ಕಲಬುರಗಿ| ರೈತರ ಸಮಸ್ಯೆಗಳಿಗೆ ಸ್ಪಂದಿಸುವಂತೆ ಶಾಸಕ ಬಸವರಾಜ ಮತ್ತಿಮಡು ಸೂಚನೆ

Date:

Share post:

ಕಲಬುರಗಿ: ಗ್ರಾಮೀಣ ಮತ ಕ್ಷೇತ್ರದ ವ್ಯಾಪ್ತಿಯಲ್ಲಿ ಸಾರ್ವಜನಿಕರಿಗೆ ಯಾವುದೇ ತೊಂದರೆಯಾಗದಂತೆ ಅಧಿಕಾರಿಗಳು ಶಿಕ್ಷಣ, ಕುಡಿಯುವ ನೀರು ನೈರ್ಮಲ್ಯ, ರೈತರಿಗೆ, ಮಕ್ಕಳಿಗೆ, ಮಹಿಳೆಯರಿಗೆ ಹಾಗೂ ರೈತರಿಗೆ ಯಾವುದೇ ರೀತಿಯ ಸಮಸ್ಯೆ ಆಗದಂತೆ ನೋಡಿಕೋಳ್ಳಬೇಕು ಎಂದು ಕಲಬುರಗಿ ಗ್ರಾಮೀಣ ಶಾಸಕ ಬಸವರಾಜ ಮತ್ತಿಮೂಡ್ ಹೇಳಿದರು.

ಕಮಲಾಪೂರ ಪಟ್ಟಣದ ಮೈರಾಡ ಅವರಣದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಕೆಡಿಪಿ ಸಭೆಯಲ್ಲಿ ನಾನಾ ಸಮಸ್ಯೆಗಳ ಕುರಿತು ಚರ್ಚಿಸಿ ಮಾತನಾಡಿದರು.

ಗ್ರಾಮೀಣ ಮತಕ್ಷೇತ್ರದಲ್ಲಿ ಆಳಂದ ತಾಲೂಕಿನ ಎರಡು ಜಿಪಂ ಕ್ಷೇತ್ರಗಳು ನನ್ನ ವ್ಯಾಪ್ತಿಗೆ ಬರುತ್ತವೆ, ಆ ಗ್ರಾಮಗಳ ಅನುದಾನ ನಮ್ಮ ಜನರಿಗೆ ಅಧಿಕಾರಿಗಳು ವಂಚನೆ ಮಾಡದೇ ರೈತರಿಗೆ ಬೀಜ ರಸಗೊಬ್ಬರ, ತೋಟಗಾರಿಕೆಯಲ್ಲಿ ಸರಕಾರದ ಸೌಲಭ್ಯ ಸಮಾನವಾಗಿ ಹಂಚಬೇಕು, ಇದರಲ್ಲಿ ಯಾವುದೇ ತಾರತಮ್ಯ ಮಾಡಬಾದರು ಎಂದರು.

ಕಮಲಾಪುರ‌ ಎಡಿ ಅರುಣಕುಮಾರ ಮೂಲಿಮನಿ ಮಾತನಾಡಿ, ಗ್ರಾಮೀಣ ಕ್ಷೇತ್ರದಲ್ಲಿ ಮೇ ತಿಂಗಳಲ್ಲಿ ನಿರೀಕ್ಷೆ ಮೀರಿ ಮಳೆಯಾಗಿದೆ, ಜೂನ್ ತಿಂಗಳಲ್ಲಿ ಸ್ವಲ್ಪ ಕಡಿಮೆಯಾಗಿದೆ. ಇನ್ನು ಹೆಚ್ಚು ಮಳೆಯಾಗಬೇಕು. ಈ ಭಾಗದಲ್ಲಿ ರೈತರು ಮುಂಗಾರು ಶೇ.64ರಷ್ಟು ಬಿತ್ತನೆ ಮಾಡಿದ್ದಾರೆ. ಮಳೆ ಕಡಿಮೆಯಾಗಿದ್ದ ಕೆಲ ಹೊಬಳಿಯಲ್ಲಿ ಇನ್ನು ಬಿತ್ತನೆಯಾಗಬೇಕು. ಎಲ್ಲಾ ಬೀಜಗಳು ಸಾಕಷ್ಟಿವೆ. ಸೋಯಾಬಿನ್ ಕೊರತೆಯಾಗಿತ್ತು. ಮುಂದೆ ಯಾವುದೇ ಸಮಸ್ಯೆ ಆಗದಂತೆ ನೋಡಿಕೊಳ್ಳಲಾಗುತ್ತದೆ ಎಂದರು.

