ಕಲಬುರಗಿ| ಬೆಂಗಳೂರು-ಬೀದರ ನಡುವೆ ಹತ್ತು ಟ್ರಿಪ್‍ಗಳಲ್ಲಿ ವಿಶೇಷ ರೈಲು ಸಂಚಾರ

Date:

Share post:

ಕಲಬುರಗಿ: ಎಸ್‍ಎಮ್‍ವಿಟಿ (SMVT) ಬೆಂಗಳೂರು ಮತ್ತು ಬೀದರ್ ನಡುವೆ ವಿಶೇಷ ರೈಲು (ರೈಲು ಸಂಖ್ಯೆ 06539/06540) ಕೆಳಕಂಡ ದಿನಾಂಕಗಳಂದು 10 ಟ್ರಿಪ್‍ಗಳಲ್ಲಿ ಸಂಚರಿಸುತ್ತಿದ್ದು, ಈ ವಿಶೇಷ ರೈಲು ಕೇಂದ್ರ ರೈಲ್ವೆ ಸೋಲಾಪುರ ವಿಭಾಗದ ಕಲಬುರಗಿ, ಶಹಾಬಾದ್ ಹಾಗೂ ವಾಡಿ ರೈಲು ನಿಲ್ದಾಣಗಳಲ್ಲಿ ನಿಲ್ಲಲಿದೆ ಎಂದು ಕೇಂದ್ರ ರೈಲ್ವೆ ಸೋಲಾಪುರ ವಿಭಾಗದ ಸಾರ್ವಜನಿಕ ಸಂಪರ್ಕ ಇಲಾಖೆಯ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಎಸ್‍ಎಮ್‍ವಿಟಿ (SMVT) ಬೆಂಗಳೂರು-ಬೀದರ್ ವಿಶೇಷ ರೈಲುಗಳು (ರೈಲು ಸಂಖ್ಯೆ 06539) (5 ಟ್ರಿಪ್) ಪ್ರತಿ ಶುಕ್ರವಾರ ಮತ್ತು ಭಾನುವಾರ ಇದೇ ಜೂನ್ 15 ರಿಂದ 29 ರವರೆಗೆ ಎಸ್‍ಎಮ್‍ವಿಟಿ (SMVT) ಬೆಂಗಳೂರಿನಿಂದ ರಾತ್ರಿ 21:15 ಕ್ಕೆ ಹೊರಟು ಮರುದಿನ ಬೆಳಿಗ್ಗೆ 10:15 ಕ್ಕೆ ಬೀದರಕ್ಕೆ ತಲುಪಲಿದೆ.

ವಿಶೇಷ ರೈಲು ಸಂಖ್ಯೆ 06540 (5 ಟ್ರಿಪ್) ಪ್ರತಿ ಶನಿವಾರ ಮತ್ತು ಸೋಮವಾರ ಇದೇ ಜೂನ್ 16 ರಿಂದ 30 ರವರೆಗೆ ಬೀದರ್‍ನಿಂದ ಮಧ್ಯಾಹ್ನ 1 ಗಂಟೆಗೆ ಹೊರಟು ಮರುದಿನ ಬೆಳಿಗ್ಗೆ 4 ಗಂಟೆಗೆ ಎಸ್‍ಎಮ್‍ವಿಟಿ (SMVT) ಬೆಂಗಳೂರಿಗೆ ತಲುಪಲಿದೆ. ಈ ರೈಲು ಹುಮನಾಬಾದ್, ಕಲಬುರಗಿ, ಶಹಾಬಾದ್, ವಾಡಿ, ಯಾದಗಿರಿ, ಕೃಷ್ಣ, ರಾಯಚೂರು, ಮಂಥ್ರಾಲಯಂ ರಸ್ತೆ, ಅದೋನಿ, ಗುಂಟಕಲ್, ಅನಂತಪುರ, ಧರ್ಮಾವರಂ, ಹಿಂದೂಪುರ ಮತ್ತು ಯಲಹಂಕದಲ್ಲಿ ನಿಲ್ಲಲಿದೆ.

