ಕಲಬುರಗಿ| ಜುಲೈ ಮಾಸಾಂತ್ಯಕ್ಕೆ ಜಿಲ್ಲಾ ಕಸಾಪದಿಂದ ಯುವ ಸಾಹಿತ್ಯ ಸಮ್ಮೇಳನ: ವಿಜಯಕುಮಾರ ಪಾಟೀಲ ತೇಗಲತಿಪ್ಪಿ

Date:

Share post:

ಕಲಬುರಗಿ : ಯುವ ಬರಹಗಾರರಿಗೆ ಸ್ಫೂರ್ತಿ ನೀಡಿ, ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಜುಲೈ ಮಾಸಾಂತ್ಯಕ್ಕೆ ಒಂದು ದಿನದ ಕಲಬುರಗಿ ಜಿಲ್ಲಾ ಎರಡನೇ ಯುವ ಸಾಹಿತ್ಯ ಸಮ್ಮೇಳನ ಏರ್ಪಡಿಸಲು ನಿರ್ಧರಿಸಲಾಗಿದೆ ಎಂದು ಜಿಲ್ಲಾ ಕಸಾಪ ಅಧ್ಯಕ್ಷ ವಿಜಯಕುಮಾರ ಪಾಟೀಲ ತೇಗಲತಿಪ್ಪಿ ತಿಳಿಸಿದ್ದಾರೆ.

ಬಸವಾದಿ ಶರಣರು, ಸೂಫಿ – ಸಂತರ ನೆಲೆವೀಡಾದ ಕಲಬುರಗಿ ನೆಲದಲ್ಲಿ ನಡೆಸಲುದ್ದೇಶಿಸಿರುವ ಈ ಸಮ್ಮೇಳನ ಬಹು ದಿನಗಳ ಕನಸಾಗಿದೆ. ಈ ಭಾಗದಲ್ಲಿ ಅನೇಕ ಕಲಾವಿದರು, ಉದಯೋನ್ಮುಖ ಪ್ರತಿಭಾವಂತ ಬರಹಗಾರರಿದ್ದು, ಅವರಿಗೆ ಸೂಕ್ತ ವೇದಿಕೆಗಳು ಇಲ್ಲದಂತಾಗಿದೆ. ಅನೇಕ ಯುವ ಲೇಖಕರು ಎಲೆಮರೆ ಕಾಯಿಯಂತೆ ಸಾಹಿತ್ಯ ರಚನೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಮುಕ್ತ ಅವಕಾಶಗಳಿಲ್ಲದ ಪರಿಣಾಮ ಅವರ ಪ್ರತಿಭೆ ಅನಾವರಣಗೊಳ್ಳುತ್ತಿಲ್ಲವಾದ್ದರಿಂದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಹತ್ತು ಹಲವು ವಿಶಿಷ್ಟ ಮತ್ತು ವೈವಿಧ್ಯಮಯ ಸಾಹಿತ್ಯ ಸಮ್ಮೇಳನಗಳನ್ನು ಕೈಗೊಂಡು ಕನ್ನಡ ಸಾರಸ್ವತ ಲೋಕಕ್ಕೆ ತನ್ನದೇ ಆದ ಛಾಪು ಮೂಡಿಸಿದ್ದು, ಯುವ ಬರಹಗಾರರನ್ನು ಗುರುತಿಸಿ ಪ್ರೋತ್ಸಾಹಿಸಿದೆ ಎಂದು ಅವರು ವಿವರಿಸಿದ್ದಾರೆ.

ಎಲ್ಲರನ್ನು ಒಗ್ಗೂಡಿಸುವ ಶಕ್ತಿ ನಮ್ಮ ಸಾಹಿತ್ಯಕ್ಕಿದೆ. ಸಾಹಿತ್ಯ-ಸಂಸ್ಕೃತಿಯ ಮೂಲಕ ಸರ್ವರೂ ಒಟ್ಟಾಗಿ ಈ ಸಮಾಜವನ್ನು ಉತ್ತಮ ರೀತಿಯಲ್ಲಿ ಕಟ್ಟಿ ನಮ್ಮ ಭಾಷೆ ಬೆಳೆಸಬೇಕಾಗಿದೆ. ಆದ್ದರಿಂದ ವರ್ತಮಾನದ ಸಾಹಿತ್ಯ ಕುರಿತು ಚರ್ಚೆ, ಚಿಂತನೆ ಮಾಡುವ ಕಾರ್ಯ ಈ ಸಮ್ಮೇಳನ ಮಾಡಲಿದೆ ಎಂದು ತಿಳಿಸಿದರು.

 

ಸಮ್ಮೇಳನದ ಯಶಸ್ವಿಗೆ ಪೂರಕವಾಗಿ ಸ್ವಾಗತ ಸಮಿತಿಯ ರಚನೆ, ಸಮ್ಮೇಳನಾಧ್ಯಕ್ಷರ ಆಯ್ಕೆ ಶೀಘ್ರದಲ್ಲಿಯೇ ಮಾಡಲಾಗುವುದೆಂದು ಪ್ರಕಟಣೆಯಲ್ಲಿ ತಿಳಿಸಿದರು.

