ಕಲಬುರಗಿ| ವರ್ತಮಾನದ ವಿಷಯಗಳೇ ಕಥಾ ವಸ್ತುವಾಗಬೇಕು: ಡಾ. ಲೋಕಾಪೂರ

Date:

Share post:

ಕಲಬುರಗಿ : ಕನ್ನಡ ಕಥಾ ರಚನೆಯಲ್ಲಿ ತೊಡಗಿರುವ ಕಥೆಗಾರರು ವರ್ತಮಾನದ ನೈಜ ಸಂಗತಿಗಳನ್ನು, ವಾಸ್ತವಿಕ ಅಂಶಗಳನ್ನು ವಸ್ತುವಿಷಯಗಳನ್ನಾಗಿ ಮಾಡಿ ಕಥೆ ರಚಿಸಬೇಕು ಎಂದು ಕಾದಂಬರಿಕಾರ ಡಾ. ಬಾಳಾಸಾಹೇಬ ಲೋಕಾಪೂರ ಹೇಳಿದರು.

ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ವಿಶ್ವ ಪ್ರಕಾಶನದ ಸಹಯೋಗದೊಂದಿಗೆ ನಗರದ ಕನ್ನಡ ಭವನದ ಸುವರ್ಣ ಸಭಾ ಭವನದಲ್ಲಿ ಶನಿವಾರ ಆಯೋಜಿಸಿದ ಸಮಾರಂಭದಲ್ಲಿ ಹಿರಿಯ ಸಾಹಿತಿ ಪ್ರೊ. ಕೃಷ್ಣಾ ನಾಯಕ ಅವರ ಸಮಗ್ರ ಕಥಾ ಸಂಕಲನ ಕ್ರೌಂಚ ಪ್ರಲಾಪ ಕೃತಿಯನ್ನು ಜನಾರ್ಪಣೆ ಮಾಡಿ ಮಾತನಾಡಿದ ಅವರು, ಪ್ರೊ. ಕೃಷ್ಣ ನಾಯಕ ಅವರು ವರ್ತಮಾನದ ವಿಷಯಗಳ ಕುರಿತು ಅತ್ಯತ್ತಮ ಕಥೆಗಳನ್ನು ರಚಿಸಿದ ನಮ್ಮ ನಡುವಿನ ಅಪರೂಪದ ಕಥೆಗಾರರಾಗಿದ್ದಾರೆ. ಕ್ರೌಂಚ ಪಕ್ಷಿ ಪ್ರೀತಿ, ಪ್ರೇಮ ಮತ್ತು ಕೂಡುವಿಕೆಗೆಒಂದು ಸಂಕೇತವಾಗಿದ್ದು, ಸಮಾಜದಲ್ಲಿ ಬಾಳುವ ನಾವುಗಳು ಕೂಡಿ ಬದುಕುವ ಕಲೆ ತಿಳಿಯಬೇಕು. ಬಹುಮುಖ್ಯವಾಗಿ ಕಥೆಗಾರರು ಬಂಜಾರ ಸಮುದಾಯದ ಆಚರಣೆ, ನಂಬಿಕೆ, ಬದುಕಿನ ಮೂಢನಂಬಿಕೆಗಳ ಕುರಿತು ವಸ್ತು ವಿನ್ಯಾಸ ಮಾಡಿಕೊಂಡು ತುಂಬಾ ಕಲಾತ್ಮಕವಾಗಿ ಉತ್ತಮ ಕಥೆಗಳನ್ನು ರಚಿಸಿದ್ದಾರೆ ಎಂದು ಮಾರ್ಮಿಕವಾಗಿ ಹೇಳಿದರು.

ಕೃತಿ ಲೇಖಕ ಪ್ರೊ. ಕೃಷ್ಣ ನಾಯಕ ಮಾತನಾಡಿ, ಕ್ರೌಂಚ ಪ್ರಲಾಪ ಈ ಕೃತಿ ನನ್ನ ಒಟ್ಟು ಐದು ಕಥಾ ಸಂಕಲನಗಳನ್ನು ಒಳಗೊಂಡ ಕೃತಿ ಆಗಿದೆ. ಇದರಲ್ಲಿ ಸರಿ ಸುಮಾರು ೩೯ ಕಥೆಗಳಿದ್ದು, ಬಹುಪಾಲು ಕಥೆಗಳು ನಮ್ಮ ಸಮುದಾಯದ ಸಂಸ್ಕೃತಿ, ಪರಂಪರೆ, ಆಚರಣೆ, ಮಾನವೀಯ ಸಂಬAಧಗಳ ವೈಶಿಷ್ಟö್ಯತೆ ಮೇಲೆ ಬೆಳಕು ಚೆಲ್ಲುತ್ತಾ, ಸಮಾಜದ ಅನೇಕ ಘಟನೆಗಳು, ಸಂಗತಿಗಳು ಕಥೆಗೆ ವಸ್ತುಗಳಾಗಿವೆ. ಅಷ್ಟೇ ಅಲ್ಲದೆ ನಮ್ಮ ಬಂಜಾರ ಸಮುದಾಯದ ಜನತೆಯಲ್ಲಿ ಮನೆ ಮಾಡಿರುವ ಮೂಢನಂಬಿಕೆ, ಅಂಧಾನುಚರಣೆಗೆ ಸಂಬAಧಿಸಿದ ಸಂಗತಿಗಳನ್ನು ವಿಡಂಬನಾತ್ಮಕವಾಗಿ, ವ್ಯಂಗ್ಯವಾಗಿ ಕಥೆಗಳಲ್ಲಿ ಚಿತ್ರಿಸಿದ್ದೇನೆ. ನನ್ನ ಮೂಲ ಉದ್ದೇಶ ಜನತೆಯಲ್ಲಿ ತಾವು ಆಚರಿಸುವ ಆಚರಣೆಗಳು ಅರ್ಥಪೂರ್ಣವಾಗಿರಬೇಕು ಎಂದು ಹೇಳಿದರು.

