ಕಲಬುರಗಿ| ಏ.15 ರಿಂದ 17ರ ವರೆಗೆ ಹೀಟ್ ವೇವ್ ಆರೆಂಜ್ ಅಲರ್ಟ್: ಜಿಲ್ಲಾಧಿಕಾರಿ ಖಡಕ್ ಎಚ್ಚರಿಕೆ 

Date:

Share post:

ಕಲಬುರಗಿ: ಕಲಬುರಗಿ ಜಿಲ್ಲೆಯಾದ್ಯಂತ ಇದೇ ಏಪ್ರೀಲ್ 15 ರಿಂದ 17ರ ವರೆಗೆ ಬಿಸಿ ಗಾಳಿ ಪರಿಸ್ಥಿತಿ ಹೆಚ್ಚಾಗೋ ಸಾಧ್ಯತೆಯಿಂದ ಹವಾಮಾನ ಇಲಾಖೆಯು ಮುನ್ನೆಚ್ಚರಿಕೆಯಾಗಿ ಹೀಟ್ ವೇವ್ (ಶಾಖದ ಹೊಡೆತ) ಆರೆಂಜ್ ಅಲರ್ಟ್ ನೀಡಿದ್ದು, ಬಿಸಿಲಿನ ಹೊಡೆತದಿಂದ ರಕ್ಷಿಸಿಕೊಳ್ಳಲು ಸಾರ್ವಜನಿಕರು ವಿಶೇಷವಾಗಿ ಮಧ್ಯಾಹ್ನ 12 ರಿಂದ ಸಂಜೆ 4 ಗಂಟೆ ವರೆಗೆ ಮನೆಯಿಂದ ಹೊರಹೋಗುವದನ್ನು ಸಾಧ್ಯವಾದಷ್ಟು ಮಟ್ಟಿಗೆ ತಪ್ಪಿಸುವಂತೆ ಡಿ.ಸಿ ಬಿ.ಫೌಜಿಯಾ ತರನ್ನಮ್ ಅವರು ಸಲಹೆ ನೀಡಿದ್ದಾರೆ.

 

ಬಿಸಿಲಿನಲ್ಲಿ ಹೋಗುವಾಗ ದೇಹಕ್ಕೆ ರಕ್ಷಣಾತ್ಮಕವಾಗಿ ಕನ್ನಡಕಗಳು, ಛತ್ರಿ-ಟೋಪಿ, ಬೂಟುಗಳು ಅಥವಾ ಚಪ್ಪಲ್‌ಗಳನ್ನು ಬಳಸಬೇಕು. ಪ್ರಯಾಣಿಕರು ತಮ್ಮೊಂದಿಗೆ ನೀರು ತೆಗೆದುಕೊಂಡು ಹೋಗಬೇಕು. ಹಗುರವಾದ ತಿಳಿ ಬಣ್ಣದ, ಸಡಿಲವಾದ ಮತ್ತು ರಂಧ್ರವಿರುವ ಹತ್ತಿ ಬಟ್ಟೆಗಳನ್ನು ಧರಿಸುವಂತೆ ಹಾಗೂ ತಾಪಮಾನ ಹೆಚ್ಚಿರುವಾಗ ಶ್ರಮದಾಯಕ ಚಟುವಟಿಕೆಗಳನ್ನು ತಪ್ಪಿಸುವಂತೆ ಸಲಹೆ ನೀಡಿರುವ ಅವರು, ಹೆಚ್ಚಾಗಿ ಬಾಯಾರಿಕೆ ಇಲ್ಲದಿದ್ದರೂ ಸಹ ಸಾಕಷ್ಟು ನೀರು ಕುಡಿಯಬೇಕೆಂದು ಸಾರ್ವಜನಿಕರಲ್ಲಿ ಡಿ.ಸಿ. ಮನವಿ ಮಾಡಿದ್ದಾರೆ.

