ಕಲಬುರಗಿ: ಕಲಬುರಗಿ ರಂಗಾಯಣದ ರೆಪರ್ಟರಿಗೆ ಒಂದು ವರ್ಷದ ಅವಧಿಗೆ ಗುತ್ತಿಗೆ ಆಧಾರದ ಮೇಲೆ ತಾತ್ಕಾಲಿಕವಾಗಿ ತಂತ್ರಜ್ಞರು ಹಾಗೂ ಕಲಾವಿದರ ಹುದ್ದೆಗಳಿಗೆ ದಿನಾಂಕ: 29-08-2025 ಹಾಗೂ 30-08-2025 ರಂದು ಸಂದರ್ಶನ ನಡೆಸಿ ಆಯ್ಕೆ ಮಾಡಲಾಗಿದೆ ಎಂದು ಕಲಬುರಗಿ ರಂಗಾಯಣ ನಿರ್ದೇಶಕರಾದ ಡಾ. ಸುಜಾತಾ ಜಂಗಮಶೆಟ್ಟಿ ಅವರು ತಿಳಿಸಿದ್ದಾರೆ.
ಆಯ್ಕೆಯಾದ ತಂತ್ರಜ್ಞರ ವಿವರ ಇಂತಿದೆ. ರಾಜಕುಮಾರ್ ಎಸ್.ಕೆ. ಕಲಬುರಗಿ (ರಂಗಸಜ್ಜಿಕೆ ವಿಭಾಗ) ಹಾಗೂ ಶ್ರೀನಿವಾಸ ಲಕ್ಷ್ಮಣ ದೋರನಹಳ್ಳಿ ಯಾದಗಿರಿ (ಧ್ವನಿ-ಬೆಳಕು ವಿಭಾಗ).
ಆಯ್ಕೆಯಾದ ಕಲಾವಿದರ ವಿವರ ಇಂತಿದೆ: ಭಾಗ್ಯಶ್ರೀ ತಂದೆ ಭೀಮರಾಯ ಕಲಬುರಗಿ, ವಾಣಿಶ್ರೀ ತಂದೆ ಬಸವರಾಜ ಕಲಬುರಗಿ, ಮಹಾಂತೇಶ್ ರಾಯಚೂರು, ಅಭಿಷೇಕ್ ತಂದೆ ಸೋಮನಾಥ ಕಲಬುರಗಿ, ಸಿದ್ದಪ್ಪ ತಂದೆ ಹುಣಚಪ್ಪ ಕಲಬುರಗಿ, ಅಂಬಿಕಾ ತಂದೆ ಸಾಯಿಬಣ್ಣ ಕಲಬುರಗಿ, ಅಂಬ್ರೀಶ ತಂದೆ ಸಾಯಬಣ್ಣ ಕಲಬುರಗಿ, ಮಹೇಶ ತಂದೆ ರಾಜಶೇಖರ ಕಲಬುರಗಿ, ಭೀಮಸಾಗರ ತಂದೆ ಚಂದ್ರಕಾಂತ ಕಲಬುರಗಿ, ಸಾಗರ ತಂದೆ ಮಲ್ಲಿಕಾರ್ಜುನ ಕಲಬುರಗಿ ಹಾಗೂ ರಾಘವೇಂದ್ರ ತಂದೆ ಲಕ್ಷ್ಮಣ ಕಲಬುರಗಿ.


