ಕಲಬುರಗಿ| ಬೆಂಬಲ ಬೆಲೆ ಯೋಜನೆಯಡಿ ಹೆಸರು, ಉದ್ದು, ಸೂರ್ಯಕಾಂತಿ, ಸೋಯಾಬಿನ್ ಖರೀದಿ: ಬಿ.ಫೌಜಿಯಾ ತರನ್ನುಮ್

Date:

Share post:

ಕಲಬುರಗಿ: ಪ್ರಸಕ್ತ 2025-26ನೇ ಸಾಲಿನ ಬೆಂಬಲ ಬೆಲೆ ಯೋಜನೆಯಡಿ ಮುಂಗಾರು ಹಂಗಾಮಿನ ಎಫ್.ಎ.ಕ್ಯೂ ಗುಣಮಟ್ಟದ ಹೆಸರು, ಉದ್ದು, ಸೂರ್ಯಕಾಂತಿ ಹಾಗೂ ಸೋಯಾಬಿನ್ ಖರೀದಿಗೆ ನಿಗದಿಪಡಿಸಿದ ಗರಿಷ್ಠ ಕ್ವಿಂಟಾಲ್ ಮಿತಿ ಬದಲಾಗಿ ಫ್ರೂಟ್ಸ್ ತಂತ್ರಾಂಶದಲ್ಲಿ ಲಭ್ಯವಿರುವ ರೈತರ ಬೆಳೆಯ ಮಾಹಿತಿ ಆಧಾರದ ಮೇಲೆ ಎಕರೆಗೆ ಅನುಗುಣವಾಗಿ ಖರೀದಿಸಲಾಗುವುದು ಎಂದು ಜಿಲ್ಲಾಧಿಕಾರಿ ಬಿ.ಫೌಜಿಯಾ ತರನ್ನುಮ್ ತಿಳಿಸಿದ್ದಾರೆ.

ಈ ಹಿಂದೆ ಸರ್ಕಾರದ ಆದೇಶ ದಿ.25-09-2025 ಮತ್ತು 29-09-2025ರಲ್ಲಿ ಹೆಸರು ಕಾಳು ಪ್ರತಿ ಎಕರೆಗೆ 3 ಕ್ವಿಂಟಾಲ್‌ನಂತೆ ಪ್ರತಿ ರೈತನಿಂದ ಗರಿಷ್ಠ 15 ಕ್ವಿಂಟಾಲ್, ಉದ್ದು ಕಾಳು ಪ್ರತಿ ಎಕರೆಗೆ 5 ಕ್ವಿಂಟಾಲ್‌ನಂತೆ ಗರಿಷ್ಠ 30 ಕ್ವಿಂಟಾಲ್, ಸೂರ್ಯಕಾಂತಿ ಪ್ರತಿ ಎಕರೆಗೆ 4 ಕ್ವಿಂಟಾಲ್‌ನಂತೆ ಗರಿಷ್ಠ 20 ಕ್ವಿಂಟಾಲ್ ಹಾಗೂ ಸೋಯಾಬೀನ್ ಪ್ರತಿ ಎಕರೆಗೆ 5 ಕ್ವಿಂಟಾಲ್‌ನಂತೆ ಗರಿಷ್ಠ 20 ಕ್ವಿಂಟಾಲ್ ಖರೀದಿಗೆ ಆದೇಶಿಸಲಾಗಿತು. ಇದೀಗ ಸರ್ಕಾರ ಆದೇಶ ಮಾರ್ಪಡಿಸಿದ್ದು, ಅದರಂತೆ ಫ್ರೂಟ್ಸ್ ತಂತ್ರಾಂಶದಲ್ಲಿ ಲಭ್ಯವಿರುವ ರೈತರ ಬೆಳೆಯ ಮಾಹಿತಿ ಆಧಾರದ ಮೇಲೆ ಎಕರೆಗೆ ಅನುಗುಣವಾಗಿ ಖರೀದಿಸಲಾಗುತ್ತಿದೆ ಎಂದು ಅವರು ತಿಳಿಸಿದ್ದಾರೆ.

