ಕಲಬುರಗಿ: 9ನೇ ದಿವಸ, 11 ನೇ ದಿವಸ ಗಣೇಶ ವಿಸರ್ಜನೆ ಹಾಗೂ ಈದ್-ಎ-ಮಿಲಾದ್-ಉನ್-ನಬಿ ಹಬ್ಬದ ಪ್ರಯುಕ್ತವಾಗಿ ನಗರ ಪೊಲೀಸ್ ಆಯುಕ್ತರಾದ ಡಾ. ಶರಣಪ್ಪ ಎಸ್ ಡಿ. ಅವರ ನೇತೃತ್ವದಲ್ಲಿ ನಗರದಲ್ಲಿ ಪೊಲೀಸ್ ಪಥ ಸಂಚಲನವನ್ನು ನಡೆಸಲಾಯಿತು.
ಪಥ ಸಂಚಲನವು ಕಲಬುರಗಿ ನಗರದ ಕೋಟೆಯಿಂದ ಪ್ರಾರಂಭವಾಗಿ ಪ್ರಕಾಶ್ ಏಷಿಯನ್ ಮಾಲ್, ಲೋಹರ್ ಗಲ್ಲಿ, ಹುಮನಾಬಾದ್ ಬೇಸ್, MAT ಕ್ರಾಸ್, ಮುಸ್ಲಿಂ ಚೌಕ್, ನ್ಯಾಷನಲ್ ಚೌಕ್, ಬಹುಮನಿ ಆಸ್ಪತ್ರೆ, ಗಣೇಶ್ ಮಂದಿರ, ಮಾರ್ಕೆಟ್ ಮಸ್ಜಿದ್, ಚಪ್ಪಲ್ ಬಜಾರ್, ಜೆಬಿ ಸರ್ಕಲ್, ಬ್ರಹ್ಮಪುರ ಪೊಲೀಸ್ ಠಾಣೆ ಎದುರುಗಡೆಯಿಂದ ಜಗತ್ ವೃತ್ತಕ್ಕೆ ಬಂದು ಸಂಪನ್ನಗೊಂಡಿದೆ.
ಸದರಿ ಪಥ ಸಂಚಲನದಲ್ಲಿ ಡಿಸಿಪಿ ಕನಿಕಾ ಸಿಕ್ರಿವಾಲ್, ಪ್ರವೀಣ್ ನಾಯಕ್, ಡಿ.ಕಿಶೋರ್ ಬಾಬು, ಕಲಬುರಗಿ ನಗರದ ಸಿ.ಎ.ಆರ್ ಘಟಕ, ಕೆ ಎಸ್ ಆರ್ ಪಿ ಸಿಬ್ಬಂದಿ ಸೇರಿದಂತೆ 500ಕ್ಕೂ ಹೆಚ್ಚು ಪೊಲೀಸ್ ಅಧಿಕಾರಿ ಸಿಬ್ಬಂದಿಯವರು ಭಾಗವಹಿಸಿದ್ದರು.


