ಕಲಬುರಗಿ| ನ.8 ರಂದು ಕೇಂದ್ರೀಯ ವಿಶ್ವವಿದ್ಯಾಲಯದ 9ನೇ ಘಟಿಕೋತ್ಸವ: ಕುಲಪತಿ

Date:

Share post:

ಕಲಬುರಗಿ: ಜಿಲ್ಲೆಯ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯ (ಸಿಯುಕೆ)ದ 9ನೇ ಘಟಿಕೋತ್ಸವ ಕಾರ್ಯಕ್ರಮವನ್ನು ನವೆಂಬರ 8ರಂದು ಬೆಳಗ್ಗೆ 10 ಗಂಟೆಗೆ ವಿವಿ ಆವರಣದಲ್ಲಿ ಹಮ್ಮಿಕೊಳ್ಳಲಾಗಿದ್ದು, ಸುಪ್ರಿಂಕೋರ್ಟ್ ವಿಶ್ರಾಂತ ನ್ಯಾಯಮೂರ್ತಿ ಹಾಗೂ ಭಾರತದ ಕಾನೂನು ಆಯೋಗದ ಅಧ್ಯಕ್ಷ ದಿನೇಶ್ ಮಹೇಶ್ವರಿ ಅವರು ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಘಟಿಕೋತ್ಸವ ಭಾಷಣ ಮಾಡಲಿದ್ದಾರೆ ಎಂದು ಸಿಯುಕೆಯ ಕುಲಪತಿ ಪ್ರೊ. ಬಟ್ಟು ಸತ್ಯನಾರಾಯಣ ತಿಳಿಸಿದರು.

ಇಂದು ಸಿಯುಕೆಯಲ್ಲಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು ಈ ಬಾರಿ ವಿಶ್ವವಿದ್ಯಾಲಯದ 27 ಪದವಿ ಕೋರ್ಸಗಳಲ್ಲಿ ಪ್ರಥಮ ರ್ಯಾಂಕ್ ಪಡೆದ ತಲಾ ಒಬ್ಬ ವಿದ್ಯಾರ್ಥಿಗೆ ಚಿನ್ನದ ಪದಕ ಪಡೆಯಲಿದ್ದಾರೆ. ಇದರೊಂದಿಗೆ ಎಲೆಕ್ಟ್ರಾನಿಕ್ಸ ಮತ್ತು ಕಮುನಿಕೆಶನ್ ಇಂಜಿನಿಯರಿಂಗನ ವಿದ್ಯಾರ್ಥಿ ಶಿವಾ ಶಾಹಿತಿ ಸೋಮಿಶೆಟ್ಟಿ, ಪ್ರೊ. ಎ.ಎಂ.ಪಠಾಣ ಚಿನ್ನದ ಪದಕ ಪಡೆಯಲಿದ್ದಾನೆ. 18 ವಿದ್ಯಾರ್ಥಿಗಳು ಪಿಹೆಚ್‍ಡಿ ಪದವಿ ಹಾಗೂ ಒಬ್ಬ ವಿದ್ಯಾರ್ಥಿ ಎಂಫಿಲ್ ಪದವಿ ಪ್ರದಾನ ಮಾಡಲಾಗುವುದು ಎಂದು ಹೇಳಿದರು.

ಒಟ್ಟು 756 ವಿದ್ಯಾರ್ಥಿಗಳು ಪದವಿ ಪಡೆಯಲು ಅರ್ಹರಿದ್ದು ಅದರಲ್ಲಿ 628 ವಿದ್ಯಾರ್ಥಿಗಳು ಪದವಿ ಪಡೆಯಲು ಅರ್ಜಿ ಸಲ್ಲಿಸಿದ್ದಾರೆ. ಈ ಪೈಕಿ 487 ವಿದ್ಯಾರ್ಥಿಗಳು ಭೌತಿಕವಾಗಿ ಹಾಗೂ 141 ವಿದ್ಯಾರ್ಥಿಗಳು ಅನುಪಸ್ಥಿತಿಯಲ್ಲಿ ತಮ್ಮ ಪದವಿ ಪ್ರಮಾಣ ಪತ್ರಗಳನ್ನು ಸ್ವೀಕರಿಸಲಿದ್ದಾರೆ ಎಂದು ಅವರು ಹೇಳಿದರು.

