ಕಲಬುರಗಿ| ಅನ್ನಸಂತರ್ಪಣೆ, ನೋಟ್ ಬುಕ್ ವಿತರಣೆ ಮೂಲಕ ಹೋರಾಟಗಾರ ದಿ.ಮಾರುತಿ ಮಾನಪಡೆಯವರ 70ನೇ ಹುಟ್ಟು ಹಬ್ಬ ಆಚರಣೆ

Date:

Share post:

ಕಲಬುರಗಿ: ಹೋರಾಟ ರತ್ನ, ರೈತ, ಕಾರ್ಮಿಕರ ಹೋರಾಟಗಾರ ದಿ. ಮಾರುತಿ ಮಾನಪಡೆ ಅವರ 70 ನೆಯ ಜನ್ಮ ದಿನದ ಅಂಗವಾಗಿ ಜಿಲ್ಲೆಯಲ್ಲಿ ವಿವಿಧೆಡೆ ಹಲವು ಕಾರ್ಯಕ್ರಮಗಳನ್ನು ಮಾರುತಿ ಮಾನಪಡೆ ಹಿತೈಷಿಗಳು, ಅಭಿಮಾನಿಗಳ ಬಳಗ, ನೀರು ಸರಬರಾಜು ಹೊರಗುತ್ತಿಗೆ ನೌಕರರ ಸಂಘ, ಕರ್ನಾಟಕ ರಾಜ್ಯ ಗ್ರಾಮ ಪಂಚಾಯತ ನೌಕರರ ಸಂಘಟನೆಗಳ ನೇತೃತ್ವದಲ್ಲಿ ನಗರದಲ್ಲಿ ವಿವಿಧೆಡೆ ವಿಭಿನ್ನ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು.

ಅಂಬಲಗಾ ಗ್ರಾಮದ ಅವರ ಸಮಾಧಿ ಸ್ಥಳದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಕಮಲಾಪುರ ಕಸಾಪ ಅಧ್ಯಕ್ಷ ಸುರೇಶ ಲೇಂಗಟಿ, ಭೀಮಶಾ ದಂಡಗುಲಕರ್, ಬಸವರಾಜ ಸರಡಗಿ, ಸೋಮಶೇಖರ್ ಸಿಂಗೆ ಬಂಡಯ್ಯ ಸ್ವಾಮಿ ಇತರರು ಭಾಗವಹಿಸಿದ್ದರು.

ನಗರದ ಸರ್ಕಾರಿ ಆಸ್ಪತ್ರೆಯ ಆವರಣದಲ್ಲಿ ಅನ್ನ ಸಂತರ್ಪಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

ಮುಖ್ಯ ಅತಿಥಿಗಳಾಗಿ ಜಾಗತಿಕ ಲಿಂಗಾಯತ ಮಹಾ ಸಭಾ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಆರ್. ಜಿ ಶಟಗಾರ, ಜಿಲ್ಲಾ ರೈತ ಕಾರ್ಮಿಕ ಸಂಘದ ಮುಖಂಡ

ಚಂದು ಜಾಧವ, ನಾರಾಯಣ ರಂಗದಾಳ, ನಾಗರಾಜ ಗೋಗಿ, ಅನಿಲ ಮಂಗಾ, ಥಾವರು ರಾಠೋಡ , ಸಮೀರ್ ಪಾಷಾ ಇತರರು ಇದ್ದರು.

ಘಾಟಗೆ ಲೇ ಔಟ್ ಶಿವಾಜಿ ಪಾರ್ಕ್ ಬಳಿಯಿರುವ ವೃದ್ಧಾಶ್ರಮದಲ್ಲಿ ಅನ್ನ ಸಂತರ್ಪಣೆ ಕಾರ್ಯಕ್ರಮ ನಡೆಯಿತು. ಮುಖ್ಯ ಅತಿಥಿಗಳಾಗಿ ರೈತ ಕಾರ್ಮಿಕ ಸಂಘದ ಗೌರವ ಅಧ್ಯಕ್ಷ ಶಾಂತಪ್ಪ ಪಾಟೀಲ, ರಾಘವೇಂದ್ರ ಅವರಾದಕರ್, ಪ್ರಕಾಶ ಬಬಲಾದಕರ್ ಇದ್ದರು.