ಪ್ರಯಾಣಿಕರು ಟಿಕೆಟ್ ಪಡೆದು ಪ್ರಯಾಣಿಸಬೇಕು. ಟಿಕೇಟ್‍ಗಾಗಿ ಕಾಯ್ದಿರಿಸಲು ಎಲ್ಲಾ ಗಣಕೀಕೃತ ಕೇಂದ್ರ ಮತ್ತು www.irctc.co.inವೆಬ್‍ಸೈಟ್‍ನ್ನು ಸಂಪರ್ಕಿಸಬೇಕು. ರೈಲಿನ ಸಮಯ ಮತ್ತು ನಿಲುಗಡೆ ಮತ್ತಿತರ ಹೆಚ್ಚಿನ ಮಾಹಿತಿಗಾಗಿ www.enquiry.indianrail.gov.in ಗೆ ಭೇಟಿ ನೀಡಿ ಅಥವಾ ಎನ್.ಟಿ.ಇ.ಎಸ್.(NTES) ಅಪ್ಲಿಕೇಶನ್ ಡೌನ್‍ಲೋಡ್ ಮಾಡಿ ಪಡೆಯಬಹುದಾಗಿದೆ.

Share post:

spot_imgspot_img

Popular

More like this
Related

ಕಲಬುರಗಿ| ಶಿಕ್ಷಣದ ಜ್ಯೋತಿ ಹೊತ್ತಿಸಿದ ಮಹಾದೇವಪ್ಪ ರಾಂಪುರೆ: ಡಾ.ಮಹೇಶ ಗಂವ್ಹಾರ

ಕಲಬುರಗಿ: ಅಂದಿನ ಹೈದ್ರಾಬಾದ್ ಕರ್ನಾಟಕದಲ್ಲಿ ಶಿಕ್ಷಣದ ಜ್ಯೋತಿ ಹೊತ್ತಿಸಿದ ಪುಣ್ಯಾತ್ಮ ಮಹಾದೇವಪ್ಪ...

ಕಲಬುರಗಿ| ಸರಕಾರಿ ನೌಕರರ ಭವನಕ್ಕೆ ಜಿಲ್ಲಾಧಿಕಾರಿ ಭೇಟಿ, ಪರಿಶೀಲನೆ

ಕಲಬುರಗಿ: ನಗರದಲ್ಲಿರುವ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಭವನಕ್ಕೆ ಜಿಲ್ಲಾಧಿಕಾರಿ ಫೌಜಿಯಾ...

ಕಲಬುರಗಿ| ಜಿಲ್ಲಾಧಿಕಾರಿಗಳಿಂದ ಸಿಟಿ ರೌಂಡ್: ರಸ್ತೆ ದುರಸ್ತಿ,‌ ಗುಂಡಿ ಮುಚ್ಚುವ ಕಾರ್ಯ ಪರಿಶೀಲನೆ

ಕಲಬುರಗಿ: ಜಿಲ್ಲಾಧಿಕಾರಿ ಬಿ.ಫೌಜಿಯಾ ತರನ್ನುಮ್ ಮತ್ತು ಮಹಾನಗರ ಪಾಲಿಕೆ ಆಯುಕ್ತ ಅವಿನಾಶ...

ಕಲಬುರಗಿ| ಬಾಲ್ಯ ವಿವಾಹ, ಫೋಕ್ಸೋ ಪ್ರಕರಣಗಳ ಬಗ್ಗೆ ನಿಗಾವಹಿಸಿ: ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಬಿ.ಫೌಜಿಯಾ ಸೂಚನೆ

ಕಲಬುರಗಿ: ಬಾಲ್ಯವಿವಾಹ ಮತ್ತು ಫೋಕ್ಸೋ ಪ್ರಕರಣಗಳು ಕಂಡು ಬಂದಲ್ಲಿ ಸಂಬಂಧಿಸಿದ ಅಧಿಕಾರಿಗಳು...