ಕಲಬುರಗಿ| ಇಬ್ಬರು ಕಳ್ಳಿಯರ ಬಂಧನ; 1.18ಲಕ್ಷ ಮೌಲ್ಯದ ಮುದ್ದೆಮಾಲು ಜಪ್ತಿ 

Date:

Share post:

ಕಲಬುರಗಿ: ಆಳಂದ ಪಟ್ಟಣದ ಬಸ್ ನಿಲ್ದಾಣ ಸೇರಿ ಸಂತೆಯಲ್ಲಿ ಅಮಾಯಕ ಮಹಿಳೆಯರನ್ನು ಬುರ್ಖಾ ಧರಿಸಿಕೊಂಡು ಹಣ, ವಡೆವೆಗಳನ್ನು ದೂಚ್ಚುತ್ತಿದ್ದ ಇಬ್ಬರು ಕಳ್ಳಿಯರನ್ನು ಹಠಾತಾಗಿ ಜಾಲಬೀಸಿ ಬಂಧಿಸುವಲ್ಲಿ ಆಳಂದ ಠಾಣೆಯ ಪೊಲೀಸರು ಯಶಸ್ವಿಯಾಗಿದ್ದಾರೆ.

ಕಲಬುರಗಿ ಬಾಪುನಗರದ ನಿವಾಸಿಯಾಗಿರುವ ಬಟ್ಟೆ ವ್ಯಾಪಾರಿ ಸರಿತಾ ಗಂಡ ಕಾಶಿನಾಥ (32), ಮತ್ತು ಕಲಬುರಗಿ ನಾಗನಳ್ಳಿ ಕ್ರಾಸ್ ನಿವಾಸಿ ಬಟ್ಟ ವ್ಯಾಪಾರಿ ಕರುಣಾನಿಧಿ ಗಂಡ ಸಿದ್ಧರಾಜ ಜೀನಕೇರಿ(30), ಎಂಬುವ ಮಹಿಳೆಯರನ್ನೇ ಪೊಲೀಸರು ಬಂಧಿಸಿ ನ್ಯಾಯಾಂಗ ಬಂಧನಕೆ ಒಳಪಡಿಸಿದ್ದು, ಸದರಿ ಪ್ರಕರಣಕ್ಕೆ ಸಂಬಂಧಿಸಿದಂತೆ 1.18ಲಕ್ಷ ರೂಪಾಯಿ ಮೌಲ್ಯದ ಮುದ್ದೆಮಾಲು ಸೇರಿ ನಗದು ವಶಪಡಿಸಿಕೊಂಡಿದ್ದಾರೆ.

ಬಸ್ ಹತ್ತುವಾಗ ಇಳಿಯುವಾಗ ಅಮಾಯಕ ಮಹಿಳೆಯರನ್ನೇ ಟಾರ್ಗೆ ಮಾಡಿ ಅವರ ವಡವೆ, ಹಣ ದೂಚ್ಚುತ್ತಿದ್ದ ಈ ಕಳ್ಳಿಯರು ಕೊನೆಗೂ ಪೊಲೀಸ್ ಅತಿಥಿಯಾಗಿದ್ದು, ಸೋಮವಾರ ಬಸ್ ನಿಲ್ದಾಣದಲ್ಲೇ ಕೃತ್ಯ ಎಸುವಾಗ ಪೊಲೀಸರ ಕೈಗೆ ಸಿಕ್ಕಿಕೊಂಡಿರುವ ಆರೋಪಿಗಳ ಹಿಂದಿನ ಬಣ್ಣ ಬಯಲಾಗಿದೆ ಎನ್ನಲಾಗಿದೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ದೂರು ನೀಡಿದ್ದ ಮೋಘಾ ಬಿ ಗ್ರಾಮದ ಮೇಘಾ ಮಲ್ಲಿನಾಥ ನಡಗೇರಿ, ಕಳೆದ ನವೆಂಬರ 18ರಂದು ಮತ್ತು ಪಡಸಾವಳಿ ಗ್ರಾಮದ ವೀರಭದ್ರ ತಂದೆ ಶಿವಣ್ಣ ಪಾರಶೆಟ್ಟಿ ನವೆಂಬರ 25ರಂದು ಹಾಗೂ ಚಿಂಚೋಳಿ ಗ್ರಾಮದ ಮಹಾದೇವಯ್ಯಾ ಮಹಾಲಿಂಗಯ್ಯ ಸ್ವಾಮಿ ಎಂಬುವರು ಏಪ್ರಿಲ್ 8ರಂದು ತಮ್ಮಗೆ ವಂಚನೆಯಾದ ಬಗ್ಗೆ ನೀಡಿದ ದೂರಿಗೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು, ಕಾರ್ಯಚರಣೆ ನಡೆಸಿ ಆರೋಪಿಗಳನ್ನು ಬಂಧಿಸುವಲ್ಲಿ ಯಶ ಕಂಡಿದ್ದಾರೆ.