ಇದೆ ಸಂದರ್ಭದಲ್ಲಿ ವಿಶ್ವವಿದ್ಯಾಲಯದ ಪ್ರಗತಿಯ ಕುರಿತು ಮಾತನಾಡಿದ ಅವರು ಶಿಕ್ಷಕರು ವಿಶ್ವವಿದ್ಯಾಲಯಗಳ ಜೀವಾಳ. ಇಲ್ಲಿವರೆಗೆ 176 ಖಾಯಂ ಶಿಕ್ಷಕರನ್ನು ನೇಮಕ ಮಾಡಲಾಗಿದೆ. ಸರಕಾರ 29 ಶಿಕ್ಷಕರ ನೇಮಕಾತಿಗೆ ಅನುಮತಿಯೊಂದಿಗೆ ಗ್ರಂಥಾಲಯ ವಿಜ್ಞಾನ, ಜೀವಶಾಸ್ತ್ರ ಮತ್ತು ಪ್ರಾಣಿಶಾಸ್ತ್ರ, ಸಂಖ್ಯಾ ಶಾಸ್ತ್ರ, ಕಂಪೂಟರ ವಿಜ್ಞಾನ, ಜೆನೆಟಿಕ್ಸ ಮತ್ತು ಜಿನೋಮ ಮತ್ತು ಬಿಎ ಎಲ್‍ಎಲ್‍ಬಿ ಸೇರಿ 7 ಹೊಸ ವಿಭಾಗಗಳಿಗೆ ಅನುಮತಿ ನೀಡಿದ್ದು ಈಗಾಗಲೇ ನೇಮಕಾತಿಗಾಗಿ ಅಧಿಸೂಚನೆಯನ್ನು ಹೋರಡಿಸಲಾಗಿದ್ದು ಈ ಕೋರ್ಸಗಳನ್ನು 2026-27 ಸಾಲಿನಿಂದ ಪ್ರಾರಂಭಿಸಲಾಗುವುದು. ಇದಲ್ಲದೆ ಮತ್ತೆ ನಾವು ಇನ್ನೂ 7 ಹೊಸ ವಿಭಾಗಗಳಿಗೆ ಬೇಡಿಕೆ ಸಲ್ಲಿಸಲಿದ್ದೇವೆ ಎಂದು ತಿಳಿಸಿದರು.

ಸಂಶೋಧನೆ ಮತ್ತು ನಾವಿನ್ಯತೆಯ ಕುರಿತು ಮಾತನಾಡಿದ ಅವರು ವಿಶ್ವವಿದ್ಯಾಲಯವು ಎ.ಎನ್ ಆರ್. ಎಫ್ ಪೇರ್ಡ ಪೆÇ್ರೀಜೆಕ್ಟನಲ್ಲಿ ರೂ.12.1 ಕೋಟಿ ಅನುದಾನ ಪಡೆದಿದೆ. ಅದೇ ರೀತಿ ಸುಸ್ಥಿರ ಕ್ಯಾಂಪಸ್ ಅಭಿವೃದ್ದಿಗಾಗಿ ರೂ 1.2 ಕೋಟಿ, ವಿಶ್ವೇಶ್ವರಯ್ಯ ಸಂಶೋಧನಾ ಯೋಜನೆಯಲ್ಲಿ ರೂ. 3 ಕೋಟಿ, ಸಿರಿಧಾನ್ಯ ಸಂಶೋಧನೆಗಾಗಿ ರೂ. 30 ಲಕ್ಷ ಹಾಗೂ ಐಸಿಎಆರ್ ನಿಂದ 7 ಯೋಜನೆಗಳಿಗೆ 1.05 ಕೋಟಿ ಅನುದಾನ ಪಡೆದಿದೆ ಎಂದರು

ಮೂಲ ಸೌಕರ್ಯದ ಅಭಿವೃದ್ಧಿಗೆ ಸಂಬಂಧಿಸಿದಂತೆ ವಿವಿಯಲ್ಲಿ ಶೈಕ್ಷಣಿಕ ಸಮುಚ್ಚಯ, ಶಿಕ್ಷಕರ ವಸತಿ ಗೃಹ ಹಾಗೂ 1000 ವಿದ್ಯಾರ್ಥಿಗಳ ವಸತಿ ನಿಲಯಕ್ಕಾಗಿ ಸರಕಾರ 201 ಕೋಟಿ ರೂ ಗಳನ್ನು ನೀಡಿದೆ. ಈಗಾಗಲೇ ಟೆಂಡರ ಕರೆಯಲಾಗಿದ್ದು ಮುಂದಿನ 15 ತಿಂಗಳಲ್ಲಿ ಇವು ಪೂರ್ಣಗೊಳ್ಳಲಿವೆ ಎಂದರು.