ಪೂರ್ವಭಾವಿ ಸಭೆಯಲ್ಲಿ ಜಿಲ್ಲಾ ಕಸಾಪ ದ ಗೌರವ ಕಾರ್ಯದರ್ಶಿಗಳಾದ ಶಿವರಾಜ ಅಂಡಗಿ, ಧರ್ಮಣ್ಣ ಎಚ್ ಧನ್ನಿ, ಕೋಶಾಧ್ಯಕ್ಷ ಶರಣರಾಜ ಛಪ್ಪರಬಂದಿ, ಪ್ರಮುಖರಾದ ಧರ್ಮರಾಜ ಜವಳಿ, ಕಲ್ಯಾಣಕುಮಾರ ಶೀಲವಂತ, ರಮೇಶ ಡಿ ಬಡಿಗೇರ, ರಾಜಶೇಖರ ಚೌದ್ರಿ, ಡಾ. ರೆಹಮಾನ್ ಪಟೇಲ್, ಜಗದೀಶ ಮರಪಳ್ಳಿ, ರವೀಂದ್ರಕುಮಾರ ಭಂಟನಳ್ಳಿ, ದಿನೇಶ ಮದಕರಿ, ರಾಜೇಂದ್ರ ಮಾಡಬೂಳ, ಶಿವಾನಂದ ಸುರವಸೆ, ಗಣೇಶ ಚಿನ್ನಾಕಾರ, ಬಾಬುರಾವ ಪಾಟೀಲ, ಶಕುಂತಲಾ ಪಾಟೀಲ, ಸಿದ್ಧಲಿಂಗ ಜಿ ಬಾಳಿ, ಸಂದೀಪ ಭರಣಿ, ಸುನೀಲ ಇಟಗಿ, ಶಿವಶರಣ ಬಡದಾಳ, ಎಂ ಎನ್ ಸುಗಂಧಿ, ರೇವನಸಿದ್ದಪ್ಪ ಜೀವನಗಿ, ಸೋಮಶೇಖರಯ್ಯಾ ಹೊಸಮಠ, ಸೈಯ್ಯದ್ ನಜೀರುದ್ದಿನ್ ಮುತ್ತವಲಿ, ಸೋಮಶೇಖರ ನಂದಿಧ್ವಜ, ಬಿ.ಎಂ. ಪಾಟೀಲ ಕಲ್ಲೂರ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

Share post:

spot_imgspot_img

Popular

More like this
Related

ಕಲಬುರಗಿ| ನುಡಿದಂತೆ ನಡೆಯುವ ಸರ್ಕಾರ‌ ನಮ್ಮದು, ಇದೂವರೆಗೆ 243 ಭರವಸೆ ಈಡೇರಿಸಿದ್ದೇವೆ: ಸಿದ್ದರಾಮಯ್ಯ

ಕಲಬುರಗಿ: ಚುನಾವಣೆ ಪೂರ್ವ ನೀಡಿದ ಭರವಸೆಯಂತೆ ರಾಜ್ಯದಲ್ಲಿ ಪಂಚ ಗ್ಯಾರಂಟಿ ಯೋಜನೆ...

ಕಲಬುರಗಿ| ಕಲ್ಯಾಣ ಕರ್ನಾಟಕ ಅಭಿವೃದ್ಧಿಗೆ ಸರ್ಕಾರ ಬದ್ಧ: ಡಿಸಿಎಂ ಡಿ.ಕೆ. ಶಿವಕುಮಾರ್

ಕಲಬುರಗಿ: "ನಮ್ಮ ಪಕ್ಷ ಚುನಾವಣೆಗೂ ಮುನ್ನ ಕೊಟ್ಟ ಮಾತಿನಂತೆ ಗ್ಯಾರಂಟಿ ಯೋಜನೆಗಳನ್ನ...

ಕಲಬುರಗಿ| ಸುಗಮ ಆಡಳಿತಕ್ಕಾಗಿ ಪ್ರಜಾಸೌಧಗಳ ನಿರ್ಮಾಣ: ಡಾ.ಅಜಯ್ ಧರ್ಮಸಿಂಗ್

ಕಲಬುರಗಿ: ಸುಗಮ ಆಡಳಿತಕ್ಕಾಗಿ ಹೊಸ ತಾಲ್ಲೂಕುಗಳನ್ನು ಘೋಷಣೆ ಮಾಡಲಾಗಿದೆ. ಈ ಭಾಗದ...

ಕಲಬುರಗಿ| ಕಲ್ಯಾಣ ಕರ್ನಾಟಕ ಭಾಗದಲ್ಲಿ ಶಿಕ್ಷಕರ ನೇಮಕಾತಿ ಮಾಡಿ: ಮಲ್ಲಿಕಾರ್ಜುನ ಖರ್ಗೆ  

ಕಲಬುರಗಿ: ಕಲ್ಯಾಣ ಕರ್ನಾಟಕ ಶೈಕ್ಷಣಿಕವಾಗಿ ಹಿಂದುಳಿಯಲು ಮುಖ್ಯ ಕಾರಣ ಈ ಭಾಗದಲ್ಲಿ...