ಕಲಬುರಗಿ| ಪಿಡಿಎ ಇಂಜಿನಿಯರಿಂಗ್ ಕಾಲೇಜಿನಲ್ಲಿ ಗ್ರಂಥಪಾಲಕರ ದಿನಾಚರಣೆ

Date:

Share post:

ಕಲಬುರಗಿ: ಹೈದರಾಬಾದ್ ಕರ್ನಾಟಕ ಶಿಕ್ಷಣ ಸಂಸ್ಥೆಯ ಪೂಜ್ಯ ದೊಡ್ಡಪ್ಪ ಅಪ್ಪ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಗ್ರಂಥಾಲಯ ಪಿತಾಮಹ ಡಾ. ಎಸ್ಆರ್ ರಂಗನಾಥ್ ರವರ 133ನೇ ಜನ್ಮದಿನ ಹಾಗೂ ಗ್ರಂಥಪಾಲಕರ ದಿನಾಚರಣೆಯನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರಾಂಶುಪಾಲರಾದ ಡಾ ಎಸ್ ಆರ್ ಪಾಟೀಲರು ಹಾಗೂ ಅತಿಥಿಗಳಾಗಿ ಶ್ರೀಮತಿ ಡಾ. ಭಾರತಿ ಹರಸೂರ ಶ್ರೀಮತಿ ಡಾ.ಶ್ರೀದೇವಿ ಸೋಮ ಪರೀಕ್ಷಾ ನಿಯಂತ್ರಣ ಅಧಿಕಾರಿಗಳು ಭಾಗವಹಿಸಿದ್ದರು. ಮುಖ್ಯ ಗ್ರಂಥಪಾಲಕರಾದ ಡಾ. ಮಲ್ಲಿಕಾರ್ಜುನ ವಡ್ಡನ ಕೇರಿ ಅವರು ಡಾ.ಎಸ್ ಆರ್ ರಂಗನಾಥನ್ ರವರ ಜೀವನ ಸಾಧನೆ ಹಾಗೂ ಗ್ರಂಥಾಲಯ ಶಿಕ್ಷಣವನ್ನು ವಿಶ್ವವಿದ್ಯಾಲಯಗಳಲ್ಲಿ,ಗ್ರಂಥಾಲಯ ವಿಜ್ಞಾನ ವಿಭಾಗವನ್ನು ಪ್ರಾರಂಭಿಸಲು ಅವರು ಪ್ರಯತ್ನವೇ ಕಾರಣವೆಂದು ನುಡಿದರು.

ಅತಿಥಿಗಳಾಗಿ ಭಾಗಿಯಾದ ಭಾರತಿ ಹರಸೂರ ತಮ್ಮ ನುಡಿಗಳಲ್ಲಿ ಗ್ರಂಥಾಲಯಗಳಲ್ಲಿರುವ ಮಾಹಿತಿ ಸಂಪನ್ಮೂಲಗಳನ್ನು ಪ್ರಕಟಿತ ಹಾಗೂ ಡಿಜಿಟಲ್ ಮಾಧ್ಯಮದ ಮುಖಾಂತರ ಓದುಗರ ಜ್ಞಾನ ಅಭಿವೃದ್ಧಿಗೆ ನಮ್ಮ ಕಾಲೇಜಿನ ಗ್ರಂಥಾಲಯದ ಸಿಬ್ಬಂದಿಯವರು ಬಹಳ ಕಾಳಜಿಯಿಂದ ಶ್ರಮಿಸುತ್ತಿದ್ದಾರೆ ಎಂದು ಹೇಳಿದರು.

ಡಾ ಶ್ರೀದೇವಿ ಸೋಮ ರವರು ಭಾರತದಲ್ಲಿ ಗ್ರಂಥಾಲಯಗಳ ಬೆಳವಣಿಗೆಗೆ ಮತ್ತು ಗ್ರಂಥಾಲಯ ಶಿಕ್ಷಣವನ್ನು ದೊರಕಿಸುವಲ್ಲಿ ಡಾ ಎಸ್ ಆರ್ ರಂಗನಾಥನ್ ರವರ ಪಾತ್ರ ಅವಿಸ್ಮರಣೀಯವೆಂದು ನುಡಿದರು.

