ಕಲಬುರಗಿ| ಶನಿವಾರ-ಭಾನುವಾರ ಸಹ ಉಪ ನೋಂದಣಿ ಕಚೇರಿ ಓಪನ್: ಬಿ.ಫೌಜಿಯಾ ತರನ್ನುಮ್

Date:

Share post:

ಕಲಬುರಗಿ: ನೋಂದಣಿ ಮತ್ತ ಮುದ್ರಾಂಕ ಇಲಾಖೆಯ ಕಲಬುರಗಿ ಜಿಲ್ಲಾ ನೋಂದಣಿ ಕಛೇರಿಯ ಅಧೀನದಲ್ಲಿ ಬರುವ 7 ಉಪ ನೋಂದಣಿ ಕಛೇರಿಗಳು ಸರ್ಕಾರದ ಆದೇಶ ದಿ.20-05-2025ರಂತೆ ಸರದಿಯ ಆಧಾರದ ಮೇಲೆ ಜೂನ್ 1 ರಿಂದ ಡಿಸೆಂಬರ್ 28ರ ವರೆಗೆ ಬರುವ 2ನೇ ಶನಿವಾರ, 3ನೇ ಶನಿವಾರ ಹಾಗೂ ಭಾನುವಾರಗಳ ರಜಾ ದಿನಗಳಂದು ಕರ್ತವ್ಯ ನಿರ್ವಹಿಸಲಿದ್ದು, ಸಾರ್ವಜನಿಕರು ಸದುಪಯೋಗ ಪಡೆದುಕೊಳ್ಳುವಂತೆ ಜಿಲ್ಲಾಧಿಕಾರಿ ಬಿ.ಫೌಜಿಯಾ ತರನ್ನುಮ್ ಅವರು ಮನವಿ ಮಾಡಿಕೊಂಡಿದ್ದಾರೆ.

ಅದರಂತೆ ಕಲಬುರಗಿ ಉಪ ನೋಂದಣಿ ಕಚೇರಿಯು ಜೂನ್ 1, ಜುಲೈ 6, ಆಗಸ್ಟ್ 9, ಸೆಪ್ಟೆಂಬರ್ 13, ಅಕ್ಟೋಬರ್ 12, ನವೆಂಬರ್ 16, ಡಿಸೆಂಬರ್ 25 ರಂದು ಕಾರ್ಯನಿರ್ವಹಿಸಲಿದೆ. ಆಳಂದ ಉಪ ನೋಂದಣಿ ಕಚೇರಿಯು ಜೂನ್ 8, ಜುಲೈ 12, ಆಗಸ್ಟ್ 10, ಸೆಪ್ಟೆಂಬರ್ 14, ಅಕ್ಟೋಬರ್ 19, ನವೆಂಬರ್ 22, ಡಿಸೆಂಬರ್ 28 ರಂದು, ಜೇವರ್ಗಿ ಉಪ ನೋಂದಣಿ ಕಚೇರಿಯು ಜೂನ್ 14, ಜುಲೈ 13, ಆಗಸ್ಟ್ 17, ಸೆಪ್ಟೆಂಬರ್ 21, ಅಕ್ಟೋಬರ್ 25, ನವೆಂಬರ್ 23 ರಜಾ ದಿನದಂದು ಕಾರ್ಯನಿರ್ವಹಿಸಲಿದೆ.

ಅದೇ ರೀತಿ ಚಿತ್ತಾಪುರ ಉಪ ನೋಂದಣಿ ಕಚೇರಿಯು ಜೂನ್ 15, ಜುಲೈ 20, ಆಗಸ್ಟ್ 23, ಸೆಪ್ಟೆಂಬರ್ 27, ಅಕ್ಟೋಬರ್ 26, ಡಿಸೆಂಬರ್ 7 ರಂದು, ಅಫಜಲಪೂರ ಉಪ ನೋಂದಣಿ ಕಚೇರಿಯು ಜೂನ್ 22, ಜುಲೈ 26, ಆಗಸ್ಟ್ 24, ಸೆಪ್ಟೆಂಬರ್ 28, ನವೆಂಬರ್ 22, ಡಿಸೆಂಬರ್ 13 ರಜಾ ದಿನದಂದು ಕಾರ್ಯನಿರ್ವಹಿಸಲಿದೆ.

