ಕಲಬುರಗಿ| ಹೆಚ್ಚು ಗಳಿಕೆಯ ಆಮಿಷ: ನಿವೃತ್ತ ನೌಕರನಿಗೆ ಕೋಟಿ ವಂಚನೆ

Date:

Share post:

ಕಲಬುರಗಿ: ಹೆಚ್ಚಿನ ಹಣ ಗಳಿಕೆಯ ಆಮಿಷವೊಡ್ಡಿ ಹೂಡಿಕೆಗೆ ಪ್ರಚೋದಿಸಿದ ಸೈಬರ್ ವಂಚಕರು, ಜೆಸ್ಕಾಂ ನಿವೃತ್ತ ನೌಕರರೊಬ್ಬರಿಗೆ 2.24 ಕೋಟಿ ರೂ. ವಂಚಿಸಿರುವ ಘಟನೆ ನಗರದಲ್ಲಿ ಬೆಳಕಿಗೆ ಬಂದಿದೆ.

ನಗರದ ಅಕ್ಕಮಹಾದೇವಿ ಕಾಲೊನಿಯ ನಿವಾಸಿ, ಜೆಸ್ಕಾಂ ನಿವೃತ್ತ ನೌಕರರಾಗಿರುವ 63 ವರ್ಷದ ದತ್ತಪ್ಪ ಸುರಪುರ ವಂಚನೆಗೆ ಒಳಗಾದವರು ಎಂದು ತಿಳಿದುಬಂದಿದೆ.

‘ಸಾಮಾಜಿಕ ಜಾಲತಾಣದಲ್ಲಿ ವೀಡಿಯೊ ರೀಲ್ಸ್ ನೋಡುತ್ತಿದ್ದಾಗ ಕಳೆದ ವರ್ಷ ಜೂನ್ 11ರಂದು ‘ಆಟೊ ಟ್ರೇಡಿಂಗ್’ ಜಾಹೀರಾತು ಕಾಣಿಸಿತ್ತು. ಅದರ ಮೇಲಿನ ಲಿಂಕ್ ಕ್ಲಿಕ್ ಮಾಡಿ, ನನ್ನ ವೈಯಕ್ತಿಕ ಮಾಹಿತಿ ನಮೂದಿಸಿದೆ. ಬಳಿಕ ಅರುಣ ಜೋಶಿ ಎಂಬಾತ ‘ಕ್ವಾಂಟಾ ಪಲ್ಸ್‌’ನಲ್ಲಿ ಹೂಡಿಕೆಗೆ ಉತ್ತೇಜಿಸಿದ್ದಾನೆ. ಆರಂಭದಲ್ಲಿ ₹12 ಸಾವಿರ ಹೂಡಿಕೆ ಮಾಡಿದೆ. ನಿತ್ಯ ಆಟೊ ಟ್ರೇಡಿಂಗ್ ಲಾಭವಾಗಿ ₹500, ₹800 ಖಾತೆಗೆ ಬರುತ್ತಿತ್ತು’, ಹೀಗೆ ಹೂಡಿಕೆಯ ನೆಪದಲ್ಲಿ ಹಣ ವಂಚನೆ ಮಾಡಲಾಗಿದೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.

ಈ ಕುರಿತು ಸೆನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Share post:

spot_imgspot_img

Popular

More like this
Related

ಕಲಬುರಗಿ| ಸರ್ಕಾರಿ ಅಭಿಯೋಜಕರಿಗೆ ₹5 ಸಾವಿರ ಲಂಚ ನೀಡಲು ಯತ್ನಿಸಿದ ತಂದೆ-ಮಗ ಲೋಕಾ ವಶಕ್ಕೆ

ಕಲಬುರಗಿ: ನ್ಯಾಯಾಲಯದಲ್ಲಿ ವಿಚಾರಣೆಯಲ್ಲಿರುವ ಎಸ್‌ಸಿ/ಎಸ್‌ಟಿ ಪ್ರಕರಣದಲ್ಲಿ ಆರೋಪಿತನಿಗೆ ಅನುಕೂಲವಾಗುವಂತೆ ಸಹಕರಿಸುವ ಉದ್ದೇಶದಿಂದ...

ಕಲಬುರಗಿ| ಆಸ್ತಿಗಾಗಿ ಸಂಬಂಧಿಯ ತಲೆ ಮೇಲೆ ಕಲ್ಲು ಎತ್ತಿ ಹಾಕಿ ಕೊಲೆ

ಕಲಬುರಗಿ: ಆಸ್ತಿಗಾಗಿ ವ್ಯಕ್ತಿಯೊಬ್ಬ ತನ್ನ ಸಂಬಂಧಿಯ ತಲೆ ಮೇಲೆ ಕಲ್ಲು ಎತ್ತಿಹಾಕಿ...

ಕಲಬುರಗಿ| ಬ್ರೇನ್ ಟಿಬಿಯಿಂದ ಬಳಲುತ್ತಿದ್ದ ತಾಯಿಗೆ ಯಶಸ್ವಿ ಚಿಕಿತ್ಸೆ ನೀಡಿದ ಜೀವ ಕಾಪಾಡಿದ ಬಸವೇಶ್ವರ ಆಸ್ಪತ್ರೆ ವೈದ್ಯರು

ಕಲಬುರಗಿ: ಹೈದ್ರಾಬಾದ ಕರ್ನಾಟಕ ಶಿಕ್ಷಣ ಸಂಸ್ಥೆಯ ಬಸವೇಶ್ವರ ಬೋಧನಾ ಹಾಗೂ ಸಾರ್ವಜನಿಕ...

ಕಲಬುರಗಿ| ಕಾಳ‌ ಸಂತೆಯಲ್ಲಿ ಸಿಲಿಂಡರ್ ಮಾರಾಟವಾದರೆ ಡಿಸ್ಟ್ರಿಬೂಟರ್ ಮೇಲೆ ಕ್ರಮ: ಜಿಲ್ಲಾಧಿಕಾರಿ ಇಕ್ರಮ್‌ ಶರೀಫ್

ಕಲಬುರಗಿ: ಮದ್ಯ ಪ್ರಾಚ್ಯ ದೇಶದಲ್ಲಿನ‌ ಬಿಕ್ಕಟ್ಟಿನ ನಡುವೆ ಜಿಲ್ಲೆಯಲ್ಲಿ ಎಲ್ಲಿಯೆ ಕಾಳ...