ವಿಜಯಪುರ ಅಕ್ಕಮಹಾದೇವಿ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಡಾ. ನಾರಾಯಣ ಬಿ ಪವಾರ ಕೃತಿ ಪರಿಚಯಿಸಿದರು. ಹಿರಿಯ ಸಾಹಿತಿ ಡಾ. ನಾಗಾಬಾಯಿ ಬುಳ್ಳಾ, ವಿಶ್ವ ಪ್ರಕಾಶನದ ಉಷಾ ನಾಯಕ, ಜಿಲ್ಲಾ ಕಸಾಪ ದ ಕಾರ್ಯದರ್ಶಿ ಶಿವರಾಜ ಅಂಡಗಿ, ಸಾಹಿತಿ ಸಿ.ಎಸ್. ಆನಂದ, ಡಾ. ಆನಂದ ನಾಯಕ, ಸಂಜುಕುಮಾರ ಚವ್ಹಾಣ, ರಾಜೇಂದ್ರ ಮಾಡಬೂಳ, ಧರ್ಮರಾಜ ಜವಳಿ ವೇದಿಕೆ ಮೇಲಿದ್ದರು.

ಜಿಲ್ಲಾ ಕಸಾಪ ಅಧ್ಯಕ್ಷ ವಿಜಯಕುಮಾರ ಪಾಟೀಲ ತೇಗಲತಿಪ್ಪಿ ಅಧ್ಯಕ್ಷತೆ ವಹಿಸಿದ್ದರು. ಅನೇಕ ಸಾಹಿತಿಗಳು, ಆಸಕ್ತರು ಉಪಸ್ಥಿತರಿದ್ದರು.

Share post:

spot_imgspot_img

Popular

More like this
Related

ಕಲಬುರಗಿ| ನುಡಿದಂತೆ ನಡೆಯುವ ಸರ್ಕಾರ‌ ನಮ್ಮದು, ಇದೂವರೆಗೆ 243 ಭರವಸೆ ಈಡೇರಿಸಿದ್ದೇವೆ: ಸಿದ್ದರಾಮಯ್ಯ

ಕಲಬುರಗಿ: ಚುನಾವಣೆ ಪೂರ್ವ ನೀಡಿದ ಭರವಸೆಯಂತೆ ರಾಜ್ಯದಲ್ಲಿ ಪಂಚ ಗ್ಯಾರಂಟಿ ಯೋಜನೆ...

ಕಲಬುರಗಿ| ಕಲ್ಯಾಣ ಕರ್ನಾಟಕ ಅಭಿವೃದ್ಧಿಗೆ ಸರ್ಕಾರ ಬದ್ಧ: ಡಿಸಿಎಂ ಡಿ.ಕೆ. ಶಿವಕುಮಾರ್

ಕಲಬುರಗಿ: "ನಮ್ಮ ಪಕ್ಷ ಚುನಾವಣೆಗೂ ಮುನ್ನ ಕೊಟ್ಟ ಮಾತಿನಂತೆ ಗ್ಯಾರಂಟಿ ಯೋಜನೆಗಳನ್ನ...

ಕಲಬುರಗಿ| ಸುಗಮ ಆಡಳಿತಕ್ಕಾಗಿ ಪ್ರಜಾಸೌಧಗಳ ನಿರ್ಮಾಣ: ಡಾ.ಅಜಯ್ ಧರ್ಮಸಿಂಗ್

ಕಲಬುರಗಿ: ಸುಗಮ ಆಡಳಿತಕ್ಕಾಗಿ ಹೊಸ ತಾಲ್ಲೂಕುಗಳನ್ನು ಘೋಷಣೆ ಮಾಡಲಾಗಿದೆ. ಈ ಭಾಗದ...

ಕಲಬುರಗಿ| ಕಲ್ಯಾಣ ಕರ್ನಾಟಕ ಭಾಗದಲ್ಲಿ ಶಿಕ್ಷಕರ ನೇಮಕಾತಿ ಮಾಡಿ: ಮಲ್ಲಿಕಾರ್ಜುನ ಖರ್ಗೆ  

ಕಲಬುರಗಿ: ಕಲ್ಯಾಣ ಕರ್ನಾಟಕ ಶೈಕ್ಷಣಿಕವಾಗಿ ಹಿಂದುಳಿಯಲು ಮುಖ್ಯ ಕಾರಣ ಈ ಭಾಗದಲ್ಲಿ...