ಕಲಬುರಗಿ: ಕಲಬುರಗಿ ಜೆಸ್ಕಾಂ ಕಾರ್ಯ ಮತ್ತು ಪಾಲನೆ ನಗರ ವಿಭಾಗದಲ್ಲಿ ಬರುವ 11ಕೆ.ವಿ. ತೇಂಗಳಿ ಲೇಔಟ್ ಹಾಗೂ ಲಾಲ್ಗಿರಿ ಫೀಡರ್ಗಳ ವ್ಯಾಪ್ತಿಯಲ್ಲಿನ ನಿರ್ವಹಣಾ ಕಾರ್ಯಕೈಗೊಳ್ಳುವ ಪ್ರಯುಕ್ತ ಜೂನ್ 22ರಂದು ರವಿವಾರ ಬೆಳಿಗ್ಗೆ 10 ರಿಂದ ಸಂಜೆ 4 ಗಂಟೆಯವರೆಗೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಲಿದೆ. ಸಾರ್ವಜನಿಕರು ಜೆಸ್ಕಾಂನೊಂದಿಗೆ ಸಹಕರಿಸುವಂತೆ ವಿಭಾಗದ ಕಾರ್ಯನಿರ್ವಾಹಕ ಇಂಜಿನಿಯರರು(ವಿ) ಪ್ರಕಟಣೆಯಲ್ಲಿ ಕೋರಿದ್ದಾರೆ.
ತೆಂಗಳಿ ಲೇಔಟ್ ಫೀಡರ್: ಟಿ.ವಿ. ಸ್ಟೇಷನ್ ಎದುರುಗಡೆ ಪ್ರದೇಶ, ತೆಂಗಳಿ ಲೇಔಟ್, ಗೋಳಾ ಲೇಔಟ್, ಫೋರ್ಡ್ ಶೋರೂಂ ಗೋಪಾಲ ಸಾ ಮಿಲ್, ಬಗ್ದಾದ್ ಕಾಲೋನಿ, ಪಾಲ್ ಆಟೋಮೊಬೈಲ್ಸ್ ಹುಮನಾಬಾದ ಮೇನ್ ರಿಂಗ್ ರಸ್ತೆ, ಎಸ್.ಸಿ ಓಣಿ ಹಾಗೂ ಸುತ್ತಮುತ್ತಲಿನ ಪ್ರದೇಶಗಳು.
ಲಾಲ್ ಗೀರಿ: ಲಾಲ್ಗೀರಿ ಕ್ರಾಸ್, ಮಹಾಲಕ್ಷ್ಮೀ ಲೇಔಟ್ ಬಾಳೆ ಲೇಔಟ್ ಹಾಗೂ ಸುತ್ತಮುತ್ತಲಿನ ಪ್ರದೇಶಗಳು.


