ಕಲಬುರಗಿ: ಸಾರ್ವಜನಿಕರ ಅಹವಾಲು ಅಲಿಸಿದ‌ ಮುಖ್ಯಮಂತ್ರಿ ಡಿಕೆ ಶಿವಕುಮಾರ್ 

Date:

Share post:

ಕಲಬುರಗಿ: ಕಲಬುರಗಿ‌ ವಿಭಾಗ ಮಟ್ಟದ ಬರ ಪರಿಸ್ಥಿತಿ ಅವಲೊಕಿಸಲು ಜಿಲ್ಲೆಗೆ ಅಗಮಿಸಿರುವ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ಅವರು ಮಂಗಳವಾರ ಇಲ್ಲಿನ‌ ಐವಾನ್-ಎ-ಶಾಹಿ ಅತಿಥಿಗೃಹದಲ್ಲಿ ಸಾರ್ವಜನಿಕರು, ಸಂಘ ಸಂಸ್ಥೆಗಳ ನೂರಾರು ಪ್ರತಿನಿಧಿಗಳಿಂದ ಅಹವಾಲು ಆಲಿಸಿದರು.

ಜುಲೈ ತಿಂಗಳಲ್ಲಿಯೂ ಮಳೆ ಬರುವ ಯಾವುದೇ ಲಕ್ಷಣ ಕಾಣುತ್ತಿಲ್ಲ. ಕಲಬುರಗಿ ಜಿಲ್ಲೆಯನ್ನು ಬರಗಾಲ ಪಿಡಿತ ಪ್ರದೇಶವೆಂದು ಘೋಷಿಸಬೇಕು. ಕಳೆದ ವರ್ಷದ ಬಾಕಿ ಬೆಳೆ ವಿಮಿ ಮೊತ್ತ 300 ಕೋಟಿ ರೂ. ಕೂಡಲೆ ಬಿಡುಗಡೆ ಮಾಡಬೇಕೆಂದು ನವ ಕರ್ನಾಟಕ ರೈತ ಸಂಘದ ರಾಜ್ಯಾಧ್ಯಕ್ಷ ದಯಾನಂದ ಸಿ.ಪಾಟೀಲ ಮನವಿ ಮಾಡಿದರು.

 

ಎಸ್.ಟಿ ಸಮುದಾಯಕ್ಕೆ ಸೇರಿದ ತಳವಾರ, ನಾಯ್ಕಡ್ ವರ್ಗದ ವಿದ್ಯಾರ್ಥಿಗಳಿಗೆ ಕಳೆದ ಎರಡು ವರ್ಷಗಳಿಂದ ಜಾತಿ ಪ್ರಮಾಣ ಪತ್ರ‌ ನಿಡುತ್ತಿಲ್ಲ, ಇದರಿಂದ ಸಮಾಜದ ಯುವಕರಿಗೆ ಉದ್ಯೋಗ, ಶಿಕ್ಷಣಕ್ಕೆ ತೊಂದರೆಯಾಗುತ್ತಿದೆ. ಕೂಡಲೆ ಸಮಸ್ಯೆ ಬಗೆಹರಿಸಬೇಕೆಂದರು.

 

*ಬೆಳೆ ಸಾಲ ಮನ್ನಾ ಮಾಡಿ:*

 

ಕಳೆದ ವರ್ಷ ಅತಿವೃಷ್ಟಿಯಿಮದ ಹಸಿ ಬರಗಾಲ ಬಂದರೆ, ಈ ವರ್ಷ ಮಳೆ ಬಾರದೆ ಒಣ ಬರಗಾಲ ನೋಡುವ ಸ್ಥಿತಿ ನಮ್ಮ ರೈತಾಪಿ ವರ್ಗಕ್ಕೆ ಬಂದಿದೆ. ಕಲಬುರಗಿ ಜಿಲ್ಲೆಯಲ್ಲಿ ಅಲ್ಲಲ್ಲಿ ಅಲ್ಪಸ್ವಲ್ಪ ಮಳೆ ಬಿದ್ದ ಕಾರಣ ಇದೂವರೆಗೆ ಶೇ.30ರಷ್ಡು ಮಾತ್ರ ಬಿತ್ತನೆ ಮಾಡಲಾಗಿದೆ. ಬಿತ್ತನೆ ನಂತರ ಮಖೆ ಬರದ ಕಾರಣ ರೈತ ಕಂಗಾಲಿದ್ದಾನೆ. ಸಾಲ ಸೂಲ ಮಾಡಿ ಬೀಜ. ಗೊಬ್ಬರ ಖರೀದಿ ಮಾಡಿದ್ದು, ಬೆಳೆ ಕೈಕೊಡುವ ಎಲ್ಲಾ ಲಕ್ಷ್ಣ ಗೋಚರಿಸುತ್ತಿದೆ. ಹೀಗಾಗಿ ಸಹಕಾರಿ ಬ್ಯಾಂಕ್ ಮತ್ತು ರಾಷ್ಟ್ರೀಕೃತ ಬ್ಯಾಂಕ್ ಗಳಿಂದ ಸಾಲ ಪಡೆದ ರೈತರಿಗೆ ಸಾಲ ಮನ್ನಾ ಮಾಡಬೇಕೆಂದು ಸಿ‌.ಎಂ. ಅವರಿಗೆ ಮನವಿ ಪತ್ರ ಸಲ್ಲಿಸಿ ಜಿಲ್ಲಾ ಕೃಷಿಕ ಸಮಾಜದ ಜಿಲ್ಲಾಧ್ಯಕ್ಷ‌ ಸಿದ್ರಾಮಪ್ಪ ಪಾಟೀಲ ಧಂಗಾಪೂರ ಆಗ್ರಹಿಸಿದರು.

