ಕಲಬುರಗಿ| ನಾನು ಶಾಸಕನಲ್ಲ, ನಿಮ್ಮ ಸೇವಕ: ಅಲ್ಲಮಪ್ರಭು ಪಾಟೀಲ್

Date:

Share post:

ಕಲಬುರಗಿ: ಸದಾಶಿವ ನಗರದ ಶ್ರೀ ಗಣೇಶ ಮಂದಿರ ಗಣೇಶ ವಿಸರ್ಜನಾ ದಿನದಂದು ಬಡಾವಣೆಯ ಹತ್ತನೇ ಮತ್ತು ಪಿ.ಯು.ಸಿ‌.ಯಲ್ಲಿ ಪ್ರಥಮ ದರ್ಜೆಯಲ್ಲಿ ತೇರ್ಗಡೆಯಾದ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ಸಮಾರಂಭ ಹಾಗೂ ವಿವಿಧ ಸ್ಪರ್ಧೆಗಳಲ್ಲಿ ವಿಜೇತ ಮಕ್ಕಳಿಗೆ ಬಹುಮಾನ ವಿತರಣಾ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದ ಕಲಬುರಗಿ ದಕ್ಚಿಣ ಕ್ಚೇತ್ರದ ಶಾಸಕರಾದ ಶ್ರೀ ಅಲ್ಲಮಪ್ರಭು ಪಾಟೀಲರು ಪ್ರತಿಭೆ ಎನ್ನುವುದು ಯಾರೊಬ್ಬರ ಸ್ವತ್ತಲ್ಲಾ ಅಂತಹ ಪ್ರತಿಭೆಯನ್ನು ಪಡೆದ ಮಕ್ಕಳು ತಮ್ಮ ಪಾಲಕರು ಹಾಗೂ ಊರಿನ,ಬಡಾವಣೆಯ ಹೆಸರು ತರಬೇಕು ಎಂದರು.

 

ಮುಂದುವರೆದು ಮಾತನಾಡಿದ ಅವರು, ನಾನು ಶಾಸಕ ನಲ್ಲ ನಿಮ್ಮ ಸೇವಕ ನನಗೆ ತಮ್ಮ ಸೇವೆ ಮಾಡಲು ಅವಕಾಶ ಮಾಡಿಕೊಟ್ಟ ತಮಗೆ ಯಾವತ್ತಿಗೂ ಚಿರ ಋಣಿ ಎಂದು ಹೇಳುತ್ತಾ ಈ ಬಡಾವಣೆಗಳ ಜನರೊಟ್ಟಿಗೆ ಯಾವತ್ತಿಗೂ ಇದ್ದು ತಮ್ಮ ಸಮಸ್ಯೆಗಳನ್ನು ಪರಿಹರಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೆನೆ ಎಂದರು.ಇದೇ ಸಂಧರ್ಭದಲ್ಲಿ ಮೂರು ದಿನಗಳ ಕಾಲ ಪ್ರಸಾದ ಸೇವೆ ಸಲ್ಲಿಸಿದ ಮಹನಿಯರನ್ನು ಗೌರವಿಸಲಾಯಿತು.ಪ್ರಧಾನ ಅರ್ಚಕ ವಿವೇಕಸ್ವಾಮಿ ದಂಪತಿಗಳನ್ನು ಸಮಿತಿಯ ಪರವಾಗಿ ಗೌರವಿಸಲಾಯಿತು .

ವೇದಿಕೆಯಲ್ಲಿ ,ದಕ್ಚಿಣ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಚ ಲಿಂಗರಾಜ ತಾರಫೈಲ್, ಹಾವೇಂದ್ರ ಪುಣ್ಯಶೆಟ್ಟಿ ಡಾ.ಮುದ್ದಾ,ಅಮೀನರಡ್ಡಿ,ಡಾ.ಮಲ್ಲಿಕಾರ್ಜುನ ಚಿಕ್ಕಪಾಟೀಲ ಉಪಸ್ತಿತರಿದ್ದರು,ಶ್ರೀ ವೀರಣ್ಣಗುಗ್ವಾಡ್ ನಿರೂಪಿಸಿದರು ವೀರಭದ್ರಪ್ಪಾ ಪಾಟೀಲ ವಂದಿಸಿದರು. ಸದಾಶಿವ ನಗರ,ನವಜೀವನ ನಗರ,ಮೋಹನ ನಗರ,ಗಾಬರೇ ಲೇಔಟ ನ ನಿವಾಸಿಗಳು ಮಹಿಳೆಯರು ಮಕ್ಕಳು ಉಪಸ್ತಿತರಿದ್ದರು,ಮಹಾಮಂಗಳಾರತಿ ನಂತರ ಗಣೇಶನನ್ನು ವಿಸರ್ಜಿಸಲಾಯಿತು.

Share post:

spot_imgspot_img

Popular

More like this
Related

ಕಲಬುರಗಿ| ವಿ.ಜಿ ವುಮನ್ಸ್ ಕಾಲೇಜಿನಲ್ಲಿ ವಿಶ್ವ ಮಾತೃ ಭಾಷೆ ದಿನಾಚರಣೆ ಆಚರಣೆ

ಕಲಬುರಗಿ: ಕಲಬುರಗಿ ನಗರದ ಪ್ರತಿಷ್ಠಿತ ಮಹಿಳಾ ಮಹಾವಿದ್ಯಾಲಯವಾದ ಶ್ರೀಮತಿ ವೀರಮ್ಮ ಗಂಗಸಿರಿ...

ಕಲಬುರಗಿ| ಎರಡು ದಿನಗಳ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ತೆರೆ

ಕಲಬುರಗಿ: ಸೋಮವಾರದಿಂದ ಪ್ರಾರಂಭವಾದ 22ನೆಯ ಕಲಬುರಗಿ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನವು...

ಕಲಬುರಗಿ ಜಿಲ್ಲೆಯನ್ನು ರಾಜ್ಯದ ಉಪರಾಜಧಾನಿಯನ್ನಾಗಿ ಘೋಷಿಸಿ: ಮುಡುಬಿ ಗುಂಡೇರಾವ

ಕಲಬುರಗಿ: ಕಲಬುರಗಿ ನಗರವನ್ನು ಕೇವಲ ಪ್ರಾದೇಶಿಕ ಕೇಂದ್ರವಾಗಿ ನೋಡದೆ, ಈ ಭಾಗದ...

ಕಲಬುರಗಿ| ಶಿಕ್ಷಣದ ಜ್ಯೋತಿ ಹೊತ್ತಿಸಿದ ಮಹಾದೇವಪ್ಪ ರಾಂಪುರೆ: ಡಾ.ಮಹೇಶ ಗಂವ್ಹಾರ

ಕಲಬುರಗಿ: ಅಂದಿನ ಹೈದ್ರಾಬಾದ್ ಕರ್ನಾಟಕದಲ್ಲಿ ಶಿಕ್ಷಣದ ಜ್ಯೋತಿ ಹೊತ್ತಿಸಿದ ಪುಣ್ಯಾತ್ಮ ಮಹಾದೇವಪ್ಪ...