ಕಲಬುರಗಿ| ಹೆಸರು, ಉದ್ದು, ಸೂರ್ಯಕಾಂತಿ ಕಾಳು ಹಾಗೂ ಸೋಯಾಬಿನ್ ಮಾರಾಟ ಮಾಡಲು ಕಾಲಾವಧಿ ವಿಸ್ತರಣೆ: ಡಿಸಿ ಫೌಜಿಯಾ ತರನ್ನುಮ್

Date:

Share post:

ಕಲಬುರಗಿ: ಪ್ರಸಕ್ತ 2025-26ನೇ ಸಾಲಿನ ಕೇಂದ್ರ ಸರ್ಕಾರದ ಬೆಂಬಲ ಬೆಲೆ ಯೋಜನೆಯಡಿ ಮುಂಗಾರು ಹಂಗಾಮಿನ ಎಫ್.ಎ.ಕ್ಯೂ. ಗುಣಮಟ್ಟದ ಹೆಸರು ಕಾಳು, ಉದ್ದಿನ ಕಾಳು, ಸೂರ್ಯಕಾಂತಿ ಹಾಗೂ ಸೋಯಾಬಿನ್ ಮಾರಾಟ ಮಾಡಲು ಈಗಾಗಲೇ ನಿಗದಿತ ಅವಧಿಯಲ್ಲಿ ನೊಂದಾಯಿಸಿಕೊಂಡಿರುವ ರೈತರು ಮಾರಾಟ ಮಾಡುವ ಕಾಲಾವಧಿ ವಿಸ್ತರಿಸಲಾಗಿದ್ದು, ಜಿಲ್ಲೆಯ ರೈತರು ಇದರ ಸದುಪಯೋಗ ಪಡೆದುಕೊಳ್ಳಬೇಕೆಂದು ಜಿಲ್ಲಾಧಿಕಾರಿ ಬಿ. ಫೌಜಿಯಾ ತರನ್ನುಮ್ ಅವರು ತಿಳಿಸಿದ್ದಾರೆ.

ಹೆಸರು ಕಾಳು ಪ್ರತಿ ಕ್ವಿಂಟಾಲ್‍ಗೆ 8,768 ರೂ., ಉದ್ದಿನ ಕಾಳು ಪ್ರತಿ ಕ್ವಿಂಟಾಲ್‍ಗೆ 7,800 ರೂ. ಮತ್ತು ಸೂರ್ಯಕಾಂತಿ ಪ್ರತಿ ಕ್ವಿಂಟಾಲ್‍ಗೆ 7,721 ರೂ. ಗಳಂತೆ ಖರೀದಿಸಲಾಗುತ್ತಿದ್ದು, ಈ ಉತ್ಪನ್ನಗಳ ಮಾರಾಟ ಮಾಡಲು ಇದೇ ಜನವರಿ 22ರ ವರೆಗೆ ಹಾಗೂ ಸೋಯಾಬೀನ್ ಪ್ರತಿ ಕ್ವಿಂಟಾಲ್‍ಗೆ 5,328 ರೂ. ಗಳಂತೆ ಮಾರಾಟ ಮಾಡಲು ಜನವರಿ 26 ರವರೆಗೆ ಕಾಲಾವಧಿ ವಿಸ್ತರಿಸಲಾಗಿದೆ.

ಜಿಲ್ಲೆಯ ರೈತರು ಸಮೀಪದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳಿಗೆ (ಪಿ.ಎ.ಸಿ.ಎಸ್) (PACS) ಹಾಗೂ (ಎಫ್.ಪಿ.ಓ.) FPO ಗಳಿಗೆ ಭೇಟಿ ನೀಡಿ ತಾವು ಬೆಳೆದ ಹೆಸರು ಕಾಳು, ಉದ್ದಿನ ಕಾಳು, ಸೂರ್ಯಕಾಂತಿ ಹಾಗೂ ಸೋಯಾಬೀನ ನಿಗದಿತ ಅವಧಿಯಲ್ಲಿ ಮಾರಾಟ ಮಾಡಬೇಕು.