ಶಿಕ್ಷಣದ ಗುಣಮಟ್ಟ ಹೆಚ್ಚಳಕ್ಕೆ ಭಾರತೀಯ ಭೋಗೋಳ ಸಂಸ್ಥೆ, ಅಪ್ರೆಂಟಿಶಿಫ್ ಬೋರ್ಡ್, ಕೀಸೈಟ್ ಟೆಕ್ನಾಲೋಜಿ, ಲಾಟ್ವಿಯ ವಿಶ್ವವಿದ್ಯಾಲಯ ಹೀಗೆ ಅನೇಕ ಸಂಸ್ಥೆಗಳೊಂದಿಗೆ ಶೈಕ್ಷಣಿಕ ಒಡಂಬಡಿಕೆ ಮಾಡಿಕೊಳ್ಳಲಾಗಿದೆ ಎಂದರು.

ಬೆಂಗಳೂರಿನಲ್ಲಿ ಪ್ರಾರಂಭಿಸಲು ಉದ್ದೇಶಿಸಿದ್ದ ಸೆಂಟರ್ ಆಫ್ ಎಕ್ಸಲೆನ್ಸನ್ನು ಇಲ್ಲಿಯೇ ಈ ಭಾಗದಲ್ಲಿ ಸಂಶೋಧನೆಗೆ ಒತ್ತು ಕೊಡಲು (ಸಿಯುಕೆ ಕ್ಯಾಂಪಸ್ನಲ್ಲಿ) ಪ್ರಾರಂಭಿಸಲಾಗುತ್ತಿದೆ, ಇದರೊಂದಿಗೆ ಪಿಸಿಬಿ ಲ್ಯಾಬ್ ಪ್ರಾರಂಭಿಸಲಾಗಿದೆ, ಇನ್ಸ್ಟ್ರುಮೆಂಟೆಶನ್ ಲಾಬ್‍ಗಳನ್ನು ಪ್ರಾರಂಭಿಸಲಾಗಿದೆ ಎಂದರು.

ಈ ಎಲ್ಲಾ ಕಾರ್ಯಗಳಿಂದ ನಮ್ಮ ವಿಶ್ವವಿದ್ಯಾಲಯ ರಾಷ್ಟ್ರ ಮಟ್ಟದ ಎನ್ ಐ ಆರ್ ಎಫ್ ರ್ಯಾಂಕ್ ನಲ್ಲಿ 150-200 ರ್ಯಾಂಕ್ ಮದ್ಯದಲ್ಲಿ ಸ್ಥಾನ ಪಡೆದಿದೆ. ಇದು ನಮ್ಮ ವಿಶ್ವವಿದ್ಯಾಲಯದ ಹೆಚ್ಚುತ್ತಿರುವ ಶೈಕ್ಷಣಿಕ ಗುಣಮಟ್ಟದ ಸಂಕೇತವಾಗಿದೆ. ಆದರೆ ನಮ್ಮ ವಿವಿಯಲ್ಲಿ ಕರ್ನಾಟಕದ ವಿದ್ಯಾರ್ಥಿಗಳ ಸಂಖ್ಯೆ ಬಹಳ ಕಡಿಮೆ ಇದೆ ಎಂದು ಕಳವಳ ವ್ಯಕ್ತಪಡಿಸಿದ ಅವರು ಅದಕ್ಕಾಗಿ ಕಳೆದ ವರ್ಷ ಕರ್ನಾಟಕದ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಿಸಲು ರಾಜ್ಯದ್ಯಂತ ವಿವಿಧ ಮುಖ್ಯ ನಗರಗಳಲ್ಲಿ 10 ಪತ್ರಿಕಾ ಘೋಷ್ಠಿಗಳನ್ನು ಮಾಡಿದ್ದೇವೆ. ಆದರೂ ನೀರೀಕ್ಷಿತ ಸಂಖ್ಯೆಯಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಾಗಿಲ್ಲ. ಮಾಧ್ಯಮಗಳು ಹೆಚ್ಚು ಪ್ರಚಾರ ಕೊಟ್ಟು ಹೆಚ್ಚು ಹೆಚ್ಚು ವಿದ್ಯಾರ್ಥಿಗಳು ಬರುವಂತೆ ಮಾಡಬೇಕು ಎಂದು ಮನವಿ ಮಾಡಿದರು.

