ಕಲಬುರಗಿ| ಆಳಂದದಲ್ಲಿ ವೈಷ್ಣವಿ ಆನ್‌ಲೈನ್ ಸೆಂಟರ್‌ಗೆ ಬೆಂಕಿ: 3 ಲಕ್ಷ ಮೌಲ್ಯದ ಉಪಕರಣಗಳು ಭಸ್ಮ 

Date:

Share post:

ಕಲಬುರಗಿ: ಆನ್‌ಲೈನ್ ಸೆಂಟರ್‌ ವೊಂದಕ್ಕೆ ಬೆಂಕಿ ತಗುಲಿ ಅಂದಾಜು 3 ಲಕ್ಷ ರೂಪಾಯಿ ಮೌಲ್ಯದ ಉಪಕರಣಗಳು ಹಾನಿಗೊಳಗಾದ ಘಟನೆ ಆಳಂದ ಪಟ್ಟಣದ ಹೊರವಲಯದಲ್ಲಿರುವ ಮಿನಿವಿಧಾನಸೌಧ ಆವರಣದಲ್ಲಿ ನಡೆದಿದೆ.

ಅಂಬರೀಶ್ ದೇವನೂರ ಮಾಲೀಕತ್ವದ ವೈಷ್ಣವಿ ಆನ್‌ಲೈನ್ ಸೆಂಟರ್‌ ಗೆ ಬೆಂಕಿ ತಗುಲಿ ನಷ್ಟವಾಗಿರುವ ಅಂಗಡಿ ಎಂದು ತಿಳಿದುಬಂದಿದೆ. ಬೆಂಕಿ ತೀವ್ರಗೊಳ್ಳುತ್ತಿದ್ದಂತೆಯೇ ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ಸಿಬ್ಬಂದಿಗಳು ಬೆಂಕಿಯನ್ನು ನಂದಿಸಿದ್ದಾರೆ.

ಬೆಂಕಿಯಿoದ ಲ್ಯಾಮಿನೇಷನ್ ಮಷೀನ್, ಎರಡು ಕಂಪ್ಯೂಟರ್‌ಗಳು, ಜೆರಾಕ್ಸ್ ಮಷೀನ್, ಪ್ರಿಂಟರ್, ಜನರೇಟರ್ ಬ್ಯಾಟರಿ ಹಾಗೂ ಟೇಬಲ್‌ಗಳು ಸಂಪೂರ್ಣವಾಗಿ ಸುಟ್ಟು ಭಸ್ಮವಾಗಿವೆ. ಆನ್‌ಲೈನ್ ಸೆಂಟರ್‌ನ ಮಾಲೀಕ ಅಂಬರೀಶ್ ದೇವನೂರ ಅವರು ಈ ಕುರಿತು ಮಾಹಿತಿ ನೀಡಿದ್ದು, ಒಟ್ಟು 3 ಲಕ್ಷ ರೂಪಾಯಿಗಳಷ್ಟು ನಷ್ಟವಾಗಿದೆ ಎಂದು ತಿಳಿಸಿದ್ದಾರೆ.

Share post:

spot_imgspot_img

Popular

More like this
Related

ಕಲಬುರಗಿ| ಆದಿವಾಸಿ ತಾಂಡಾಗಳಲ್ಲಿ ಮೂಲಸೌಕರ್ಯ ಕೊರತೆ: ಲತಾ ಮೋಹನ್ ಪರಿಶೀಲನೆ

ಕಲಬುರಗಿ: ಜಿಲ್ಲೆಯ ವಿವಿಧ ಆದಿವಾಸಿ ತಾಂಡಾಗಳಿಗೆ ಭೇಟಿ ನೀಡಿದ ಕರ್ನಾಟಕ ರಾಜ್ಯ...

ಕಲಬುರಗಿಯಲ್ಲಿ ಜೋಯಾಲುಕ್ಕಾಸ್‌ನ ‘ಬ್ರಿಲಿಯನ್ಸ್ ಡೈಮಂಡ್ ಜ್ಯುವೆಲ್ಲರಿ ಶೋ’

ಕಲಬುರಗಿ: ಜಗತ್ತಿನ ಪ್ರಸಿದ್ಧ ಜ್ಯುವೆಲ್ಲರಿ ಬ್ರ್ಯಾಂಡ್ ಜೋಯಾಲುಕ್ಕಾಸ್, ಕಲಬುರಗಿ ನಗರದ ತನ್ನ...

ಕಲಬುರಗಿ| ಬಿ.ನಾಗೇಂದ್ರ ಅವರನ್ನು ಸಂಪುಟದಿಂದ ಕೈಬಿಡಿ: ರಾಜಕುಮಾರ್ ಪಾಟೀಲ್ ತೆಲ್ಕೂರ್

ಕಲಬುರಗಿ: ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ನಡೆದ ಬಹುಕೋಟಿ ರೂಪಾಯಿ ಹಗರಣಕ್ಕೆ...

Kalaburagi| ರಾಜ್ಯ ನೀತಿ ಮತ್ತು ಯೋಜನಾ ಆಯೋಗದ ಉಪಾಧ್ಯಕ್ಷ ಸ್ಥಾನಕ್ಕೆ ಬಿ.ಆರ್ ಪಾಟೀಲ್ ರಾಜೀನಾಮೆ 

ಕಲಬುರಗಿ: ಕರ್ನಾಟಕ ರಾಜ್ಯ ನೀತಿ ಮತ್ತು ಯೋಜನಾ ಆಯೋಗದ ಉಪಾಧ್ಯಕ್ಷ ಸ್ಥಾನಕ್ಕೆ...