 

ಮಧ್ಯಾಹ್ನ 12 ರಿಂದ 3 ಗಂಟೆಯವರೆಗೆ ಹೊರಗೆ ಕೆಲಸ ಮಾಡುವುದನ್ನು ತಪ್ಪಿಸಬೇಕು. ರೈತರು, ಕೃಷಿ ಕಾರ್ಮಿಕರು ಹಾಗೂ ಸಾರ್ವಜನಿಕರು ಅನಿವಾರ್ಯ ಪರಿಸ್ಥಿತಿಯಲ್ಲಿ ಹೊರಗೆ ಕೆಲಸ ಮಾಡಬೇಕಾದ ಪರಿಸ್ಥಿತಿ ಬಂದಲ್ಲಿ ಟೋಪಿ ಅಥವಾ ಛತ್ರಿ ಬಳಸುವುದರ ಜೊತೆಗೆ ತಲೆ, ಕುತ್ತಿಗೆ, ಮುಖ ಮತ್ತು ಕೈಕಾಲುಗಳ ಮೇಲೆ ಒದ್ದೆಯಾದ ಬಟ್ಟೆಯನ್ನು ಬಳಸುವುದು ಒಳ್ಳೆಯದು. ನಿಲ್ಲಿಸಿದ ವಾಹನಗಳಲ್ಲಿ ಮಕ್ಕಳನ್ನು ಅಥವಾ ಸಾಕುಪ್ರಾಣಿಗಳನ್ನು ಬಿಡಬಾರದು. ಇನ್ನು ಮನೆಯನ್ನು ತಂಪಾಗಿರಿಸಲು ಪರದೆಗಳು, ಶಟರ್‌ಗಳು ಅಥವಾ ಸನ್‌ಶೇಡ್‌ಗಳನ್ನು ಬಳಸುವುದು ಮತ್ತು ತಣ್ಣೀರಿನಲ್ಲಿ ಸ್ನಾನ ಮಾಡುವುದು ಆರೋಗ್ಯಕರ ಎಂದಿದ್ದಾರೆ.

 

ಸಾಧಾರಣ ತಾಪಮಾನ ಮತ್ತು ಶಾಖವು ಸಾಮಾನ್ಯ ಜನರಿಗೆ ಸಹಿಸಿಕೊಳ್ಳಬಲ್ಲದು. ಆದರೆ ಶಿಶುಗಳು, ವೃದ್ಧರು, ದೀರ್ಘಕಾಲದ ಕಾಯಿಲೆ ಇರುವ ಜನರು ಸಹಿಸಿಕೊಳ್ಳಲಾಗದು. ಇಒವರು ತುಂಬಾ ಎಚ್ಚರಿಕೆ ವಹಿಸಬೇಕು. ಬಿಸಿಲಿನಲ್ಲಿ ತಲೆ ಹಾಗೂ ದೇಹವನ್ನು ಸೂರ್ಯನ ಕಿರಣಗಳಿಗೆ ಒಡ್ಡಬಾರದು. ಹೊರಗಿನ ಬಿಸಿಲಿನಿಂದ ಮನೆಗೆ ಬಂದ ತಕ್ಷಣ ಕೂಡಲೇ ಅತಿ ತಂಪಾದ ನೀರು ಕುಡಿಯಬಾರದು ಅಥವಾ ಎ.ಸಿ /ಕೂಲರ್ ಬಳಸುವುದು ಸೂಕ್ತವಲ್ಲ ಎಂದಿದ್ದಾರೆ.

ಚಹಾ-ಕಾಫಿ ತ್ಯಜಿಸಿ,ಲಸ್ಸಿ-ಮಜ್ಜಿಗೆ ಸೇವಿಸಿ:

ಬಿಸಿಲಿನ ಶಾಖ ಹೆಚ್ಚಿರುವುದರಿಂದ ದೇಹವನ್ನು ನಿರ್ಜಲೀಕರಣಗೊಳಿಸುವ ಆಲ್ಕೋಹಾಲ್, ಕಾರ್ಬೋನೇಟೆಡ್ ತಂಪು ಪಾನೀಯಗಳನ್ನು, ಚಹಾ, ಕಾಫಿ ಹಾಗೂ ಹೆಚ್ಚಿನ ಪ್ರೋಟೀನ್ ಆಹಾರ ಮತ್ತು ಹಳೆಯ ಆಹಾರವನ್ನು ಸೇವಿಸದೆ ಓ.ಆರ್.ಎಸ್. ಅಲ್ಲದೆ ಮನೆಯಲ್ಲಿ ತಯಾರಿಸಿದ ಪಾನೀಯಗಳಾದ ಲಸ್ಸಿ, ತೋರಣಿ (ಅಕ್ಕಿ ನೀರು), ನಿಂಬೆ ನೀರು, ಮಜ್ಜಿಗೆ, ಇತ್ಯಾದಿಗಳನ್ನು ಸೇವಿಸದಲ್ಲಿ ದೇಹ ಮರು-ಜಲೀಕರಣಗೊಳ್ಳುತ್ತದೆ ಎಂದಿರುವ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಅಧ್ಯಕ್ಷರಾಗಿರುವ ಜಿಲ್ಲಾಧಿಕಾರಿಗಳು, ಬಿಸಿಲಿನಿಂದ ಮೂರ್ಛೆ ಹೋದಲ್ಲಿ ಅಥವಾ ಅನಾರೋಗ್ಯ ಎನಿಸಿದಲ್ಲಿ ತಕ್ಷಣ ವೈದ್ಯರನ್ನು ಸಂಪರ್ಕಿಸುವಂತೆ ಕೋರಿದ್ದಾರೆ.