ಪತ್ರಿಕಾ ಗೋಷ್ಠಿಯಲ್ಲಿ ಪ್ರಭಾರ ಕುಲಸಚಿವ ಡಾ.ಚನ್ನವೀರ ಆರ್.ಎಂ., ಪರೀಕ್ಷಾ ನಿಯಂತ್ರಣಾಧಿಕಾರಿ ಕೋಟಾ ಸಾಯಿಕೃಷ್ಣ, ಸಾರ್ವಜನಿಕ ಸಂಪರ್ಕಾಧಿಕಾರಿ ಡಾ.ಗಣಪತಿ ಬಿ ಸಿನ್ನೂರ, ಘಟಿಕೋತ್ಸವ ಮಾಧ್ಯಮ ಉಸ್ತುವಾರಿ ಡಾ.ಜೋಹೆರ್, ಸಹಾಯಕ ಸಾರ್ವಜನಿಕ ಸಂಪರ್ಕಾಧಿಕಾರಿ ಡಾ.ಪ್ರಕಾಶ ಬಾಳಿಕಾಯಿ ಉಪಸ್ಥಿತರಿದ್ದರು.

Share post:

spot_imgspot_img

Popular

More like this
Related

ಕಲಬುರಗಿ| ಮಾನವ ಹಕ್ಕುಗಳ ಸಂರಕ್ಷಣೆ ಅಗತ್ಯ: ಕರುಣಾ ಪಾಟೀಲ

ಕಲಬುರಗಿ: ಇಂದಿನ ಆಧುನಿಕ ಯುಗದಲ್ಲಿ ಜನರು ಯಂತ್ರಗಳಿಗೆ ತಮ್ಮ ಸಮಯ ಮೀಸಲಿಟ್ಟಿದ್ದಾರೆ,...

ಕಲಬುರಗಿ| ಭೀಕರ ಅಪಘಾತ; ಸ್ಥಳದಲ್ಲೇ ಮೂವರ ಸಾವು; ಮೂವರು ಗಂಭೀರ

ಕಲಬುರಗಿ: ಜೀಪ್ ಹಾಗೂ ಬಸ್ ಮಧ್ಯೆ ಸಂಭವಿಸಿದ ಭೀಕರ ಅಪಘಾತದಲ್ಲಿ ಸ್ಥಳದಲ್ಲೇ...

ಕಲಬುರಗಿ| ಬೆಂಬಲ ಬೆಲೆ ಯೋಜನೆಯಡಿ ಹೆಸರು, ಉದ್ದು, ಸೂರ್ಯಕಾಂತಿ, ಸೋಯಾಬಿನ್ ಖರೀದಿ: ಬಿ.ಫೌಜಿಯಾ ತರನ್ನುಮ್

ಕಲಬುರಗಿ: ಪ್ರಸಕ್ತ 2025-26ನೇ ಸಾಲಿನ ಬೆಂಬಲ ಬೆಲೆ ಯೋಜನೆಯಡಿ ಮುಂಗಾರು ಹಂಗಾಮಿನ...

ಕಲಬುರಗಿ| ಅಂಬೇಡ್ಕರ್ ರವರನ್ನು ನಿಜವಾಗಿಯೂ ಗೌರವಿಸಿದ್ದು ಬಿಜೆಪಿ, ಕಾಂಗ್ರೆಸ್ ಅಲ್ಲ: ಅಶೋಕ್ ಬಗಲಿ

ಕಲಬುರಗಿ: ಆಧುನಿಕ ಭಾರತದ ನಿರ್ಮಾತೃ, ಸಂವಿಧಾನ ಶಿಲ್ಪ ಭಾರತರತ್ನ ಬಾಬಾಸಾಹೇಬ್ ಅಂಬೇಡ್ಕರ್...