ರಾಜ್ಯದ ಉಪಮುಖ್ಯಮಂತ್ರಿ, ಕಂದಾಯ ಮತ್ತು ಯುವಜನ ಸಬಲೀಕರಣ‌ ಮತ್ತು ಕ್ರೀಡಾ ಸಚಿವ ಡಾ.ಜಿ.ರಮೇಶ್ವರ, ಗೃಹ, ಐ.ಟಿ-ಬಿ.ಟಿ ಹಾಗೂ ಇ-ಆಡಳಿತ ಎಚಿವ ಪ್ರಿಯಾಂಕ್ ಖರ್ಗೆ, ವೈದ್ಯಕೀಯ ಶಿಕ್ಷಣ, ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಹಾಗೂ ಜೀವನೋಪಾಯ ಸಚಿವ ಡಾ.ಶರಣಪ್ರಕಾಶ ಪಾಟೀಲ,‌ ಕೆ.ಕೆ.ಆರ್.ಡಿ.ಬಿ. ಅಧ್ಯಕ್ಷ ಡಾ.ಅಜಯ್ ಸಿಂಗ್, ಶಾಸಕ‌ ರಾದ ಎಂ.ವೈ.ಪಾಟೀಲ, ಜಗದೇವ ಗುತ್ತೇದಾರ ಇದ್ದರು.

Share post:

spot_imgspot_img

Popular

More like this
Related

ಕಲಬುರಗಿಯಲ್ಲಿ ಜೋಯಾಲುಕ್ಕಾಸ್‌ನ ‘ಬ್ರಿಲಿಯನ್ಸ್ ಡೈಮಂಡ್ ಜ್ಯುವೆಲ್ಲರಿ ಶೋ’

ಕಲಬುರಗಿ: ಜಗತ್ತಿನ ಪ್ರಸಿದ್ಧ ಜ್ಯುವೆಲ್ಲರಿ ಬ್ರ್ಯಾಂಡ್ ಜೋಯಾಲುಕ್ಕಾಸ್, ಕಲಬುರಗಿ ನಗರದ ತನ್ನ...

ಕಲಬುರಗಿ| ಬಿ.ನಾಗೇಂದ್ರ ಅವರನ್ನು ಸಂಪುಟದಿಂದ ಕೈಬಿಡಿ: ರಾಜಕುಮಾರ್ ಪಾಟೀಲ್ ತೆಲ್ಕೂರ್

ಕಲಬುರಗಿ: ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ನಡೆದ ಬಹುಕೋಟಿ ರೂಪಾಯಿ ಹಗರಣಕ್ಕೆ...

Kalaburagi| ರಾಜ್ಯ ನೀತಿ ಮತ್ತು ಯೋಜನಾ ಆಯೋಗದ ಉಪಾಧ್ಯಕ್ಷ ಸ್ಥಾನಕ್ಕೆ ಬಿ.ಆರ್ ಪಾಟೀಲ್ ರಾಜೀನಾಮೆ 

ಕಲಬುರಗಿ: ಕರ್ನಾಟಕ ರಾಜ್ಯ ನೀತಿ ಮತ್ತು ಯೋಜನಾ ಆಯೋಗದ ಉಪಾಧ್ಯಕ್ಷ ಸ್ಥಾನಕ್ಕೆ...

ಕಲಬುರಗಿ: 9,950ರೂ. ಲಂಚ ಸ್ವೀಕರಿಸುತ್ತಿದ್ದ ವೇಳೆ ಗ್ರಾಮ ಪಂಚಾಯಿತಿ ಕಾರ್ಯದರ್ಶಿ ಲೋಕಾಯುಕ್ತ ಬಲೆಗೆ

ಕಲಬುರಗಿ: ಆಸ್ತಿ ವರ್ಗಾವಣೆಗೆ ಸಂಬಂಧಿಸಿದ ಕಡತವನ್ನು ವಿಲೇವಾರಿ ಮಾಡಲು ಲಂಚ ಪಡೆಯುತ್ತಿದ್ದ...