ಹೆಚ್ಚಿನ ಮಾಹಿತಿಗಾಗಿ ಉದ್ದಿನ ಕಾಳು ಮತ್ತು ಸೋಯಾಬೀನ್ ಮಾರಾಟಕ್ಕೆ ಕೆ.ಎಸ್.ಸಿ.ಎಮ್.ಎಫ್. ಮೊಬೈಲ್ ಸಂಖ್ಯೆ 9449864446, ಹೆಸರು ಕಾಳು ಮಾರಾಟಕ್ಕೆ ಕೆ.ಎಸ್.ಪಿ.ಎ.ಎಮ್.ಎಲ್. ಮೊಬೈಲ್ ಸಂಖ್ಯೆ 9964474444 ಹಾಗೂ ಸೂರ್ಯಕಾಂತಿ ಮಾರಾಟಕ್ಕೆ ಕೆ.ಓ.ಎಫ್. ಮೊಬೈಲ್ ಸಂಖ್ಯೆ. 9591812142 ಸಂಪರ್ಕಿಸಲು ಕೋರಿದೆ.

Share post:

spot_imgspot_img

Popular

More like this
Related

ಕಲಬುರಗಿಯಲ್ಲಿ ಜೋಯಾಲುಕ್ಕಾಸ್‌ನ ‘ಬ್ರಿಲಿಯನ್ಸ್ ಡೈಮಂಡ್ ಜ್ಯುವೆಲ್ಲರಿ ಶೋ’

ಕಲಬುರಗಿ: ಜಗತ್ತಿನ ಪ್ರಸಿದ್ಧ ಜ್ಯುವೆಲ್ಲರಿ ಬ್ರ್ಯಾಂಡ್ ಜೋಯಾಲುಕ್ಕಾಸ್, ಕಲಬುರಗಿ ನಗರದ ತನ್ನ...

ಕಲಬುರಗಿ| ಬಿ.ನಾಗೇಂದ್ರ ಅವರನ್ನು ಸಂಪುಟದಿಂದ ಕೈಬಿಡಿ: ರಾಜಕುಮಾರ್ ಪಾಟೀಲ್ ತೆಲ್ಕೂರ್

ಕಲಬುರಗಿ: ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ನಡೆದ ಬಹುಕೋಟಿ ರೂಪಾಯಿ ಹಗರಣಕ್ಕೆ...

Kalaburagi| ರಾಜ್ಯ ನೀತಿ ಮತ್ತು ಯೋಜನಾ ಆಯೋಗದ ಉಪಾಧ್ಯಕ್ಷ ಸ್ಥಾನಕ್ಕೆ ಬಿ.ಆರ್ ಪಾಟೀಲ್ ರಾಜೀನಾಮೆ 

ಕಲಬುರಗಿ: ಕರ್ನಾಟಕ ರಾಜ್ಯ ನೀತಿ ಮತ್ತು ಯೋಜನಾ ಆಯೋಗದ ಉಪಾಧ್ಯಕ್ಷ ಸ್ಥಾನಕ್ಕೆ...

ಕಲಬುರಗಿ: 9,950ರೂ. ಲಂಚ ಸ್ವೀಕರಿಸುತ್ತಿದ್ದ ವೇಳೆ ಗ್ರಾಮ ಪಂಚಾಯಿತಿ ಕಾರ್ಯದರ್ಶಿ ಲೋಕಾಯುಕ್ತ ಬಲೆಗೆ

ಕಲಬುರಗಿ: ಆಸ್ತಿ ವರ್ಗಾವಣೆಗೆ ಸಂಬಂಧಿಸಿದ ಕಡತವನ್ನು ವಿಲೇವಾರಿ ಮಾಡಲು ಲಂಚ ಪಡೆಯುತ್ತಿದ್ದ...