ಕಲಬುರಗಿ | ಕ್ರೀಡಾಕೂಟದಲ್ಲಿ ವಿಜೇತರಾದ ಪೊಲೀಸ್ ಸಿಬ್ಬಂದಿಯವರಿಗೆ ಸನ್ಮಾನ

Date:

Share post:

ಕಲಬುರಗಿ: ಕೇಂದ್ರ ಕಾರಾಗೃಹ ವೀಕ್ಷಕರಾದ ಬಾಲನಗೌಡ ಮತ್ತು ಭೀಮರೆಡ್ಡಿ ಇವರುಗಳು ಶಿವಮೊಗ್ಗದಲ್ಲಿ ಮೂರು ದಿನಗಳ ರಾಜ್ಯ ಮಟ್ಟದ ಸರ್ಕಾರಿ ನೌಕರರ ಕ್ರೀಡಾಕೂಟದ, ಓಟ ಸ್ಪರ್ಧೆಯಲ್ಲಿ ದ್ವೀತಿಯ ಸ್ಥಾನವನ್ನು ಗಳಿಸಿ ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾದ ಪ್ರಯುಕ್ತ ಮುಖ್ಯಸ್ಥರಾದ ಡಾ. ಅನಿತಾ ಆರ್. ಅವರು ವಿಜೇತರಾದ ವೀಕ್ಷಕರುಗಳಿಗೆ ಸನ್ಮಾನಿಸಿದರು.

ನಂತರ ಮಾತನಾಡುತ್ತಾ, ತಾವುಗಳು ಮುಂದೆಯೂ ಕೂಡಾ ಇದೇ ರೀತಿ ರಾಷ್ಟ್ರ ಮಟ್ಟದ ಕ್ರೀಡಾ ಕೂಟದಲ್ಲಿ ಭಾಗವಹಿಸಿ, ಇದಕ್ಕೆ ಇಲಾಖೆ ವತಿಯಿಂದ ತಮಗೆ ಸಂಪೂರ್ಣ ಬೆಂಬಲವಿದೆ, ಎಲ್ಲ ರೀತಿಯ ಸಹಕಾರವನ್ನು ನೀಡುತ್ತೇವೆ, ತಾವುಗಳು ಸ್ಪರ್ಧೆಯಲ್ಲಿ ಭಾಗವಹಿಸಿ ವಿಜೇತರಾಗಿ ವಿಜಯಪತಾಕೆಯನ್ನು ಹಾರಿಸಿ ಕಾರಾಗೃಹ ಇಲಾಖೆಯ ಮತ್ತು ಕರ್ನಾಟಕ ರಾಜ್ಯದ ಕೀರ್ತಿಯನ್ನು ಎಲ್ಲೆಡೆ ಪಸರಿಸಿರಿ ಎಂದು ಶುಭ ಹಾರೈಸಿದರು.

ಈ ಸಂದರ್ಭದಲ್ಲಿ ಸಹಾಯಕ ಆಡಳಿತ ಅಧಿಕಾರಿಯಾದ ಭೀಮಾಶಂಕರ ಡಾಂಗೆ, ಶಿಕ್ಷಕ ನಾಗರಾಜ ಮೂಲಗೆ, ಜೈಲರ್‍ಗಳಾದ ಸಾಗರ ಪಾಟೀಲ್, ಶ್ರೀಮಂತಗೌಡ ಪಾಟೀಲ್, ಮುಖ್ಯ ವೀಕ್ಷಕರರುಗಳಾದ ಶ್ರೀನಿವಾಸ ಭಜಂತ್ರಿ, ಮಹೇಶ್ ಪಾಟೀಲ್, ಶ್ರೀಕಾಂತ್ ರಂಜೇರಿ, ಬಂಡೆಪ್ಪ ಬಡಿಗೇರ್, ಹಾಗೂ ಬಿ.ಪಿ ಕಾಳಿಂಗ್ ಇತರರು ಭಾಗವಹಿಸಿ ಶುಭ ಕೋರಿದರು ಹಾಗೂ ಎಲ್ಲಾ ಕಛೇರಿ ಅಧಿಕಾರಿ/ ಸಿಬ್ಬಂದಿಗಳು ಶುಭ ಹಾರೈಸಿದರು.

Share post:

spot_imgspot_img

Popular

More like this
Related

ಕಲಬುರಗಿ ಸೆಂಟ್ರಲ್ ಜೈಲಿನಿಂದ ಮೂವರು ಕೈದಿಗಳ ಪರಾರಿ; ತೀವ್ರ ಶೋಧ ಆರಂಭ

ಕಲಬುರಗಿ: ನಗರದ ಜೇವರ್ಗಿ ರಸ್ತೆಯಲ್ಲಿರುವ ಸೆಂಟ್ರಲ್ ಜೈಲಿನಿಂದ ಕೊಲೆ ಪ್ರಕರಣಗಳಲ್ಲಿ ಶಿಕ್ಷೆ...

ಕಲಬುರಗಿ| ಎಸ್ಐಆರ್: ಶೇ.100ರಷ್ಟು ಗಣತಿ ನಮೂನೆ ವಿತರಣೆ ಮಾಡಿ: ವಿ.ಅನ್ಬುಕುಮಾರ್

ಕಲಬುರಗಿ: ವಿಶೇಷ ಸಮಗ್ರ ಮತದಾರರ ಪಟ್ಟಿ ಪರಿಷ್ಕರಣೆಯಲ್ಲಿ ಬಿ.ಎಲ್.ಓ.ಗಳು ತಮ್ಮ ಬಳಿ...

ಕಲಬುರಗಿಗೆ ನಿರಂತರ ನೀರು ಪೂರೈಕೆ ಯೋಜನೆಯ ಕಾಮಗಾರಿ ಮುಗಿಸಿ: ಸಚಿವ ಯತೀಂದ್ರ ಸಿದ್ಧರಾಮಯ್ಯ ವಾರ್ನಿಂಗ್

ಕಲಬುರಗಿ: ಕಲಬುರಗಿ ಮಹಾನಗರಕ್ಕೆ ನಿರಂತರ ಕುಡಿಯುವ ನೀರು ಪೂರೈಕೆ 24x7 ಯೋಜನೆಯ...

Kalaburagi| ಊಟ ಸೇವನೆಯಿಂದ ಮಕ್ಕಳ ಅಸ್ವಸ್ಥ ಪ್ರಕರಣ: ಶಾಲೆಯ ಪ್ರಭಾರಿ ಪ್ರಾಂಶುಪಾಲ, ವಾರ್ಡನ್ ಅಮಾನತ್ತು

ಕಲಬುರಗಿ: ಜಿಲ್ಲೆಯ ಚಿತ್ತಾಪುರ ತಾಲೂಕಿನ ದಂಡೋತಿ ಗ್ರಾಮದ ಮೊರಾರ್ಜಿ ದೇಸಾಯಿ ಅಲ್ಪಸಂಖ್ಯಾತರ...