BREAKING NEWS: ಕಲಬುರಗಿ| ಕಬ್ಬು ಕಟಾವು; 3,400 ರೂ. ನೀಡಲು ಕಾರ್ಖಾನೆಗಳು ಒಪ್ಪಿಗೆ: ಡಿಸಿ ಇಕ್ರಮ್ ಶರೀಫ್

Date:

Share post:

ಕಲಬುರಗಿ: ಪ್ರಸಕ್ತ 2026-27ನೇ ಸಾಲಿನಲ್ಲಿ ಜಿಲ್ಲೆಯಲ್ಲಿ ಬೆಳೆಯಲಾದ ಕಬ್ಬು ರೈತರಿಂದ ಖರೀದಿಗೆ ಸಂಬಂಧಪಟ್ಟಂತೆ ರೈತರ ಬೇಡಿಕೆಯಂತೆ ಗುರುವಾರ ಕಾರ್ಖಾನೆಗಳ ಪ್ರತಿನಿಧಿಗಳೊಂದಿಗೆ ಸಭೆ ನಡೆಸಲಾದ ಪರಿಣಾಮವಾಗಿ ಪ್ರತಿ ಟನ್ ಗೆ 3,400 ರೂ. ನೀಡಲು ಜಿಲ್ಲೆಯ ನಾಲ್ಕು ಸಕ್ಕರೆ ಕಾರ್ಖಾನೆಗಳು ಒಪ್ಪಿಗೆ ಸೂಚಿಸಿವೆ ಎಂದು ಜಿಲ್ಲಾಧಿಕಾರಿ ಇಕ್ರಮ್ ಶರೀಫ್ ತಿಳಿಸಿದ್ದಾರೆ.

ಪ್ರತಿ ಟನ್‌ ಕಬ್ಬಿಗೆ ದರ ನಿಗದಿ ವಿಚಾರಕ್ಕೆ ಎರಡು ಬಾರಿ ರೈತರು-ಕಾರ್ಖಾನೆ ಪ್ರತಿನಿಧಿಗಳೊಂದಿಗೆ ಸಭೆ ನಡೆಸಲಾಗಿದ್ದರು ದರ ಕುರಿತು ಸ್ಪಷ್ಟತೆ ಇರಲಿಲ್ಲ. ಕಳೆದ ಸಭೆಯಲ್ಲಿ‌ 3,200 ರೂ. ನೀಡಲು ಕಾರ್ಖಾನೆಗಳು ಒಪ್ಪಿಗೆ ಸೂಚಿಸಿದ್ದರು ರೈತರು ಇದಕ್ಕೆ ಒಪ್ಪಿರಲಿಲ್ಲ.

ಈ ನಿಟ್ಟಿನಲ್ಲಿ ಗುರುವಾರ ಸತತ ಸಂಧಾನದ ಮಾತುಕತೆ ಪರಿಣಾಮವಾಗಿ ಜಿಲ್ಲೆಯ ಉಗಾರ್ ಶುಗರ್ ವರ್ಕ್ಸ್ ಲಿ., ಕೆ.ಪಿ.ಆರ್ ಶುಗರ‍್ಸ್ & ಅಪ್ಪಾರೆಲ್ಸ್ ಲಿ., ಶ್ರೀ ರೇಣುಕಾ ಶುಗರ‍್ಸ್ ಲಿ. ಹಾಗೂ ಎನ್.ಎಸ್.ಎಲ್. ಶುಗರ‍್ಸ್ ಕಾರ್ಖಾನೆಗಳು ರೈತರಿಗೆ ಬೇಡಿಕೆಗೆ ಸ್ಪಂದಿಸಿದ್ದು, ಖರೀದಿಸುವ ಕಬ್ಬಿಗೆ ಮೊದಲನೇ ಕಂತಿನಲ್ಲಿ 3,200 ರೂ. ಮತ್ತು ಎರಡನೇ ಕಂತಿನಲ್ಲಿ ಉಳಿದ 200 ರೂ. ರೈತರಿಗೆ ನೀಡಲು ಸಮ್ಮತಿ ಸೂಚಿಸಿದ್ದಾರೆ ಎಂದು ಇಕ್ರಮ್ ಶರೀಫ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Share post:

spot_imgspot_img

Popular

More like this
Related

ಕಲಬುರಗಿ| ನ.14ರಂದು ‘ಕಲ್ಯಾಣ ಕರ್ನಾಟಕ ಸ್ಟಾರ್ಟ್‌ಅಪ್ ಸಂವಾದ, ನೂತನ ಉದ್ಯಮಶೀಲತಾ ಕೇಂದ್ರ ಉದ್ಘಾಟನೆ: ಡಿಸಿ ಇಕ್ರಮ್ ಶರೀಫ್ 

ಕಲಬುರಗಿ: ಬೆಂಗಳೂರಿನ ಆಚೆಗೂ ಐಟಿ-ಬಿಟಿ ಹಾಗೂ ನವೋದ್ಯಮ ವಲಯವನ್ನು ವಿಸ್ತರಿಸುವ ರಾಜ್ಯ...

ಕಲಬುರಗಿ: ಕಲ್ಯಾಣ ಕರ್ನಾಟಕದ ಜಿಲ್ಲೆಗಳಲ್ಲಿ 50 ಕೋಟಿ ಅಂದಾಜು ವೆಚ್ಚದ ‘ಕಲಬುರಗಿ ಬಯೋ-ಇಕಾನಮಿ ಮಿಷನ್ 2026’ ಪ್ರಸ್ತಾವನೆ: ಪ್ರಿಯಾಂಕ್ ಖರ್ಗೆ 

ಕಲಬುರಗಿ: ಕಲ್ಯಾಣ ಕರ್ನಾಟಕದ ಏಳು ಜಿಲ್ಲೆಗಳಲ್ಲಿರುವ ಸ್ಥಳೀಯ ಜೈವಿಕ ಸಂಪನ್ಮೂಲಗಳನ್ನು ವೈಜ್ಞಾನಿಕವಾಗಿ...