ಕಳ್ಳಿಯರಿಂದ 7 ಗ್ರಾಂ ಚಿನ್ನದ ವಡವೆಗಳು, ನಗದು ಹಣ 73,000 ರೂ. ಹಣ ಸೇರಿ ಒಟ್ಟು 1.18 ಮೌಲ್ಯದ ಮುದ್ದೆಮಾಲ ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಈ ಕಳ್ಳಿಯರ ಬಂಧನ ಕಾರ್ಯಾಚರಣೆಗೆ ಡಿವೈಎಸ್ಪಿ ಗೋಪಿ ಬಿ.ಆರ್. ಮಾರ್ಗದರ್ಶನದಲ್ಲಿ ಆಳಂದ ಠಾಣೆಯ ಪಿಐ ಶರಣಬಸಪ್ಪ ಕೋಡ್ಲಾ ನೇತೃತ್ವದಲ್ಲಿ ಪಿಎಸ್ಐ ಭೀಮಾಶಂಕರ ಬಂಕ್ಲಿ, ತನಿಖಾ ವಿಭಾಗದ ಪಿಎಸ್ಐ ಸಂಜೀವ ರೆಡ್ಡಿ, ಸಿಬ್ಬಂದಿಗಳಾದ ಯುವರಾಜ, ಮುಹಿಬೂಬ ಶೇಖ, ಚಂದ್ರಶೇಖರ, ಗಣಪತಿರಾವ ಘಂಟೆ, ಸಚೀನ್ ಜಾಕೀರ, ವೆಂಕಟರಾವ್, ಸಿದ್ಧರಾಮ,ಮೌಲಾಲಿ ಅವರ ತಂಡವು ಖಚಿತ ಮಾಹಿತಿ ಮೇರೆಗೆ ಕಾರ್ಯಚರಣೆ ನಡೆಸಿ ಆರೋಪಿಗಳನ್ನು ಬಂಧಿಸಿರುವ ಯಶಸ್ವಿ ಕಾರ್ಯಾಚರಣೆಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಡ್ಡೂರು ಶ್ರೀನಿವಾಸಲು ಅವರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

Share post:

spot_imgspot_img

Popular

More like this
Related

ಕಲಬುರಗಿ| ವಿ.ಜಿ ವುಮನ್ಸ್ ಕಾಲೇಜಿನಲ್ಲಿ ವಿಶ್ವ ಮಾತೃ ಭಾಷೆ ದಿನಾಚರಣೆ ಆಚರಣೆ

ಕಲಬುರಗಿ: ಕಲಬುರಗಿ ನಗರದ ಪ್ರತಿಷ್ಠಿತ ಮಹಿಳಾ ಮಹಾವಿದ್ಯಾಲಯವಾದ ಶ್ರೀಮತಿ ವೀರಮ್ಮ ಗಂಗಸಿರಿ...

ಕಲಬುರಗಿ| ಎರಡು ದಿನಗಳ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ತೆರೆ

ಕಲಬುರಗಿ: ಸೋಮವಾರದಿಂದ ಪ್ರಾರಂಭವಾದ 22ನೆಯ ಕಲಬುರಗಿ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನವು...

ಕಲಬುರಗಿ ಜಿಲ್ಲೆಯನ್ನು ರಾಜ್ಯದ ಉಪರಾಜಧಾನಿಯನ್ನಾಗಿ ಘೋಷಿಸಿ: ಮುಡುಬಿ ಗುಂಡೇರಾವ

ಕಲಬುರಗಿ: ಕಲಬುರಗಿ ನಗರವನ್ನು ಕೇವಲ ಪ್ರಾದೇಶಿಕ ಕೇಂದ್ರವಾಗಿ ನೋಡದೆ, ಈ ಭಾಗದ...

ಕಲಬುರಗಿ| ಶಿಕ್ಷಣದ ಜ್ಯೋತಿ ಹೊತ್ತಿಸಿದ ಮಹಾದೇವಪ್ಪ ರಾಂಪುರೆ: ಡಾ.ಮಹೇಶ ಗಂವ್ಹಾರ

ಕಲಬುರಗಿ: ಅಂದಿನ ಹೈದ್ರಾಬಾದ್ ಕರ್ನಾಟಕದಲ್ಲಿ ಶಿಕ್ಷಣದ ಜ್ಯೋತಿ ಹೊತ್ತಿಸಿದ ಪುಣ್ಯಾತ್ಮ ಮಹಾದೇವಪ್ಪ...