ಕಲಬುರಗಿ: ದುಕಾನ ಅವರ ‘ಹೂಗನಸು’ ಕವನ ಸಂಕಲನ ಬಿಡುಗಡೆ

Date:

Share post:

ಕಲಬುರಗಿ: ನಿವೃತ್ತ ಕನ್ನಡ ಉಪನ್ಯಾಸಕರಾದ ರೇವಣಸಿದ್ದಪ್ಪ ದುಕಾನ ಅವರ ‘ಹೂಗನಸು’ ಕವನ ಸಂಕಲನದ ಬಿಡುಗಡೆ ಸಮಾರಂಭ ಇಂದು(ಮೇ15) ಸಂಜೆ 5:30ಕ್ಕೆ ಅನ್ನಪೂರ್ಣ ಕ್ರಾಸ್‌ನ ಕಲಾಮಂಡಳದಲ್ಲಿ ನಡೆಯಲಿದೆ ಎಂದು ಕಲ್ಬುರ್ಗಿ ಸಂಸ್ಕೃತಿಕ ಪ್ರತಿಷ್ಠಾನ ಅಧ್ಯಕ್ಷ ಬಿ. ಎಚ್. ನಿರಗುಡಿ ತಿಳಿಸಿದ್ದಾರೆ.

ಕಾರ್ಯಕ್ರಮದ ಸಾನಿಧ್ಯವನ್ನು ಸಂಸ್ಥಾನ ಹಿರೇಮಠ ಶ್ರೀನಿವಾಸ ಸರಡಗಿ ಶ್ರೀಗಳಾದ ಪೂಜ್ಯಶ್ರೀ ಡಾ. ರೇವಣಸಿದ್ಧ ಶಿವಾಚಾರ್ಯರು ಹಾಗೂ ಸುಕ್ಷೇತ್ರ ಭರತ್ ನೂರ ಚಿಕ್ಕಗುರು ನಂಜೇಶ್ವರ ಮಹಾಸ್ವಾಮಿಗಳು ವಹಿಸಲಿದ್ದಾರೆ.

ಕೃತಿಯನ್ನು ಕಾಂಗ್ರೆಸ್ ಮುಖಂಡರಾದ ನೀಲಕಂಠರಾವ ಮೂಲಗೆ ಅನಾವರಣಗೊಳಿಸಲಿದ್ದಾರೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ನಿವೃತ್ತ ಪ್ರಾಧ್ಯಾಪಕರೂ ಆಗಿರುವ ವ್ಹಿ ಜಿ ಮಹಿಳಾ ಮಹಾವಿದ್ಯಾಲಯದ ಡಾ. ವಿಜಯಕುಮಾರ್ ಪರುತೆ ವಹಿಸಲಿದ್ದು, ಕೃತಿಯ ವಿಮರ್ಶೆಯನ್ನು ಸಾಹಿತಿ ಡಾ. ಶೈಲಜಾ ಬಾಗೇವಾಡಿ ಮಾಡಲಿದ್ದಾರೆ.

ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಕರ್ನಾಟಕ ಸಾಹಿತ್ಯ ಅಕಾಡೆಮಿಯ ಸದಸ್ಯರಾದ ಸಿದ್ದರಾಮ ಹೊನ್ಕಲ್ ಹಾಗೂ ಮಧುಕರ್ ದೇಶಪಾಂಡೆ ಪಾಲ್ಗೊಳ್ಳಲಿದ್ದಾರೆ ಎಂದು ಬಿ. ಎಚ್. ನಿರಗುಡಿ ತಿಳಿಸಿದ್ದಾರೆ.

Share post:

spot_imgspot_img

Popular

More like this
Related

ಕಲಬುರಗಿ ನೂತನ ಜಿಲ್ಲಾಧಿಕಾರಿಯಾಗಿ ಇಕ್ರಮ್ ಶರೀಫ್ ಅಧಿಕಾರ ಸ್ವೀಕಾರ

ಕಲಬುರಗಿ: ಕಲಬುರಗಿ ಜಿಲ್ಲೆಯ ನೂತನ ಜಿಲ್ಲಾಧಿಕಾರಿಯಾಗಿ ಕರ್ನಾಟಕ ಕೇಡರಿನ 2016ನೇ ಬ್ಯಾಚಿನ...

ಸಿದ್ದು ಸಂಪುಟದ ಸಚಿವ ಡಿ. ಸುಧಾಕ‌ರ್ ಇನ್ನಿಲ್ಲ!

ಬೆಂಗಳೂರು: ಯೋಜನಾ ಮತ್ತು ಸಾoಖಿಕ, ಚಿತ್ರದುರ್ಗ ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್...

ಕಲಬುರಗಿ ಕೋಟೆಯಲ್ಲಿ ಹರಿದ ಸಂಗೀತ ಸುಧೆ; ಗಾಯನಕ್ಕೆ ತಲೆದೂಗಿದ ಕಲಾ ಪ್ರೇಮಿಗಳು

ಕಲಬುರಗಿ: ಶುಕ್ರವಾರ ಸಂಜೆ ನಗರದ ಐತಿಹಾಸಿಕ ಕಲಬುರಗಿ ಕೋಟೆಯಲ್ಲಿ ಇದೇ ಪ್ರಥಮ...