ಏನು ಮಾಡಬೇಕು:?

ಬಿಸಿಲಿನಿಂದ ರಕ್ಷಿಸಿಕೊಳ್ಳಲು ಸಾರ್ವಜನಿಕರು ಸಾಧ್ಯವಾದಷ್ಟು ತಂಪಾದ ಸ್ಥಳಗಳಲ್ಲಿ ವಾಸವಿರಬೇಕು. ಬಿಸಿಲಿನ ಅವಧಿಯಲ್ಲಿ ಕೊಡೆ ಬಳಸಬೇಕು, ಹತ್ತಿ ಭಟ್ಟೆ ಮತ್ತು ಟೋಪಿ ಧರಿಸಬೇಕು, ಬಿಸಿಲಿನ ಅವಧಿಯಲ್ಲಿ ಹೆಚ್ಚು ವಿಶ್ರಾಂತಿ ಪಡೆಯಬೇಕು. ಸಾಕಷ್ಟ ನೀರು ಮಜ್ಜೆಗೆ ಕುಡಿಯಬೇಕು. ಬಿಸಿಗಾಳಿಗೆ ತುತ್ತಾದವರಿಗೆ ಸಾಕಷ್ಟು ಕುಡಿಯುವ ನೀರು ಕೊಟ್ಟು ಕೂಡಲೆ ಚಿಕಿತ್ಸೆ ನೀಡಬೇಕು.

ಏನು ಮಾಡಬಾರದು?:

ನೇರ ಬಿಸಿಲು-ಸೂರ್ಯಕಿರಣಕ್ಕೆ ಮೈ ಒಡ್ಡಬಾರದು. ಬಿಸಿಲಿನ ಅವಧಿಯಲ್ಲಿ ಕೊಡೆ ಇಲ್ಲದೆ ಹೊರಹೋಗಬಾರದು. ಕಪ್ಪು-ಗಾಢ ಬಣ್ಣದ ತೆಳುವಾದ ಸಿಂಥೆಟಿಕ್ ಉಡುಪುಗಳನ್ನು ಧರಿಸಬಾರದು. ಬಿಸಿಲಿನ ಅವಧಿಯಲ್ಲಿ ಶ್ರಮದಾಯಕ ಕೆಲಸ ಮಾಬಾರದು. ಬಿಸಿ ಚಹಾ, ಮದ್ಯ ಸೇವಿಸಬಾರದು. ವಾಸವಿರುವ ಕೋಣೆಯಲ್ಲಿ ನೇರ ಬಿಸಿಲು ಬೀಳದಂತೆ ಎಚ್ಚರ ವಹಿಸುವುದು. ಬಿಸಿಗಾಳಿಗೆ ತುತ್ತಾದ ವ್ಯಕ್ತಿಗೆ ಕೂಡಲೆ ತಂಪಾದ ಸ್ಥಳಕ್ಕೆ ಕರೆದೊಯ್ಯಲು ಮತ್ತು ಪ್ರಥಮ ಚಿಕಿತ್ಸೆ ನೀಡಲು ತಡ ಮಾಡಬಾರದು.

ಜಾನುವಾರುಗಳ ರಕ್ಷಣೆ ಹೇಗೆ:?

