ಕಲಬುರಗಿ| ಕೊಡಲಿಯಿಂದ ಬೈಕ್ ಸವಾರನಿಗೆ ದಮ್ಕಿ ಹಾಕಿದ ವ್ಯಕ್ತಿ; ವಿಡಿಯೋ ವೈರಲ್

Date:

Share post:

ಕಲಬುರಗಿ: ಕೊಡಲಿಯಿಂದ ಬೈಕ್ ಸವಾರನಿಗೆ ದಮ್ಕಿ ಹಾಕಿರುವ ಘಟನೆ ರವಿವಾರ ನಗರದ ಜಗತ್ ಸರ್ಕಲ್ ನಲ್ಲಿ ನಡೆದಿರುವುದು ವರದಿಯಾಗಿದೆ.

ಬೈಕ್ ಕಟ್ ಹೊಡೆದಿದ್ದಕ್ಕೆ ಕೊಡಲಿ ತೆಗೆದು ಬೈಕ್ ಸವಾರನಿಗೆ ವ್ಯಕ್ತಿಯೋರ್ವ ಧಮ್ಕಿ ಹಾಕಿದ್ದಾನೆ ಎನ್ನಲಾದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.

‘ಇಲ್ಲಿಂದ ಹೋಗು ಇಲ್ಲ ನಿನ್ನ ಇಲ್ಲೆ ಕಲ್ಲಾಸ್ ಮಾಡುತ್ತೇನೆ’, ಎಂದು ಮುಸ್ಲಿಂ ಸಮುದಾಯದ ಬೈಕ್ ಸವಾರನಿಗೆ ಅವಾಚ್ಯ ಶಬ್ದಗಳಿಂದ ಎಚ್ಚರಿಕೆ ಕೊಡುತ್ತಿರುವುದು ವಿಡಿಯೋದಲ್ಲಿ ದಾಖಲಾಗಿದೆ.

ಘಟನೆ ಬ್ರಹ್ಮಪುರ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ನಡೆದಿದೆ.

ಈ ಕುರಿತು ಪ್ರತಿಕ್ರಿಯಿಸಿದ ಬ್ರಹ್ಮಪುರ ಪೊಲೀಸ್ ಠಾಣೆಯ ಪಿಎಸ್ಐ, ಆವಾಜ್ ಹಾಕಿರುವ ವ್ಯಕ್ತಿಯ ಕುರಿತು ಮಾಹಿತಿ ಕಲೆ ಹಾಕಲಾಗುತ್ತಿದೆ, ಯಾರಾದರೂ ದೂರು ಕೊಟ್ಟರೆ ಪ್ರಕರಣ ದಾಖಲಿಸಿ, ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ.

Share post:

spot_imgspot_img

Popular

More like this
Related

ಕಲಬುರಗಿ| ಕಾಳ‌ ಸಂತೆಯಲ್ಲಿ ಸಿಲಿಂಡರ್ ಮಾರಾಟವಾದರೆ ಡಿಸ್ಟ್ರಿಬೂಟರ್ ಮೇಲೆ ಕ್ರಮ: ಜಿಲ್ಲಾಧಿಕಾರಿ ಇಕ್ರಮ್‌ ಶರೀಫ್

ಕಲಬುರಗಿ: ಮದ್ಯ ಪ್ರಾಚ್ಯ ದೇಶದಲ್ಲಿನ‌ ಬಿಕ್ಕಟ್ಟಿನ ನಡುವೆ ಜಿಲ್ಲೆಯಲ್ಲಿ ಎಲ್ಲಿಯೆ ಕಾಳ...

ಕಲಬುರಗಿ| ಕೋಮು ದ್ವೇಷ ಭಾಷಣ ಆರೋಪ; ಬಿಜೆಪಿ ಮಾಜಿ ಶಾಸಕ ದತ್ತಾತ್ರೇಯ ಪಾಟೀಲ್ ವಿರುದ್ಧ ಎಫ್ಐಆರ್ ದಾಖಲು

ಕಲಬುರಗಿ: "ಕಲಬುರಗಿಯನ್ನು ಪಾಕಿಸ್ತಾನ ರೀತಿಯಲ್ಲಿ ಮಾಡಲು ಇಲ್ಲಿನ ನಾಯಕರು ಹಾಗೂ ಸರಕಾರ...

ಕಲಬುರಗಿ| ಭೀಕರ ಅಪಘಾತ: ಒಂದೇ ಕುಟುಂಬದ ಐವರು ದುರ್ಮರಣ 

ಕಲಬುರಗಿ: ಕ್ರೂಸರ್ ಹಾಗೂ ಲಾರಿ ನಡುವೆ ಭೀಕರ ಅಪಘಾತ ಸಂಭವಿಸಿ ಒಂದೇ...

ಕಲಬುರಗಿ| ಆಕಾಶವಾಣಿ  “ಹಲೋ ಪೊಲೀಸ್ ಕಮಿಷನರ್” ನೇರ ಫೋನ್ ಇನ್ ಕಾರ್ಯಕ್ರಮ

ಕಲಬುರಗಿ: ಆಕಾಶವಾಣಿ ಕಲಬುರಗಿ ಕೇಂದ್ರವು ಮೇ 22(ಶುಕ್ರವಾರ) ರ ಬೆಳಗ್ಗೆ 11...