಮೇಳನದ ಪೋಸ್ಟರ್ ಬಿಡುಗಡೆ

ಕಲಬುರಗಿ: ಭಾರತ ವಿದ್ಯಾರ್ಥಿ ಫೆಡರೇಶನ್ (ಎಸ್‌ಎಫ್‌ಐ) ಸಂಘಟನೆಯ 17ನೇ ರಾಜ್ಯ ಸಮ್ಮೇಳನದ...

ಕಲಬುರಗಿ| ವಿಧಾನ ಪರಿಷತ್ ಚುನಾವಣೆ: ಮಸ್ಟರಿಂಗ್ ಕಾರ್ಯ ಪರಿಶೀಲಿಸಿದ ಚುನಾವಣಾಧಿಕಾರಿ ಜಹೀರಾ ನಸೀಮ್ 

ಕಲಬುರಗಿ: ಕರ್ನಾಟಕ ವಿಧಾನ ಪರಿಷತ್ತಿಗೆ ಈಶಾನ್ಯ ಶಿಕ್ಷಕರ ಕ್ಷೇತ್ರದಿಂದ ಒಂದು ಸ್ಥಾನ...

ಕಲಬುರಗಿ| ಕ್ಷೇತ್ರಗಳ ವಿಂಗಡಣೆ ಮಾಡದೆ ಮಹಿಳಾ ಮೀಸಲಾತಿ ಜಾರಿಗೊಳಿಸಿ: ಮಲ್ಲಿಕಾರ್ಜುನ ಖರ್ಗೆ

ಕಲಬುರಗಿ: ಮಹಿಳಾ ಮೀಸಲಾತಿ ಜಾರಿಗೊಳಿಸುವುದಕ್ಕೆ ನಮ್ಮ ಸಂಪೂರ್ಣ ಬೆಂಬಲವಿದೆ. ಆದರೆ, ಕ್ಷೇತ್ರಗಳ...

ಕಲಬುರಗಿ| ದೇಶದ ರಕ್ಷಣೆಗಾಗಿ ಹುತಾತ್ಮರಾದ ಪೊಲೀಸರ ತ್ಯಾಗ ಸದಾ ಸ್ಮರಣೀಯ: ಇಕ್ರಮ್ ಶರೀಫ್

ಕಲಬುರಗಿ: ದೇಶದ ರಕ್ಷಣೆ ಮತ್ತು ಭದ್ರತೆಗಾಗಿ ತಮ್ಮ ಪ್ರಾಣವನ್ನೇ ಪಣಕ್ಕಿಟ್ಟು ಕರ್ತವ್ಯ...