ಡಾ. ಎಸ್. ಆರ್.ಪಾಟೀಲರು ಕಾಲೇಜು ಶಿಕ್ಷಣ ವ್ಯವಸ್ಥೆಯಲ್ಲಿ ಗ್ರಂಥಾಲಯಗಳು ಓದುಗರ ಜ್ಞಾನಾರ್ಜನೆಗೆ ಮಹತ್ತರ ಪಾತ್ರ ವಹಿಸಿ,ಓದುಗನಿಗೆ ಬೇಕಾದ ಮಾಹಿತಿಯನ್ನು ತೀವ್ರಗತಿಯಲ್ಲಿ ಒದಗಿಸಿದಾಗ ಓದುಗ ಗ್ರಂಥಾಲಯದ ಸೇವೆಯನ್ನು ಪಡೆಯಲು ಹೆಚ್ಚಿನ ನೆರವನ್ನು ನೀಡಿದಂತಾಗುತ್ತದೆ. ವರ್ಷದಿಂದ ವರ್ಷಕ್ಕೆ ನಾವು ಓದುಗರ ಅಭಿರುಚಿಗೆ ತಕ್ಕಂತೆ ಗ್ರಂಥಗಳನ್ನು ಅವುಗಳು ಪ್ರಕಟಿತ ಮಾಧ್ಯಮದಲ್ಲಿರಲಿ ಅಥವಾ ಡಿಜಿಟಲ್ ಮಾಧ್ಯಮದಲ್ಲಿರಲಿ ಅವುಗಳನ್ನು ಖರೀದಿಸಲು ಗ್ರಂಥಾಲಯಕ್ಕೆ ಎಲ್ಲಾ ತರಹದ ಸಹಕಾರ ನೀಡುವದಾಗಿ ತಮ್ಮ ಅಧ್ಯಕ್ಷೀಯ ನುಡಿಗಳಲ್ಲಿ ತಿಳಿಯಬಯಸಿದರು.

ಕಾರ್ಯಕ್ರಮದ ನಿರೂಪಣೆಯನ್ನು ಗ್ರಂಥ ಪಾಲಕರಾದ ಡಾ.ಸಾವಿತ್ರಿ ಪಟ್ಟಣ ರವರು ಹಾಗೂ ವಂದನಾರ್ಪಣೆಯನ್ನು ಗ್ರಂಥ ಪಾಲಕರಾದ ಡಾ.ಮಮತಾ ಮೇಳಕುಂದಿರವರು ನಡೆಸಿಕೊಟ್ಟರು ಕಾರ್ಯಕ್ರಮದಲ್ಲಿ ವಿವಿಧ ವಿಭಾಗದ ಮುಖ್ಯಸ್ಥರು ಅಧ್ಯಾಪಕರು ವಿದ್ಯಾರ್ಥಿಗಳು ಹಾಗೂ ಗ್ರಂಥಾಲಯ ಸಿಬ್ಬಂದಿ ಭಾಗವಹಿಸಿದ್ದರು.

Share post:

spot_imgspot_img

Popular

More like this
Related

ಕಲಬುರಗಿ| ವಿಕಲಚೇತನ ಫಲಾನುಭವಿಗಳಿಗೆ ವಿವಿಧ ಬಗೆಯ ಸುಮಾರು 62 ಲಕ್ಷ ರೂ. ಮೊತ್ತದ ಸಾಧನ ಸಲಕರಣೆಗಳ ವಿತರಣೆ

ಕಲಬುರಗಿ: ಹೌಸಿಂಗ್ ಆಂಡ್ ಅರ್ಬನ್ ಡೆವಲಪ್‍ಮೆಂಟ್ ಕಾರ್ಪೋರೇಶನ್ ಲಿಮಿಟೆಡ್ (HUDCO) ಸಂಸ್ಥೆಯ...

ಕಲಬುರಗಿ| ಲಾರಿ – ಬೈಕ್ ಢಿಕ್ಕಿ; ಬೈಕ್ ಸವಾರ ಮೃತ್ಯು; ಇನ್ನೋರ್ವ ಗಂಭೀರ ಗಾಯ

ಕಲಬುರಗಿ: ಲಾರಿ ಹಾಗೂ ಬೈಕ್ ಮಧ್ಯೆ ಸಂಭವಿಸಿದ ಭೀಕರ ಅಪಘಾತದಲ್ಲಿ ಬೈಕ್...

ಕಲಬುರಗಿ| ರಾಮನವಮಿ ಆಚರಣೆ; ಮದ್ಯ ಮಾರಾಟ ನಿಷೇಧಿಸಿ ಜಿಲ್ಲಾಧಿಕಾರಿ ಫೌಜಿಯಾ ತರನ್ನುಮ್ ಆದೇಶ

ಕಲಬುರಗಿ: ರಾಮ ನವಮಿ ಆಚರಣೆ ಹಿನ್ನೆಲೆಯಲ್ಲಿ ಕಲಬುರಗಿ ಜಿಲ್ಲಾಧಿಕಾರಿ ಹಾಗೂ ಜಿಲ್ಲಾದಂಡಾಧಿಕಾರಿಗಳಾದ...

ಕಲಬುರಗಿ| ಬೇಸಿಗೆಯ ಸವಾಲುಗಳ ಎದುರಿಸಲು ಸಿದ್ಧ: ಜಿಲ್ಲಾಧಿಕಾರಿ ಫೌಜಿಯಾ ತರನ್ನುಮ್

ಕಲಬುರಗಿ: ಕಲಬುರಗಿ ಜಿಲ್ಲಾಡಳಿತವು ಬೇಸಿಗೆಯ ಸವಾಲುಗಳನ್ನು ಎದುರಿಸಲು ಸಂಪೂರ್ಣ ಸನ್ನದ್ಧವಾಗಿದ್ದು, ಸಾರ್ವಜನಿಕರು...