ನೃಪತುಂಗ ಕಾಲೋನಿ ಬಳಿಯಿರುವ ಬುಡ್ಗ ಜಂಗಮ ಕಾಲೋನಿಯಲ್ಲಿ ಸುಮಾರು 400 ಮಕ್ಕಳಿಗೆ ನೋಟ್ ಬುಕ್ ಹಾಗೂ ಪೆನ್ ವಿತರಿಸಲಾಯಿತು.

ಮುಖ್ಯ ಅತಿಥಿಗಳಾಗಿ ಸಾಹಿತಿ, ಪತ್ರಕರ್ತ ಡಾ.‌ ಶಿವರಂಜನ್ ಸತ್ಯಂಪೇಟೆ, ಮಕ್ಕಳ ಹಕ್ಕುಗಳ ಹೋರಾಟಗಾರ ವಿಠ್ಠಲ ಚಿಕಣಿ, ಪತ್ರಕರ್ತ ಚಂದ್ರಶೇಖರ ಕವಲಗಾ, ಸುಂದರ ರಾಷ್ಟ್ರ ಪ್ರತಿಷ್ಠಾನದ ಸಂಜುಕುಮಾರ್ ಕಾಂಬಳೆ, ದಲಿತ ಸೇನೆ ಕರ್ನಾಟಕ ಸಂಘಟನೆಯ ದತ್ತಾತ್ರೇಯ ಕುಡಕಿ, ಸಾಮಾಜಿಕ ಕಾರ್ಯಕರ್ತ ಮೈಲಾರಿ ದೊಡ್ಡಮನಿ, ಮಹೇಶ ಚೌಕಿಮಠ, ಪುಂಡಲೀಕ ಮೋಸಲಗಿ ಇತರರಿದ್ದರು.

Share post:

spot_imgspot_img

Popular

More like this
Related

ಕಲಬುರಗಿ| ನುಡಿದಂತೆ ನಡೆಯುವ ಸರ್ಕಾರ‌ ನಮ್ಮದು, ಇದೂವರೆಗೆ 243 ಭರವಸೆ ಈಡೇರಿಸಿದ್ದೇವೆ: ಸಿದ್ದರಾಮಯ್ಯ

ಕಲಬುರಗಿ: ಚುನಾವಣೆ ಪೂರ್ವ ನೀಡಿದ ಭರವಸೆಯಂತೆ ರಾಜ್ಯದಲ್ಲಿ ಪಂಚ ಗ್ಯಾರಂಟಿ ಯೋಜನೆ...

ಕಲಬುರಗಿ| ಕಲ್ಯಾಣ ಕರ್ನಾಟಕ ಅಭಿವೃದ್ಧಿಗೆ ಸರ್ಕಾರ ಬದ್ಧ: ಡಿಸಿಎಂ ಡಿ.ಕೆ. ಶಿವಕುಮಾರ್

ಕಲಬುರಗಿ: "ನಮ್ಮ ಪಕ್ಷ ಚುನಾವಣೆಗೂ ಮುನ್ನ ಕೊಟ್ಟ ಮಾತಿನಂತೆ ಗ್ಯಾರಂಟಿ ಯೋಜನೆಗಳನ್ನ...

ಕಲಬುರಗಿ| ಸುಗಮ ಆಡಳಿತಕ್ಕಾಗಿ ಪ್ರಜಾಸೌಧಗಳ ನಿರ್ಮಾಣ: ಡಾ.ಅಜಯ್ ಧರ್ಮಸಿಂಗ್

ಕಲಬುರಗಿ: ಸುಗಮ ಆಡಳಿತಕ್ಕಾಗಿ ಹೊಸ ತಾಲ್ಲೂಕುಗಳನ್ನು ಘೋಷಣೆ ಮಾಡಲಾಗಿದೆ. ಈ ಭಾಗದ...

ಕಲಬುರಗಿ| ಕಲ್ಯಾಣ ಕರ್ನಾಟಕ ಭಾಗದಲ್ಲಿ ಶಿಕ್ಷಕರ ನೇಮಕಾತಿ ಮಾಡಿ: ಮಲ್ಲಿಕಾರ್ಜುನ ಖರ್ಗೆ  

ಕಲಬುರಗಿ: ಕಲ್ಯಾಣ ಕರ್ನಾಟಕ ಶೈಕ್ಷಣಿಕವಾಗಿ ಹಿಂದುಳಿಯಲು ಮುಖ್ಯ ಕಾರಣ ಈ ಭಾಗದಲ್ಲಿ...