ಹೆಸರು- 8,768 ರೂ., ಉದ್ದಿನ ಕಾಳು-7,800 ರೂ., ಸೂರ್ಯಕಾಂತಿ-7,721 ರೂ. ಹಾಗೂ ಸೋಯಾಬೀನ್-5,328 ರೂ. ಪ್ರತಿ ಕ್ವಿಂಟಾಲ್ ದರದಲ್ಲಿ ಖರೀದಿಸಲಾಗುತ್ತದೆ. ಮಾರ್ಪಡಿಸಿದ ಖರೀದಿ ಪ್ರಮಾಣದಂತೆ ರೈತರು ಹೆಸರು, ಉದ್ದು, ಹಾಗೂ ಸೂರ್ಯಕಾಂತಿ ಉತ್ಪನ್ನ ನೋಂದಣಿಯನ್ನು ಡಿಸೆಂಬರ್ 13 ರೊಳಗೆ ಮಾಡಿ ಡಿಸೆಂಬರ್ 23 ರೊಳಗೆ ಮಾರಾಟ ಮಾಡಬೇಕು. ಅದೇ ರೀತಿ ಸೋಯಾಬೀನ್ ಉತ್ಪನ್ನ ಬೆಳೆದ ರೈತರು ಡಿಸೆಂಬರ್ 17 ರೊಳಗೆ ನೋಂದಣಿ ಮಾಡಿಕೊಂಡು ಡಿಸೆಂಬರ್ 27 ರೊಳಗೆ ಸಮೀಪದ ಕೃಷಿ ಪತ್ತಿನ ಸಹಕಾರ ಸಂಘ ಮತು ಎಫ್.ಪಿ.ಓ. ಖರೀದಿ ಕೇಂದ್ರದಲ್ಲಿ ಮಾರಾಟ ಮಾಡುವ ಮೂಲಕ ಯೋಜನೆ ಸೌಲಭ್ಯ ಪಡೆಯುವಂತೆ ರೈತ ಬಾಂಧವರಲ್ಲಿ ಡಿ.ಸಿ. ಮನವಿ ಮಾಡಿದ್ದಾರೆ.

ಉದ್ದಿನ ಕಾಳು ಮತ್ತು ಸೋಯಾಬೀನ್ ಖರೀದಿಗೆ ಮೊ. 9449864446, ಹೆಸರು ಕಾಳು ಖರೀದಿಗೆ 9964474444 ಹಾಗೂ ಸೂರ್ಯಕಾಂತಿ ಖರೀದಿಗೆ 9591812142 ಸಂಖ್ಯೆಗೆ ಸಂಪರ್ಕಿಸಿ ಹೆಚ್ಚಿನ ಮಾಹಿತಿ ಪಡೆಯಬಹುದಾಗಿದೆ.

Share post:

spot_imgspot_img

Popular

More like this
Related

ಕಲಬುರಗಿ| ಸರ್ಕಾರಿ ಅಭಿಯೋಜಕರಿಗೆ ₹5 ಸಾವಿರ ಲಂಚ ನೀಡಲು ಯತ್ನಿಸಿದ ತಂದೆ-ಮಗ ಲೋಕಾ ವಶಕ್ಕೆ

ಕಲಬುರಗಿ: ನ್ಯಾಯಾಲಯದಲ್ಲಿ ವಿಚಾರಣೆಯಲ್ಲಿರುವ ಎಸ್‌ಸಿ/ಎಸ್‌ಟಿ ಪ್ರಕರಣದಲ್ಲಿ ಆರೋಪಿತನಿಗೆ ಅನುಕೂಲವಾಗುವಂತೆ ಸಹಕರಿಸುವ ಉದ್ದೇಶದಿಂದ...

ಕಲಬುರಗಿ| ಆಸ್ತಿಗಾಗಿ ಸಂಬಂಧಿಯ ತಲೆ ಮೇಲೆ ಕಲ್ಲು ಎತ್ತಿ ಹಾಕಿ ಕೊಲೆ

ಕಲಬುರಗಿ: ಆಸ್ತಿಗಾಗಿ ವ್ಯಕ್ತಿಯೊಬ್ಬ ತನ್ನ ಸಂಬಂಧಿಯ ತಲೆ ಮೇಲೆ ಕಲ್ಲು ಎತ್ತಿಹಾಕಿ...

ಕಲಬುರಗಿ| ಬ್ರೇನ್ ಟಿಬಿಯಿಂದ ಬಳಲುತ್ತಿದ್ದ ತಾಯಿಗೆ ಯಶಸ್ವಿ ಚಿಕಿತ್ಸೆ ನೀಡಿದ ಜೀವ ಕಾಪಾಡಿದ ಬಸವೇಶ್ವರ ಆಸ್ಪತ್ರೆ ವೈದ್ಯರು

ಕಲಬುರಗಿ: ಹೈದ್ರಾಬಾದ ಕರ್ನಾಟಕ ಶಿಕ್ಷಣ ಸಂಸ್ಥೆಯ ಬಸವೇಶ್ವರ ಬೋಧನಾ ಹಾಗೂ ಸಾರ್ವಜನಿಕ...

ಕಲಬುರಗಿ| ಕಾಳ‌ ಸಂತೆಯಲ್ಲಿ ಸಿಲಿಂಡರ್ ಮಾರಾಟವಾದರೆ ಡಿಸ್ಟ್ರಿಬೂಟರ್ ಮೇಲೆ ಕ್ರಮ: ಜಿಲ್ಲಾಧಿಕಾರಿ ಇಕ್ರಮ್‌ ಶರೀಫ್

ಕಲಬುರಗಿ: ಮದ್ಯ ಪ್ರಾಚ್ಯ ದೇಶದಲ್ಲಿನ‌ ಬಿಕ್ಕಟ್ಟಿನ ನಡುವೆ ಜಿಲ್ಲೆಯಲ್ಲಿ ಎಲ್ಲಿಯೆ ಕಾಳ...