ಈ ಸಂದರ್ಭದಲ್ಲಿ ಕಮಲಾಪುರ ತಾ.ಪಂ ಇಒ ನೀಲಗಂಗಾ ಬಬಲಾದ,ಕಲಬುರಗಿ ತಾಪಂ ಇಒ ಸೈಯದ ಮಹ್ಮದ ಪಟೇಲ, ತಹಶೀಲ್ದಾರ್ ಮಹಮ್ಮದ ಮೊಸಿನ್, ಆಳಂದ ಇಒ ಮಾನಪ್ಪ ಕಟ್ಟಿಮನಿ, ಆಳಂದ ಅಣ್ಣಾರಾವ ಪಾಟೀಲ್, ಶಹಬಾರ ತಹಸೀಲ್ದಾರ್ ಜಗದೀಶ ಎಸ್. ಚೌರ್, ಶಹಾಬಾದ ಇಒ ಮಲ್ಲಿನಾಥ ರಾವೂರ ಸೇರಿ ಇತರರು ಇದ್ದರು.

Share post:

spot_imgspot_img

Popular

More like this
Related

ಕಲಬುರಗಿ| ನುಡಿದಂತೆ ನಡೆಯುವ ಸರ್ಕಾರ‌ ನಮ್ಮದು, ಇದೂವರೆಗೆ 243 ಭರವಸೆ ಈಡೇರಿಸಿದ್ದೇವೆ: ಸಿದ್ದರಾಮಯ್ಯ

ಕಲಬುರಗಿ: ಚುನಾವಣೆ ಪೂರ್ವ ನೀಡಿದ ಭರವಸೆಯಂತೆ ರಾಜ್ಯದಲ್ಲಿ ಪಂಚ ಗ್ಯಾರಂಟಿ ಯೋಜನೆ...

ಕಲಬುರಗಿ| ಕಲ್ಯಾಣ ಕರ್ನಾಟಕ ಅಭಿವೃದ್ಧಿಗೆ ಸರ್ಕಾರ ಬದ್ಧ: ಡಿಸಿಎಂ ಡಿ.ಕೆ. ಶಿವಕುಮಾರ್

ಕಲಬುರಗಿ: "ನಮ್ಮ ಪಕ್ಷ ಚುನಾವಣೆಗೂ ಮುನ್ನ ಕೊಟ್ಟ ಮಾತಿನಂತೆ ಗ್ಯಾರಂಟಿ ಯೋಜನೆಗಳನ್ನ...

ಕಲಬುರಗಿ| ಸುಗಮ ಆಡಳಿತಕ್ಕಾಗಿ ಪ್ರಜಾಸೌಧಗಳ ನಿರ್ಮಾಣ: ಡಾ.ಅಜಯ್ ಧರ್ಮಸಿಂಗ್

ಕಲಬುರಗಿ: ಸುಗಮ ಆಡಳಿತಕ್ಕಾಗಿ ಹೊಸ ತಾಲ್ಲೂಕುಗಳನ್ನು ಘೋಷಣೆ ಮಾಡಲಾಗಿದೆ. ಈ ಭಾಗದ...

ಕಲಬುರಗಿ| ಕಲ್ಯಾಣ ಕರ್ನಾಟಕ ಭಾಗದಲ್ಲಿ ಶಿಕ್ಷಕರ ನೇಮಕಾತಿ ಮಾಡಿ: ಮಲ್ಲಿಕಾರ್ಜುನ ಖರ್ಗೆ  

ಕಲಬುರಗಿ: ಕಲ್ಯಾಣ ಕರ್ನಾಟಕ ಶೈಕ್ಷಣಿಕವಾಗಿ ಹಿಂದುಳಿಯಲು ಮುಖ್ಯ ಕಾರಣ ಈ ಭಾಗದಲ್ಲಿ...