ಕಲಬುರಗಿ| ‘ಆಪರೇಶನ್ ಸಿಂಧೂರ’ ಬೆಂಬಲಿಸಿ ಬೃಹತ್ ತಿರಂಗಾ ಯಾತ್ರೆ ಯಶಸ್ವಿ

Date:

Share post:

ಕಲಬುರಗಿ: ಪಾಕಿಸ್ತಾನ ಮೂಲದ ಭಯೋತ್ಪಾದಕರು, ಕಾಶ್ಮೀರದ ಪಹಲ್ಗಾಂ ಮೇಲೆ ದಾಳಿ ನಡೆಸಿ 26 ಭಾರತೀಯರನ್ನು ಹತ್ಯೆ ಮಾಡಿರುವ ಪ್ರತಿಯಾಗಿ ಭಾರತ ಆಪರೇಷನ್ ಸಿಂಧೂರ ಕಾರ್ಯಾಚರಣೆ ನಡೆಸಿ ಭಯೋತ್ಪಾದಕರು ಹುಟ್ಟಡಿಗಿಸಿದ ನಿಮಿತ್ತ ಸೈನಿಕರಿಗೆ ಬೆಂಬಲ ಸೂಚಿಸಲು ಶನಿವಾರ ನಗರದಲ್ಲಿ ಬೃಹತ್ ತಿರಂಗಾ ಯಾತ್ರೆ ಯಶಸ್ವಿಯಾಗಿ ನಡೆಯಿತು.

ನಗರದ ಗಂಜ್ ಪ್ರದೇಶದ ನಗರೇಶ್ವರ ಶಾಲೆಯಿಂದ ಪ್ರಾರಂಭವಾದ ತಿರಂಗಾ ಯಾತ್ರೆ ಜಗತ್ ವೃತ್ತದಲ್ಲಿ ಸಮಾಪ್ತಿಯಾಯಿತು. ಯಾತ್ರೆಯ ಉದ್ದಕ್ಕೂ ‘ಜೈ ಜವಾನ್, ಜೈ ಕಿಸಾನ್’, ‘ವಂದೇ ಮಾತರಂ’ ಸೇರಿದಂತೆ ದೇಶಭಕ್ತಿಯ ಹಲವು ಘೋಷಣೆಗಳನ್ನು ಕೂಗುತ್ತಾ ವಿದ್ಯಾರ್ಥಿಗಳು, ಮುಖಂಡರು, ಹೆಜ್ಜೆಗಳನ್ನು ಇಟ್ಟರು.

‘ನಾವು ಸೇನಾ ಪಡೆಯೊಂದಿಗೆ ಇದ್ದೇವೆ’ ಮತ್ತು ‘ಆಪರೇಷನ್ ಸಿಂಧೂರ ಜೊತೆ ರಾಷ್ಟ್ರ’ ಎಂಬ ಬ್ಯಾನರ್ ಗಳನ್ನು ಅಳವಡಿಸಿಕೊಂಡು ರ್ಯಾಲಿಯ ಉದ್ದಕ್ಕೂ ದೇಶದ ಪರ ಘೋಷಣೆಗಳನ್ನು ಕೂಗುತ್ತಾ ಸೈನಿಕರಿಗೆ ಬೆಂಬಲ ವ್ಯಕ್ತಪಡಿಸಿದರು.

ಅಪರೇಷನ್ ಸಿಂಧೂರ ಕಾರ್ಯಾಚರಣೆಗೆ ಮತ್ತಷ್ಟು ಶಕ್ತಿ ನೀಡಲಿ, ಭಯೋತ್ಪಾದಕರನ್ನು ಹೊಡೆದುರುಳಿಸಲಿ ಎಂದು ಅಲ್ಲಿನ ನಾಗರಿಕರು ಆಗ್ರಹಿಸಿದರು.