ಸೇಡಂ ಉಪ ನೋಂದಣಿ ಕಚೇರಿಯು ಜೂನ್ 28, ಜುಲೈ 27, ಆಗಸ್ಟ್ 31, ಅಕ್ಟೋಬರ್ 5, ನವೆಂಬರ್ 8, ಡಿಸೆಂಬರ್ 14 ರಂದು ಹಾಗೂ ಚಿಂಚೋಳಿ ಉಪ ನೋಂದಣಿ ಕಚೇರಿಯು ಜೂನ್ 29, ಆಗಸ್ಟ್ 8, ಸೆಪ್ಟೆಂಬರ್ 7, ಅಕ್ಟೋಬರ್ 11, ನವೆಂಬರ್ 9 ಮತ್ತು 21 ರಜಾ ದಿನದಂದು ಕಾರ್ಯನಿರ್ವಹಿಸಲಿದೆ ಎಂದು ಅವರು ತಿಳಿಸಿದ್ದಾರೆ.

Share post:

spot_imgspot_img

Popular

More like this
Related

ಕಲಬುರಗಿ| ಶಿಕ್ಷಣದ ಜ್ಯೋತಿ ಹೊತ್ತಿಸಿದ ಮಹಾದೇವಪ್ಪ ರಾಂಪುರೆ: ಡಾ.ಮಹೇಶ ಗಂವ್ಹಾರ

ಕಲಬುರಗಿ: ಅಂದಿನ ಹೈದ್ರಾಬಾದ್ ಕರ್ನಾಟಕದಲ್ಲಿ ಶಿಕ್ಷಣದ ಜ್ಯೋತಿ ಹೊತ್ತಿಸಿದ ಪುಣ್ಯಾತ್ಮ ಮಹಾದೇವಪ್ಪ...

ಕಲಬುರಗಿ| ಸರಕಾರಿ ನೌಕರರ ಭವನಕ್ಕೆ ಜಿಲ್ಲಾಧಿಕಾರಿ ಭೇಟಿ, ಪರಿಶೀಲನೆ

ಕಲಬುರಗಿ: ನಗರದಲ್ಲಿರುವ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಭವನಕ್ಕೆ ಜಿಲ್ಲಾಧಿಕಾರಿ ಫೌಜಿಯಾ...

ಕಲಬುರಗಿ| ಜಿಲ್ಲಾಧಿಕಾರಿಗಳಿಂದ ಸಿಟಿ ರೌಂಡ್: ರಸ್ತೆ ದುರಸ್ತಿ,‌ ಗುಂಡಿ ಮುಚ್ಚುವ ಕಾರ್ಯ ಪರಿಶೀಲನೆ

ಕಲಬುರಗಿ: ಜಿಲ್ಲಾಧಿಕಾರಿ ಬಿ.ಫೌಜಿಯಾ ತರನ್ನುಮ್ ಮತ್ತು ಮಹಾನಗರ ಪಾಲಿಕೆ ಆಯುಕ್ತ ಅವಿನಾಶ...

ಕಲಬುರಗಿ| ಬಾಲ್ಯ ವಿವಾಹ, ಫೋಕ್ಸೋ ಪ್ರಕರಣಗಳ ಬಗ್ಗೆ ನಿಗಾವಹಿಸಿ: ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಬಿ.ಫೌಜಿಯಾ ಸೂಚನೆ

ಕಲಬುರಗಿ: ಬಾಲ್ಯವಿವಾಹ ಮತ್ತು ಫೋಕ್ಸೋ ಪ್ರಕರಣಗಳು ಕಂಡು ಬಂದಲ್ಲಿ ಸಂಬಂಧಿಸಿದ ಅಧಿಕಾರಿಗಳು...