ಜಾನುವಾರುಗಳನ್ನು ಮುಂಜಾನೆ ಮತ್ತು ಸಾಯಂಕಾಲ ಸಮಯದಲ್ಲಿ ಮೇಯಿಸಬೇಕು ಮತ್ತು ಉಳುಮೆಗೆ ಬಳಸಿಕೊಳ್ಳಬೇಕು. ಮಧ್ಯಾಹ್ನದ ಸಮಯದಲ್ಲಿ ಜಾನುವಾರುಗಳನ್ನು ಹಾಗೂ ಕುರಿ ಮತ್ತು ಆಡುಗಳನ್ನು ಕೊಟ್ಟಿಗೆಯಲ್ಲಿ ಅಥವಾ ಗಿಡದ ನೆರಳಿನಲ್ಲಿ ಕಟ್ಟಬೇಕು. ದಿನಕ್ಕೆ 2 ರಿಂದ 3 ಸಾರಿ ಶುದ್ಧವಾದ ನೀರನ್ನು ಕುಡಿಸಬೇಕು. ನಿರ್ಜಲೀಕರಣಗೊಂಡ ಜಾನುವಾರುಗಳಿಗೆ ಉಪ್ಪು, ಅಡುಗೆ ಸೋಡಾ, ಬೆಲ್ಲ ಹಾಗೂ ಲಿಂಬೆ ಹಣ್ಣಿನ ರಸವನ್ನು ನೀರಿನಲ್ಲಿ ಮಿಶ್ರಣ ಮಾಡಿ ದಿನದಲ್ಲಿ 3 ರಿಂದ 4 ಸಾರಿ ಕುಡಿಸಬೇಕು. ಜಾನುವಾರುಗಳಿಗೆ ಮುಂಜಾಗ್ರತೆಯಾಗಿ ಸಾಂಕ್ರಾಮಿಕ ರೋಗಗಳಿಗೆ ಲಸಿಕೆಗಳನ್ನು ಕಾಲಕಾಲಕ್ಕೆ ಹಾಕಿಸಬೇಕು. ರೈತರು ತಮ್ಮ ಜಮೀನಿನಲ್ಲಿರುವ ಮೇವನ್ನು ಯಾವುದೇ ಕಾರಣಕ್ಕೂ ಸುಟ್ಟು ಹಾಕದೇ ಬಣವೇ ಹಾಕಿ ಅಥವಾ ಸುರುಳಿ ಸುತ್ತಿಟ್ಟುಕೊಂಡು (ಬೇಲಿಂಗ್) ಮೇವನ್ನು ಸಂಗ್ರಹಿಸಬೇಕು. ಇದರಿಂದ ಭೂಮಿಯ ಫಲವತ್ತತೆ ಹಾಳಾಗದಂತೆ ತಡೆಯುವುದರ ಜೊತೆಗೆ ಜಾನುವಾರುಗಳಿಗೆ ಮೇವಿನ ಕೊರತೆ ನೀಗಿಸಬಹುದಾಗಿದೆ.

Share post:

spot_imgspot_img

Popular

More like this
Related

ಕಲಬುರಗಿ ನೂತನ ಜಿಲ್ಲಾಧಿಕಾರಿಯಾಗಿ ಇಕ್ರಮ್ ಶರೀಫ್ ಅಧಿಕಾರ ಸ್ವೀಕಾರ

ಕಲಬುರಗಿ: ಕಲಬುರಗಿ ಜಿಲ್ಲೆಯ ನೂತನ ಜಿಲ್ಲಾಧಿಕಾರಿಯಾಗಿ ಕರ್ನಾಟಕ ಕೇಡರಿನ 2016ನೇ ಬ್ಯಾಚಿನ...

ಸಿದ್ದು ಸಂಪುಟದ ಸಚಿವ ಡಿ. ಸುಧಾಕ‌ರ್ ಇನ್ನಿಲ್ಲ!

ಬೆಂಗಳೂರು: ಯೋಜನಾ ಮತ್ತು ಸಾoಖಿಕ, ಚಿತ್ರದುರ್ಗ ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್...

ಕಲಬುರಗಿ ಕೋಟೆಯಲ್ಲಿ ಹರಿದ ಸಂಗೀತ ಸುಧೆ; ಗಾಯನಕ್ಕೆ ತಲೆದೂಗಿದ ಕಲಾ ಪ್ರೇಮಿಗಳು

ಕಲಬುರಗಿ: ಶುಕ್ರವಾರ ಸಂಜೆ ನಗರದ ಐತಿಹಾಸಿಕ ಕಲಬುರಗಿ ಕೋಟೆಯಲ್ಲಿ ಇದೇ ಪ್ರಥಮ...