ಈ ಸಂದರ್ಭದಲ್ಲಿ ಮಾಜಿ ಸೈನಿಕರಾದ ಬಸವರಾಜ ಬಿರಾದಾರ, ಸಿದ್ದು ಬಲಶೆಟ್ಟಿ, ಭೋಜರಾಜ ಪಾಟೀಲ್, ಶಿವಾನಂದ ಪಾಟೀಲ, ಅಶೋಕ್ ಗುತ್ತೇದಾರ್, ಈರಣ್ಣ ಹೂಗಾರ, ಅರ್ಜುನ್ ಕೇಂಗಲ್, ಚಂದ್ರಶೇಖರ ಉದನೂರ, ನಿಂಗಣ್ಣ ಬಿರಾದಾರ, ಶಿವಪುತ್ರಪ್ಪ ನಂದಿಕೂರ, ದಯಾನಂದ ಸ್ವಾಮಿ, ಪರಮೇಶ್ವರ ಶಿವಗೊಂಡ, ಸಿದ್ದಲಿಂಗ ಮಲಶೆಟ್ಟಿ, ಆರ್ ಎಸ್ ಜೀವಣಗಿ, ಶಾಸಕರಾದ ಬಸವರಾಜ ಮತ್ತಿಮಡು, ಅವಿನಾಶ್ ಜಾಧವ್, ಮಾಜಿ ಸಂಸದ ಡಾ.ಉಮೇಶ್ ಜಾಧವ್, ಎಂಎಲ್ಸಿ ಬಿ.ಜಿ.ಪಾಟೀಲ್, ಶಶೀಲ್ ನಮೋಶಿ, ಚಂದು ಪಾಟೀಲ್, ಅಶೋಕ ಬಗಲಿ, ರಾಜಕುಮಾರ್ ಪಾಟೀಲ್ ತೇಲ್ಕೂರ್, ದತ್ತಾತ್ರೇಯ ಪಾಟೀಲ ರೇವೂರ್, ಮಾಶಾಳದ ಕೇದಾರ ಶ್ರೀಗಳು, ಚವದಾಪುರಿ ಶ್ರೀ, ಬಡದಾಳ ಶ್ರೀ, ಪಾಳಾ ಶ್ರೀ, ಚಿಣಮಗೇರಿ ಶ್ರೀ, ಅಂಕಲಗಾ ಶ್ರೀ, ನೀಲೂರ ಶ್ರೀ, ಗದ್ದಗಿಮಠದ ಶ್ರೀ, ಮಹೇಶ್ ದೇಶಪಾಂಡೆ, ಉಮೇಶ್ ಪಾಟೀಲ್, ಶಿವಕುಮಾರ್ ಬೊಳಶೆಟ್ಟಿ, ಶಿವರಾಜ್ ಸಂಗೋಳಗಿ, ಪ್ರಶಾಂತ್ ಗುಡ್ಡಾ, ಸತೀಶ್ ಮಾವೂರ, ಸುಧಾ ಹಾಲಕಾಯಿ, ಸವಿತಾ ಪಾಟೀಲ್, ಸುವರ್ಣ ವಾಡೆ, ವಿಜಯಲಕ್ಷ್ಮಿ ಗೊಬ್ಬುರಕರ, ಅರವಿಂದ್ ನವಲಿ, ಹರ್ಷಾ ಗುತ್ತೇದಾರ್, ಶಿವರಾಜ್ ಪಾಟೀಲ್ ರದ್ದೇವಾಡಗಿ, ಸಂತೋಷ ಹಾದಿಮನಿ, ಸಚಿನ್ ಕಡಗoಚಿ, ಮಲ್ಲು ಉದೂನೂರ್, ಬಸವರಾಜ ಮುನ್ನಲಿ, ಅನಿಲ್ ಜಾಧವ, ಗುರುರಾಜ್ ಭರದ ನೂರ್, ವಿರು ರಾಯ್ಕೊಡು, ಅಶೋಕ್ ಮನಕರ್ ವರಾಧ ಶಕರ್ ಶೇಟ್ಟಿ, ಮಂಜುನಾಥ್ ಚೀಲಶೆಟ್ಟಿ, ಶಿವು ಕಾಳಗಿ, ನಾಗರಾಜ್ ಮಹಾಗಾoವಕರ್, ಸಂಗಮೇಶ ಮುನ್ನಳ್ಳಿ, ಗಂಗಾಧರ್ ಬಿಲಗುಂದಿ ಸೇರಿದಂತೆ ವಿವಿಧ ಶಾಲಾ – ಕಾಲೇಜುಗಳ ವಿದ್ಯಾರ್ಥಿಗಳು ಈ ತಿರಂಗಾ ಯಾತ್ರೆಯಲ್ಲಿ ಭಾಗಿಯಾಗಿದ್ದರು.

Share post:

spot_imgspot_img

Popular

More like this
Related

ಕಲಬುರಗಿ| ನುಡಿದಂತೆ ನಡೆಯುವ ಸರ್ಕಾರ‌ ನಮ್ಮದು, ಇದೂವರೆಗೆ 243 ಭರವಸೆ ಈಡೇರಿಸಿದ್ದೇವೆ: ಸಿದ್ದರಾಮಯ್ಯ

ಕಲಬುರಗಿ: ಚುನಾವಣೆ ಪೂರ್ವ ನೀಡಿದ ಭರವಸೆಯಂತೆ ರಾಜ್ಯದಲ್ಲಿ ಪಂಚ ಗ್ಯಾರಂಟಿ ಯೋಜನೆ...

ಕಲಬುರಗಿ| ಕಲ್ಯಾಣ ಕರ್ನಾಟಕ ಅಭಿವೃದ್ಧಿಗೆ ಸರ್ಕಾರ ಬದ್ಧ: ಡಿಸಿಎಂ ಡಿ.ಕೆ. ಶಿವಕುಮಾರ್

ಕಲಬುರಗಿ: "ನಮ್ಮ ಪಕ್ಷ ಚುನಾವಣೆಗೂ ಮುನ್ನ ಕೊಟ್ಟ ಮಾತಿನಂತೆ ಗ್ಯಾರಂಟಿ ಯೋಜನೆಗಳನ್ನ...

ಕಲಬುರಗಿ| ಸುಗಮ ಆಡಳಿತಕ್ಕಾಗಿ ಪ್ರಜಾಸೌಧಗಳ ನಿರ್ಮಾಣ: ಡಾ.ಅಜಯ್ ಧರ್ಮಸಿಂಗ್

ಕಲಬುರಗಿ: ಸುಗಮ ಆಡಳಿತಕ್ಕಾಗಿ ಹೊಸ ತಾಲ್ಲೂಕುಗಳನ್ನು ಘೋಷಣೆ ಮಾಡಲಾಗಿದೆ. ಈ ಭಾಗದ...

ಕಲಬುರಗಿ| ಕಲ್ಯಾಣ ಕರ್ನಾಟಕ ಭಾಗದಲ್ಲಿ ಶಿಕ್ಷಕರ ನೇಮಕಾತಿ ಮಾಡಿ: ಮಲ್ಲಿಕಾರ್ಜುನ ಖರ್ಗೆ  

ಕಲಬುರಗಿ: ಕಲ್ಯಾಣ ಕರ್ನಾಟಕ ಶೈಕ್ಷಣಿಕವಾಗಿ ಹಿಂದುಳಿಯಲು ಮುಖ್ಯ ಕಾರಣ ಈ ಭಾಗದಲ್ಲಿ...